ಸಿಂದಗಿ; ಈಗಿರುವ ೧೪ ತಿಂಗಳ ಅವಧಿಯ ಅಧಿಕಾರ ಅತೀ ಕ್ಲಿಷ್ಟಕರ ಅವಧಿಯಲ್ಲಿ ಶಾಸಕರ ಹಾಗೂ ಎಲ್ಲ ಸದಸ್ಯರ ಸಹಕಾರದಿಂದ ಪ್ರಾಮಾಣಿಕವಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧನೆಯಾಗುವ ಅಧಿಕಾರ ನಡೆಸುವೆ ಅದಕ್ಕೆ ಸಾರ್ವಜನಿಕರ ಸಹಕಾರವು ಬಹುಮುಖ್ಯ ಎಂದು ನೂತನ ಪುರಸಭೆ ಅದ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಗೆಳೆಯರ ಬಳಗ ಹಾಗೂ ಪಂಚಮಸಾಲಿ ಸಮಾಜದವತಿಯಿಂದ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ೧೦ ಸಾವಿರ ಮನೆಗಳಲ್ಲಿ ಬರೀ ೨೫೦೦ ಮನೆಗಳಿಗೆ ಮಾತ್ರ ಪರವಾನಿಗೆ ಪಡೆದ ನಳಗಳಿವೆ ಇನ್ನುಳಿದವುಗಳು ಅಕ್ರಮವಾಗಿವೆ ಅದಕ್ಕೆ ಅವುಗಳ ಸಕ್ರಮಗೊಳಿಸಿಕೊಳ್ಳಲು ೪ ಜನ ಸಿಬ್ಬಂದಿಯನ್ನು ಕಂಪ್ಯೂಟರ ಸಮೇತ ನೇಮಕ ಮಾಡಿದ್ದೇವೆ ಸಾರ್ವಜನಿಕರು ಸಹಕರಿಸಿ ಎಲ್ಲರು ನೊಂದಣಿ ಮಾಡಬೇಕು ಮತ್ತು ಉತಾರಿಯ ಬಗ್ಗೆ ಎಲ್ಲೆಡೆ ಸಮಸ್ಯೆ ಹೆಚ್ಚು ಕೇಳಿ ಬರುತ್ತಿದ್ದು ಅದಕ್ಕೆ ಕಂಪ್ಯೂಟರ ಉತಾರೆ ಸಲುವಾಗಿ ಎಲ್ಲರು ಸೂಕ್ತ ದಾಖಲಾತಿಗಳನ್ನು ಕೊಟ್ಟು ಮನೆಗೆ ಬಂದ ಸಿಬ್ಬಂದಿ ಜೊತೆ ಸಹಕಾರ ನೀಡಿ ದೃಢಿಕರಣಗೊಳೀಸಿಕೊಳ್ಳಬೇಕು ಇದರಿಂದ ಪುರಸಭೆಗೆ ಆದಾಯ ಹೆಚ್ಚಾಗುತ್ತದೆ ಇದರಿಂದ ಪಟ್ಟಣದ ಸುಧಾರಣೆ ಮಾಡಲು ಸಾದ್ಯವಾಗುತ್ತದೆ ಇಂತಹ ಹತ್ತು ಹಲವಾರು ಸಮಸ್ಯೆಗಳು ಕೇಳಿ ಬಂದಿದ್ದು ಕೆಲವೆ ದಿನಗಳಲ್ಲಿ ಪರಿಹಾರ ಕಂಡುಕೊಳ್ಳುವೆ. ರಸ್ತೆ ಮಧ್ಯದಲ್ಲಿ ಡಿವೈಡರ್‌ಗಳ ಮೇಲೆ ಹೊಟೆಲಗಳಲ್ಲಿನ ಮಲೀನ ನೀರು ಚೆಲ್ಲುವ ಪರಿಪಾಠ ಇಟ್ಟುಕೊಂಡಿದ್ದು ಅದನ್ನು ತಪ್ಪಿಸುವ ಸಲುವಾಗಿ ಎಲ್ಲ ಹೊಟೇಲ ಮಾಲೀಕರಿಗೆ ನೋಟಿಸ್ ನೀಡುವಂತೆ ಸೂಚಿಸಿದ್ದು ಅದಕ್ಕೂ ಸಹ ತೀವ್ರಗತಿಯಲ್ಲಿ ಕ್ರಮ ಜರುಗಿಸಲಾಗುವುದು ಎಲ್ಲರು ನನ್ನ ಜೊತೆ ಸಹಕಾರ ನೀಡಿದ್ದಾದಲ್ಲಿ ಪಟ್ಟಣದ ಸೌಂದರ್ಯೀಕರಣ ಮಾಡಲು ಸಾಧ್ಯ ಎಂದರು.
ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಮಾತನಾಡಿ, ಕಳೆದ ೩೦ ವರ್ಷಗಳಿಂದ ದಿ.ಎಂ.ಸಿ.ಮನಗೂಳಿಯವರ ಒಡನಾಡಿಯಾಗಿ ಕೆಲಸ ಮಾಡಿದ್ದು ಈ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ನನ್ನ ರಾಜಕೀಯಕ್ಕೆ ಪ್ರವೇಶ ಹೊಂದಿದ್ದಾಗಿನಿಂದ ಅವರ ಅಭಿಮಾನಿಯಾಗಿರುವ ನನಗೆ ಪುರಸಭೆಗೆ ಸ್ಪರ್ಧಿಸಲು ಮೂರು ಬಾರಿ ಜೆಡಿಎಸ್‌ನಿಂದ ಟಿಕೇಟ ಕೊಟ್ಟು ಆಯ್ಕೆ ಮಾಡುವಲ್ಲಿ ಅವರ ಪ್ರಯತ್ನ ಮರೆಯುವಂತಿಲ್ಲ. ಅವರ ಕನಸ್ಸಿನಂತೆ ನನಗೆ ಇಂದು ಅಧಿಕಾರ ದೊರೆತಿದೆ ಶಾಸಕರ ಹಾಗೂ ಎಲ್ಲ ಸದಸ್ಯರ ಒಡನಾಡಿಯಾಗಿ ಅಧ್ಯಕ್ಷರಿಗೆ ಹೆಗಲುಕೊಟ್ಟು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸತತ ಮೂರು ಬಾರಿ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಇರ್ವರಿಗೆ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದು ಸಾಧನೆಯೇ ಸರಿ ಅವರ ಅಧಿಕಾರಾವಧಿಯಲ್ಲಿ ಕಳಂಕ ರಹಿತ ಅಧಿಕಾರ ನಡೆಸಲಿ ಎಂದು ಶುಭ ಹಾರೈಸಿದರು.
ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕ ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ.ಕುರುಡೆ, ಬಸಯ್ಯ ಹಿರೇಮಠ ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಚೆನ್ನು ಹೊಡ್ಲ, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ, ಎಂ.ಎಸ್.ಪಾಟೀಲ ಕೊರಳ್ಳಿ, ಚಂದ್ರಶೇಖರ ನಾಗರಬೆಟ್ಟ, ಕಸಾಪ ಅಧ್ಯಕ್ಷ ಶಿವು ಬಡಾನೂರ, ಶಿವು ಸಬರದ, ಮಲ್ಲನಗೌಡ ಪಾಟೀಲ ಇಬ್ರಾಹೀಂಪುರ, ಪಂಡಿತ ಯಂಪೂರೆ, ಸಂಗನಗೌಡ ಪಾಟೀಲ ಅಗಸಬಾಳ, ಗುರು ಬಸರಕೋಡ, ಆರ್.ಆರ್.ಪಾಟೀಲ, ಶಂಕರ ಕುರುಡೆ, ಶಿವರಾಜ ಪೊ.ಪಾಟೀಲ, ರಾಮಚಂದ್ರ ಕಲಬುರ್ಗಿ, ಮಹಾಂತೇಶ ನೂಲಾನವರ, ಸೇರಿದಂತೆ ಹಲವರು ಇದ್ದರು.
ಆನಂದ ಶಾಬಾದಿ ಸ್ವಾಗತಿಸಿ ನಿರೂಪಿಸಿದರು.