ಬಾಗಲಕೋಟೆ – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಯಂತೆ ಕನ್ನಡ ಪರಂಪರೆ, ಇತಿಹಾಸ, ಸಾಹಿತ್ಯ.ಸಂಸ್ಕೃತಿ, ಹಿರಿಮೆಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರಾದ ಶಿವರಾಜ್ ತಂಗಡಗಿ ಅವರು ಇಲಾಖೆಗೆ ಹೊಸ ರೂಪ ನೀಡುವ ಮೂಲಕ ಸಂಚಲನವನ್ನು ಸೃಷ್ಟಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದ ಅಧ್ಯಕ್ಷ ಹಾಗೂ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ.ಪೂ.ಶರಣಬಸವ ಶಾಸ್ತ್ರಿಗಳು ಹೇಳಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಶಿವರಾಜ ತಂಗಡಗಿ ಅವರು ಸಚಿವರಾದ ಮೇಲೆ ಕಲಾವಿದರು ಮತ್ತು ಸಾಹಿತಿಗಳಿಗೆ ನೀಡುತ್ತಿದ್ದ ಮಾಸಾಶನವನ್ನು ಹೆಚ್ಚಳ ಮಾಡಿಸಿದ್ದಾರೆ.ಕಲಾವಿದರ ಮಾಶಾಸನವು ರೂ.2500 ಹೆಚ್ಚಳ ಮಾಡಲಾಗಿದೆ. ಕಲಾವಿದರ ಮಾಸಾಶನವು ಹೆಚ್ಚಾಗಬೇಕೆಂಬ ಬೇಡಿಕೆಯನ್ನು ಈಡೇರಿಸಿದ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ಹೇಳುವುದು ಸವ೯ಕಲಾವಿದರ ಆದ್ಯ ಕರ್ತವ್ಯ .ಹಾಗಾಗಿ ಮಾಸಾಶನ ಪಡೆಯುತ್ತಿರುವ ಸವ೯ ಕಲಾವಿದರು ವಿವಿಧ ಸಾಂಸ್ಕೃತಿಕ ಸಂಘಟನೆಗಳ ಮುಖಂಡರು ಸೋಮವಾರ ದಿ.7ರಂದು ಮುಂಜಾನೆ 10-30 ಕ್ಕೆ ಜಿಲ್ಲಾಡಳಿತದ ಮುಂದೆ ಸೇರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳನ್ನು ಗೌರವಿಸಿ ಸರ್ಕಾರಕ್ಕೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸವ೯ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಣಿ ಪವಿತ್ರ ಜಕ್ಕಪ್ಪನವರ್, ಉಪಾಧ್ಯಕ್ಷ ಚಿನ್ನಪ್ಪಗೌಡ ಗಿಡ್ಡಪ್ಪಗೋಳ, ಮುಖಂಡರಾದ ಯಲ್ಲಪ್ಪ ಪೂಜಾರ, ಈಶ್ವರ ಹೊರಟ್ಟಿ, ಶಂಕರ ಲಮಾಣಿ, ಶಂಕರೆಪ್ಪ ತಂಬಾಕದ, ಪಾಂಡರಂಗ ಕನಸಗೇರಿ, ರಾಮಣ್ಣ ಗಲಗಲಿ, ಪರಯ್ಯ ಮಠಪತಿ, ಸದಾಶಿವ ಅಗೋಜಿ ಮುಂತಾದವರು ಇದ್ದರು