ಬೀದರ – ಮುಖ್ಯಮಂತ್ರಿ ಗಳೇ ಗ್ಯಾರಂಟಿಗಳ ಕುರಿತು ಕೋಟಿಗಟ್ಟಲೇ ಜಾಹೀರಾತು ಕೊಟ್ಟು ಪ್ರಸಿದ್ಧರಾಗಲು ಸಾಧ್ಯವಿಲ್ಲ. ತೆಲಂಗಾಣದಲ್ಲಿ ಚಂದ್ರಶೇಖರ ರಾವ್, ಆಂಧ್ರದಲ್ಲಿ ಜಗನ್ ಮೋಹನ ರೆಡ್ಡಿ ನಿಮಗಿಂತ ಹೆಚ್ಚು ಗ್ಯಾರಂಟಿ ಕೊಟ್ಟರೂ ಕಾಲಿನಲ್ಲಿ ಕಟ್ಟಿಗೆ ಕಟ್ಟಿಕೊಂಡು ಹೋದರು. ಮುಖ್ಯಮಂತ್ರಿ ಗಳೇ ಅದನ್ನು ಬಿಡಿ ರೈತರಿಗೆ ಪರಿಹಾರ ನೀಡಿ ನಿಮಗೆ ಕೈ ಮುಗೀತೀನಿ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಹೇಳಿದರು.
ರೈತರ ಪರಿಹಾರ ಕುರಿತಂತೆ ಅರೆ ಬೆತ್ತಲೆ ಪ್ರತಿಭಟನೆ ಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು .
ರೈತರ ಹೊಟ್ಟೆ ತುಂಬಿಸುವ ಕೆಲಸ ಮಾಡಿ ಇಲ್ಲವಾದರೆ ಅವರ ಶಾಪಕ್ಕೆ ಗುರಿಯಾಗುವಿರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಆರೆಸ್ಸೆಸ್ ಅನ್ನು ಬ್ಯಾನ್ ಮಾಡಲಿಕ್ಕೆ ಸಾಧ್ಯವಿಲ್ಲ ಅದು ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. ನಿಷೇಧ ಮಾಡ್ತೀನಿ ಅನ್ನೋರು ಹುಟ್ಟುವ ಮೊದಲೇ ಆರೆಸ್ಸೆಸ್ ಇತ್ತು ಎಂದು ಟಾಂಗ್ ನೀಡಿದರು.
ಚಡಿಯೇಟು ತಿಂದ ನಂತರ ಮಾತನಾಡಿದ ಅವರು, ನಾನು ತಿಂದ ಏಳೆಂಟು ಚಡಿಯೇಟಿನ ಬಾಸುಂಡೆಗಳು ಮಾಯವಾಗುತ್ತವೆ ಆದರೆ ಅತಿವೃಷ್ಟಿಯಿಂದ ರೈತರ ಬದುಕಿಗೆ ವಾಸಿಯಾಗದ ಬರೆ ಎಳೆದಂತಾಗಿದೆ ಇಷ್ಟೆಲ್ಲ ಹಾನಿಯಾದರೂ ಸರ್ಕಾರ ರೈತರ ಕಷ್ಟ ಆಲಿಸಲು ಬಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು
ಬಿಜೆಪಿಗರು ಗೋಮೂತ್ರ ಯಾಕೆ ಕುಡಿಯಲ್ಲ ಎಂಬ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶರಣು ಸಲಗರ, ನಾನು ಗೋಮೂತ್ರ ಕುಡಿಯುತ್ತೇನೆ ಅದನ್ನು ಕುಡಿದೇ ಬೆಳೆದಿದ್ದೇನೆ. ಅಷ್ಟೇ ಯಾಕೆ ಅಧಿವೇಶನದಲ್ಲಿ ಎಲ್ಲರ ಎದುರಿಗೇ ಕುಡಿಯುತ್ತೇನೆ ಎಂದರು.
ವರದಿ : ನಂದಕುಮಾರ ಕರಂಜೆ, ಬೀದರ