HomeUncategorizedರೈತರು ಸ್ವಾವಲಂಬಿಯಾಗಿ ವಿಕಸಿತ ಭಾರತ ಸಂಕಲ್ಪಕ್ಕೆ ಕೈ ಜೋಡಿಸಬೇಕು - ಈರಣ್ಣ ಕಡಾಡಿ

ರೈತರು ಸ್ವಾವಲಂಬಿಯಾಗಿ ವಿಕಸಿತ ಭಾರತ ಸಂಕಲ್ಪಕ್ಕೆ ಕೈ ಜೋಡಿಸಬೇಕು – ಈರಣ್ಣ ಕಡಾಡಿ

ಮೂಡಲಗಿ: ಪ್ರತಿಯೊಬ್ಬ ರೈತರು ತಮ್ಮ ತಮ್ಮ ಜಮೀನಗಳಲ್ಲಿನ ಮಣ್ಣು ಪರೀಕ್ಷೆ ಮಾಡಿಸಿ ವಿಜ್ಞಾನಿಗಳ ಸಲಹೆ ಸೂಚನೆ ಪಡೆದುಕೊಂಡು  ಮಿಶ್ರಬೆಳೆ ಪದ್ಧತಿ ಅನುಸರಿಸಿ ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಜೀವನ ಸಾಗಿಸುವದರೊಂದಿಗೆ  ಪ್ರಧಾನಿ ಮೋದಿ ಅವರ ವಿಕಸಿತ ಭಾರತದ ಸಂಕಲ್ಪಕ್ಕೆ ಕೈಜೋಡಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಅವರು ಶನಿವಾರದಂದು ತಾಲೂಕಿನ ಗುಜನಟ್ಟಿ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರ ಸರಕಾರ ಗ್ರಾಮೀಣ ಭಾಗದ ಜನರ ಬದುಕು ಉಜ್ವಲವಾಗಲೆಂದು ಪ್ರತಿಯೊಬ್ಬರಿಗೂ ಉಚಿತವಾಗಿ ೫ಕೆ.ಜಿ ಅಕ್ಕಿ, ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆ ಬಾಗಿಲಿಗೆ ನೀರು ಮತ್ತು ಉತ್ತಮ ಆರೋಗ್ಯಕ್ಕಾಗಿ ಆಯುಷ್ಮಾನ ಭಾರತ ಯೋಜನೆಯಡಿ ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುತ್ತದೆ. ಉಜ್ವಲ ಗ್ಯಾಸ್ ಯೋಜನೆಯಲ್ಲಿ ಉಚಿತ್ ಗ್ಯಾಸ್ ಮತ್ತು ರಿಯಾಯಿತಿ ದರದಲ್ಲಿ ಗ್ಯಾಸ್ ವಿತರಣೆ ಮಾಡಲಾಗುತ್ತಿದ್ದು ಪ್ರತಿಯೊಬ್ಬರು ಸರಕಾರದ ಯೋಜನೆಗಳ ಬಗ್ಗೆ ಚಿಂತನಶೀಲರಾಗಿ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ದಿಗೆ ೩೬೦ ಕೋಟಿ ರೂಪಾಯಿ  ಹಣ ಬಿಡುಗಡೆ ಮಾಡಿದ್ದಾರೆ ಹಾಗೂ ಎಲ್ಲ ವರ್ಗದವರು ವಿಮಾನದಲ್ಲಿ ಪ್ರಯಾಣ ಮಾಡಲೆಂದು ವಿಮಾನ ಪ್ರಯಾಣ ದರವನ್ನು ಕಡಿಮೆ ಮಾಡಲಾಗಿದೆ ಎಂದ ಅವರು ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಅರ್ಥ ವ್ಯವಸ್ಥೆ ಸುಧಾರಿಸಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತವು ಅಮೇರಿಕಾ, ಚೀನಾಗಳನ್ನು ಹಿಂದಿಕ್ಕಲಿದೆ ಎಂದು ಈರಣ್ಣ ಕಡಾಡಿ ವಿಶ್ವಾಸ ವ್ಯಕ್ತಪಡಿಸಿದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಈ ಸಮಯದಲ್ಲಿ ಸಂಸದ ಈರಣ್ಣ ಕಡಾಡಿ ಅವರು ಫಲಾನುಭವಿಗಳಿಗೆ ಗ್ಯಾಸ್ ಮತ್ತು ರಿಯಾಯಿತಿಯ ಸಾಲದ ಚೆಕ್‌ಗಳನ್ನು ವಿತರಿಸಿದರು.  

ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷ ಲಕ್ಷ್ಮಣ ಕಂಬಳಿ, ಸದಸ್ಯರಾದ  ಮತ್ತೇಶ ಗುಜನಟ್ಟಿ, ಕೆನರಾ ಬ್ಯಾಂಕ ವ್ಯವಸ್ಥಾಪಕ ಬುರಾನ ಜಮಖಂಡಿ, ವಿವಿಧ ಇಲಾಖೆಯ ಅಧಿಕಾರಿಗಳಾದ ರಮೇಶ ಹಿಪ್ಪರಗಿ, ಬಸು ಬೇವಿನಗಿಡದ, ವಿಜಯ ವಡೇನಿ, ಅಭಿನವಕುಮಾರ, ಯಲ್ಲೇಶಕುಮಾರ ಹುಕ್ಕೇರಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ರವಿ ಮರೆನ್ನವರ,  ಗ್ಯಾಸ ವಿತರಕರಾದ ಅನೀಲ ಸುಣಧೋಳಿ, ಪ್ರಮುಖರಾದ  ಬಸವರಾಜ ಕತ್ತಿ,  ಉಮೇಶ ಜಡಗಪ್ಪಗೋಳ, ಗುರು ಗಂಗಣ್ಣವರ, ಶಂಭುಲಿಂಗ ಮುಕ್ಕನ್ನವರ, ಮುತ್ತೆಪ್ಪ ಗುಜನಟ್ಟಿ, ಚಿದಾನಂದ ತೆಗ್ಗಿ ಸೇರಿದಂತೆ ರೈತರು, ಮಹಿಳೆಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group