ಉಪಚುನಾವಣೆಯಲ್ಲಿ ಭಯಮುಕ್ತ ವಾತಾವರಣ ನಿರ್ಮಾಣ

Must Read

ಸಿಂದಗಿ ಅ 30 ರಂದು ನಡೆಯುವ ಉಪ ಚುನಾವಣೆಗೆ ಪೂರ್ವ ಸಿದ್ದತೆಗಾಗಿ ಸುಮಾರು 22 ದಿನಗಳಿಂದ ಹಗಲಿರುಳು ಎನ್ನದೇ 101 ಗ್ರಾಮಗಳ ಪೈಕಿ ಆಲಮೇಲ ದೇವಣಗಾಂವ, ಮೋರಟಗಿ, ತಾಂಬಾ, ಸಿಂದಗಿ, ಗೋಲಗೇರಿ ಬಾಗಗಳಲ್ಲಿ ಮತದಾರರಲ್ಲಿ ಭಯಮುಕ್ತ ಮತದಾನ ಮಾಡಿ ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಸಂದೇಶ ಮೂಡಿಸುವ ನಿಟ್ಟಿನಲ್ಲಿ ಪೊಲೀಸ ಪರೇಡ್ ನಡೆಸಿ ಜಾಗೃತಿ ಮೂಡಿಸಲಾಗಿದೆ ಇಲ್ಲಿಯವರೆಗೆ ಯಾವುದೇ ಪಕ್ಷದಿಂದ ಗಲಭೆಗಳು ಕಂಡು ಬಂದಿಲ್ಲ. ನಾಳೆ ನಡೆಯುವ ಮತದಾನವು ಕೂಡಾ ಶಾಂತಿಯುತವಾಗಿ ನಡೆಯಲು ಬಿಗಿ ಬಂದೋಬಸ್ತ ಏರ್ಪಡಿಸಲಾಗಿದೆ ಎಂದು ಇಂಡಿ ಡಿವೈಎಸ್‍ಪಿ ಶ್ರೀಧರ ದಡ್ಡಿ ಹೇಳಿದರು.

ಪಟ್ಟಣದ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಒಟ್ಟು 2.34.309 ಮತದಾರರು 297 ಭೂತಗಳಿಗೆ 533 ಪೊಲೀಸ ಸಿಬ್ಬಂದಿ, ಕೆಎಸ್‍ಆರ್‍ಪಿ 150, ಶಸಸ್ತ್ರ ಪಡೆ 100 ಜನ, ಆರ್ಮಿ 200 ಸಿಬ್ಬಂದಿ ಸೇರಿ ಒಟು 980 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. 22 ದಿನಗಳಲ್ಲಿ ಕಾಂಗ್ರೆಸ್ 12, ಬಿಜೆಪಿ 9, ಜೆಡಿಎಸ್ 4 ಇತರೆ 4 ಹೀಗೆ ಆಯಾ ಭಾಗದ ಸೆಕ್ಟರ ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆಯಡಿಯಲ್ಲಿ 28 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಲ್ಲದೆ ಅಬಕಾರಿ ಇಲಾಖೆ 17 ಕಡೆಗಳಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಈ ಭದ್ರತೆಗೆ 22 ಮೊಬಾಯಿಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಎಲ್ಲೇ ಗಲಭೆ ಮತ್ತು ಮತದಾನಕ್ಕೆ ಒತ್ತಡ ಅಥವಾ ಯಾವುದೇ ರೀತಿಯಲ್ಲಿ ತೊಂದರೆ ಕೊಡುತ್ತಿದ್ದರೆ ಅದನ್ನು ತಿಳಿಸಿದ 15 ನಿಮಿಷಗಳಲ್ಲಿ ಅಲ್ಲಿಗೆ ಭೇಟಿ ನೀಡಿ ಅಲ್ಲಾಗುತ್ತಿರುವ ಅನಾಹುತಗಳನ್ನು ತಪ್ಪಿಸಿ ತಕ್ಷಣ ದೂರು ಸಲ್ಲಿಸಬೇಕು. ಮತದಾನ ಕಟ್ಟಡ ಒಳಗಡೆ ಮೊಬಾಯಿಲ್ ತರಕೂಡದು ಈ ಕ್ಷೇತ್ರ 57 ಅತೀ ಸೂಕ್ಷ್ಮ ಮತಗಟ್ಟೆ ಪ್ರದೇಶವೆಂದು ಗುರುತಿಸಲಾಗಿದ್ದು ಅಲ್ಲಿ ಬಿಗಿ ಭದ್ರತೆ ಏರ್ಪಡಿಲಾಗಿದೆ ಎಂದು ತಿಳಿಸಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group