ನಿಪ್ಪಾಣಿ : ನಗರದ ರಸ್ತೆಗಳು ಹದಗೆಟ್ಟಿದ್ದು ಅವುಗಳನ್ನು ದುರಸ್ತಿ ಮಾಡಿಸಬೇಕೆಂದು ಶಹರ ಮಧ್ಯವರ್ತಿ ರಿಕ್ಷಾ ಚಾಲಕ-ಮಾಲಕ ಸಂಘಟನೆಯ ವತಿಯಿಂದ ಪಾಲಿಕೆ ಆಯುಕ್ತರಿಗೆ ಮಮನವಿಸಲ್ಲಿಸಲಾಯಿತು.
ನಗರದಲ್ಲಿ ಹಲವು ಕಡೆ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಸಾರ್ವಜನಿಕರು ಪರದಾಡುವಂತಾಗಿದೆ. ರಸ್ತೆ ರಿಪೇರಿಗಾಗಿ ಎಷ್ಟೋ ಸಲ ಮನವಿ ನೀಡಿದ್ದರೂ ನಗರಸಭೆಯವರು ಇದುವರೆಗೂ ಯಾವುದೇ ದುರಸ್ತಿ ಕಾರ್ಯ ಕೈಗೊಂಡಿಲ್ಲ.
ಮುನ್ಸಿಪಲ್ ಹೈಸ್ಕೂಲ್‌ನಿಂದ ಭೀಮನಗರ, ಬಸವೇಶ್ವರ ಪ್ರತಿಮೆಯಿಂದ ಲಖನಾಪುರ ರಸ್ತೆವರೆಗೆ, ಖಂಡೋಬಾ ದೇವಸ್ಥಾನದಿಂದ ಸಂಪೂರ್ಣ ಜತ್ರಾಟ ವೇಸ, ವ್ಯಾಯಾಮ ಶಾಲೆಯಿಂದ ಲೇಟಕ್ ಕಾಲೋನಿಯವರೆಗೆ, ಚವಾಣ್ ಡಾಕ್ಟರನಿಂದ ತಹಶೀಲ್ದಾರ್ ಪ್ಲಾಟ್‌ವರೆಗಿನ ರಸ್ತೆ, ಹಾಲಿನಿಂದ ಹರಿನಗರವರೆಗಿನ ರಸ್ತೆ, ಕೋಠಿವಾಲೆ ಕಾರ್ನರ್ ನಿಂದ ಚೆನ್ನಮ್ಮ ವೃತ್ತದವರೆಗಿನ ರಸ್ತೆ, ಸಂಭಾಜಿ ನಗರದಿಂದ ಶಿಂದೆ ನಗರ ರಸ್ತೆಯವರೆಗೆ, ದರ್ಗಾ ಪರಿಸರದಲ್ಲಿನ ಎಲ್ಲ ರಸ್ತೆಗಳು, ಹಳೆ ಮೋಟರ್ ಸ್ಟ್ಯಾಂಡದಿಂದ ಶಿವಾಜಿ ಚೌಕವರೆಗಿನ ರಸ್ತೆ ಹಾಗೂ ಪಾರ್ವತಿ ಕಾರ್ನರನಿಂದ ಹಾಲಸಿದ್ದನಾಥ ದೇವಸ್ಥಾನದವರೆಗಿನ ರಸ್ತೆ ಹೀಗೆ ಎಲ್ಲಾ ರಸ್ತೆಗಳು ತಗ್ಗು ದಿನ್ನೆಗಳಿಂದ ತುಂಬಿವೆ. ಸಾರ್ವಜನಿಕರು ಸಂಚಾರಕ್ಕೆ ಪರದಾಡುತ್ತಿದ್ದರೂ ನಗರಸಭೆ ಕಣ್ಣು ಮುಚ್ಚಿ ಕುಳಿತಿದೆ. ರಸ್ತೆಗಳನ್ನು ಆದಷ್ಟು ಬೇಗ ದುರಸ್ತಿಗೊಳಿಸ ಬೇಕು ಎಂದು ಮನವಿ ಮಾಡಲಾಗಿದೆ.
ಒಂದುವೇಳೆ ಸಾಧ್ಯವಾಗದೆ ಹೋದರೆ ರಿಕ್ಷಾ ಚಾಲಕ ಮಾಲಕ ಸಂಘಟನೆ ಹಾಗೂ ನಾಗರಿಕರು ನಗರ ಪಾಲಿಕೆ ಎದುರುಗಡೆ ರಸ್ತೆ ತಡೆ ಆಂದೋಲನ ಮಾಡಲಾಗುವುದು. ಆದ್ದರಿಂದ ಆದಷ್ಟು ಬೇಗ ರಸ್ತೆ ದುರಸ್ತಿಗೊಳಿಸಲು ಆಗ್ರಹಿಸಲಾಗಿದೆ.