ಹಾಸನದ ಹಳೆ ಈದ್ಗ ಮೈದಾನ, ಹೊಸ ಲೈನ್ ರಸ್ತೆಯಲ್ಲಿರುವ “ಶಾಹೀನ್ ಲರ್ನ್ ಅಕಾಡೆಮಿ ಶಾಲೆ” ಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಸಾಹಿತಿ, ಶಿಕ್ಷಕಿ,ಸಾಮಾಜಿಕ ಚಿಂತಕಿ, ಪತ್ರಕರ್ತೆ ಹಾಗೂ ಸಂಸ್ಥಾಪಕ ಅಧ್ಯಕ್ಷರಾದ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಹೆಚ್. ಎಸ್. ಪ್ರತಿಮಾ ಹಾಸನ್ ರವರನ್ನು ಆಹ್ವಾನಿಸಿ ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರನ್ನಾಗಿ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಡಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಕನ್ನಡವನ್ನು ಉಳಿಸುವುದೇ ದೊಡ್ಡ ಸವಾಲಾಗಿಬಿಟ್ಟಿದೆ. ಅದರ ಉಳಿವಿನತ್ತ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಕರುನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರು ತನ್ನ ಜನ್ಮದ ಋಣ ತೀರಿಸಿಕೊಳ್ಳಬೇಕೆಂದರೆ ಕರುನಾಡು ಹಾಗೂ ಕನ್ನಡಕ್ಕೆ ಋಣಿಯಾಗಿರಬೇಕು. ಕನ್ನಡ ನಾಡು ನುಡಿಯನ್ನು ಉಳಿಸಬೇಕಾದರೆ ನಮ್ಮ ಮನೆಗಳಿಂದಲೇ ಕನ್ನಡವನ್ನು ಹೇಳಿಕೊಡುತ್ತ ಮಾತನಾಡಬೇಕು ಸಾವಿರಾರು ವರ್ಷ ಇತಿಹಾಸವನ್ನು ಹೊಂದಿರುವ ಕನ್ನಡಕ್ಕೆ ತನ್ನದೇ ಆದ ಅಸ್ತಿತ್ವವನ್ನು ಒಳಗೊಂಡಿದೆ. ಕನ್ನಡ ಭಾಷೆಗೆ ಯಾವ ಧರ್ಮವು ಇಲ್ಲ ಯಾವ ಜಾತಿಯೂ ಇಲ್ಲ. ಕರುನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಸಹ ಕನ್ನಡವನ್ನು ಮಾತನಾಡುತ್ತಾ ಕನ್ನಡದ ಭಾಷೆಯ ಮಹತ್ವ ತಿಳಿದು ಕನ್ನಡ ಬರದವರಿಗೆ ಹೇಳಿಕೊಡುವ ಕೆಲಸವನ್ನು ಮಾಡಬೇಕು. ಇಂದು ಈ ಶಾಲೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಮಕ್ಕಳಿಗೆ ಕರ್ನಾಟಕದ ಹಾಗೂ ಕನ್ನಡದ ಮಹತ್ವವನ್ನು ತಿಳಿಸುತ್ತಾ ಶಾಲೆಯ ಅಭಿವೃದ್ಧಿಯನ್ನು ಹೊಂದಲು ಪ್ರಯತ್ನಪಡುತ್ತಿರುವ ಕಾರ್ಯವು ಶ್ಲಾಘನೀಯ ಎಂದು ಪ್ರತಿಮಾ ಹಾಸನ್ ತಿಳಿಸಿದರು.
ಶಾಲೆಯ ಮಕ್ಕಳಿಗೆ ಕರ್ನಾಟಕದ ಹಾಗೂ ಕನ್ನಡದ ಬಾವುಟದ ಚಿತ್ರವನ್ನು ಬಿಡಿಸಲು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ ಅತ್ಯುತ್ತಮವಾಗಿ ಬಿಡಿಸಿದಂತ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿ ಎಲ್ಲ ಮಕ್ಕಳಿಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಶಾಲೆಯ ಎಲ್ಲ ಮಕ್ಕಳಿಗೂ ಸಿಹಿಯನ್ನು ಹಂಚಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ನಸರುಲ್ಲಾ ಮುಸಮಿಲ್ ಪಾಷ ಸಂಯೋಜಕರು,ಅಧ್ಯಕ್ಷರು ಇಂಥಿಯಸ್ ಪಾಷ , ಷಮಾ ಅಂಬ್ರಿನ್, ಶಿಕ್ಷಕ ವೃಂದವರು, ಇನ್ನು ಹಲವಾರು ಉಪಸ್ಥಿತರಿದ್ದರು.

