ಸವದತ್ತಿ: ತಾಲೂಕಿನ ಬೆಡಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ಭೇಟಿ ನೀಡಿ ಬಿಸಿಯೂಟದ ಸಿದ್ಧತೆ ಪರಿಶೀಲಿಸಿದರು ಹಾಗೂ ಮಕ್ಕಳು ಮಾಡಿದ ಚಟುವಟಿಕೆಗಳನ್ನು ವೀಕ್ಷಿಸಿದರು.
ಮಕ್ಕಳು ಮಾಡಿದ ಆಧಾರಗಳು ಚಟುವಟಿಕೆಯನ್ನು ಪರಿಶೀಲಿಸಿ ಕೆಲವು ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದರು. ಮಕ್ಕಳು ಕೂಡ ಅಷ್ಟೇ ಕುತೂಹಲಭರಿತರಾಗಿ ಉತ್ತರಿಸಿದರು. ಈ ಸಂದರ್ಭದಲ್ಲಿ ಉಗರಗೋಳ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಕೆ.ಎಚ್ ಮುದ್ದಾಪುರ್, ಶಾಲೆಯ ಮುಖ್ಯೋಪಾಧ್ಯಾಯರಾದ ಬಿ. ಎ. ವಾಶಪ್ಪನವರ, ಹಿರಿಯ ಶಿಕ್ಷಕರಾದ ಆರ್. ಎಚ್ ಕಾಳಿ ಹಾಗೂ ಸಹ ಶಿಕ್ಷಕರಾದ ಎಮ್. ವ಼ಿ ಬೆಳವಡಿ, ಶ್ರೀಮತಿ ಎಂ.ಬಿ ಹುಡೇದ, ಶ್ರೀಮತಿ ಪಿ. ಜಿ ಉಡಿಕೆರೆ ಶ್ರೀಮತಿ ಎನ್. ಎಮ್ ಸಾಂಗ್ಲಿಕರ್ ಶ್ರೀಮತಿ ಎ. ಎಚ್ ಕನಕೂರ್ ಉಪಸ್ಥಿತರಿದ್ದರು.