ಬೆಂಗಳೂರು – ಸಸ್ಯ ಸಂಜೀವಿನಿ ಔಷಧಿ ಹಾಗೂ ಸುಗಂಧಿ ಸಸ್ಯಗಳ ಪಾಲುದಾರರ ಒಕ್ಕೂಟದ ಪ್ರಥಮ ಸಭೆ ಬೆಂಗಳೂರಿನ ಮಲ್ಲೇಶ್ವರಂ ದ “ಸಂಸ್ಕೃತಿ ಕೇಂದ್ರ”ದಲ್ಲಿ ದಿ. 20 ರಂದು ಬೆಳಿಗ್ಗೆ 10-30 ಕ್ಕೆ ಜರುಗಿತು.
ಒಕ್ಕೂಟದ ರಚನೆಯ ಬಗ್ಗೆ, ನೋಂದಣಿ ಮಾಡಿಸುವ ಬಗ್ಗೆ, ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಬಗ್ಗೆ ವಿಸ್ತೃತ ಚರ್ಚೆ ಜರುಗಿದ ನಂತರ ಔಷಧಿ ಹಾಗೂ ಸುಗಂಧಿ ಸಸ್ಯಗಳ ಪಾಲುದಾರರಾದ ರೈತರು, ಎಫ್.ಪಿ.ಓ., ನೋಂದಾಯಿತ ಸಂಘ ಸಂಸ್ಥೆಗಳು, ಹಾಗೂ ಸಾಮಾನ್ಯ ಸದಸ್ಯರೆಂದು ನಾಲ್ಕು ವಿಧದ ಸದಸ್ಯತ್ವ ಮಾಡಿಕೊಳ್ಳಲು ತೀರ್ಮಾನಿಸಲಾಯಿತು.
9 ಜನರು ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಉದ್ದೇಶಿತ ಸಂಸ್ಥೆಯ ಆಡಳಿತ ನಡೆಸಿಕೊಂಡು ಹೋಗುವಂತೆ ಉಪನಿಯಮಗಳನ್ನು ರಚಿಸಲು ತೀರ್ಮಾನಿಸಲಾಯಿತು.
ಔಷಧಿ ಹಾಗು ಸುಗಂಧಿ ಸಸ್ಯಗಳನ್ನು ಬೆಳೆಯುವ ರೈತರ ಹಿತರಕ್ಷಣೆಗಾಗಿ ಸೃಷ್ಠಿಯಾಗಿರುವ ಈ ಒಕ್ಕೂಟವು, ಅಳಿವಿನಂಚಿನಲ್ಲಿರುವ ಹಾಗೂ ಬೇಡಿಕೆಯಲ್ಲಿರುವ ಸಸ್ಯಗಳ ಸಂರಕ್ಷಣೆ, ಸಸ್ಯಪಾಲನ ಕೇಂದ್ರಗಳನ್ನು ಸ್ಥಾಪಿಸಬಯಸುವ ರೈತರಿಗೆ ತಾಂತ್ರಿಕ ಬೆಂಬಲ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಬೆಂಬಲಗಳನ್ನು ಒದಗಿಸಿ, ರೈತರ ಆರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸುವುದರ ಜೊತೆಗೆ ಆಯುರ್ವೇದಿಕ ಔಷಧೀಗಳನ್ನು ಬಳಸುವ ಸರಳ ಉಪಾಯಗಳ ಮಾಹಿತಿಯನ್ನು ಜನಸಾಮಾನ್ಯರಿಗೆ ನೀಡಿ ಬೇಡಿಕೆ ಸೃಷ್ಟಿಸಲು ಒಕ್ಕೂಟವು ಶ್ರಮಿಸುತ್ತದೆ, ಆಸಕ್ತ ರೈತರಿಗೆ ತರಬೇತಿ ನೀಡಿ ಸ್ವಾವಲಂಬಿಯನ್ನಾಗಿಸಲು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ.
ಈ ಕುರಿತು ದಿನಾಂಕ 25 ಮತ್ತು 26 ರಂದು ಗದಗ ಜಿಲ್ಲೆಯ ಡೋಣಿ ಸಮೀಪದ ಕಪ್ಪತಗುಡ್ಡದ ಮಡಿಲಲ್ಲಿರುವಲ್ಲಿ ಶ್ರೀ ನಂದಿವೇರಿ ಸಂಸ್ಥಾನ ಮಠದಲ್ಲಿ ಚರ್ಚಿಸಿದನಂತರ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ, ಡಾ. ಜಗನ್ನಾಥರಾವ್ ಹಾಗೂ ಡಾ. ನಾಗಭೂಷಣರವರ ನೇತೃತ್ವದಲ್ಲಿ ಕಪ್ಪತಗುಡ್ಡದ ಕಾಡಿನಲ್ಲಿ ವಿಸ್ತೃತವಾಗಿ ಸಂಚರಿಸಿ ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳ ತಾಣ, ಅವುಗಳನ್ನು ಗುರುತಿಸಿ, ಹೆಸರಿಸಿ, ದಾಖಲೀಕರಿಸಿ, ರೈತರಿಗೆ ಪರಿಚಯಿಸಿ, ಅಭಿವೃದ್ಧಿಗೊಳಿಸಿ, ಆಸಕ್ತ ರೈತರಿಗೆ ಸಸಿಗಳನ್ನು ಪೂರೈಸಲು ನರ್ಸರಿ ಸ್ಥಾಪಿಸುವ ಕುರಿತು ಸಮಗ್ರ ಚರ್ಚೆ ನಡೆಸಲಾಗುವುದು.
ಆಸಕ್ತ ರೈತರು, ಎಫ.ಪಿ.ಓ ಗಳು, ಸಂಘ ಸಂಸ್ಥೆಗಳು ಹಾಗೂ ಸಾಮಾನ್ಯ ಸದಸ್ಯರು ಒಕ್ಕೂಟದ ಭಾಗವಾಗಿ ಪರಸ್ಪರ ಸಹಾಯ ಸಹಕಾರದಿಂದ ಅಭಿವೃದ್ಧಿ ಹೊಂದ ಬಯಸುವವರು ತಮ್ಮ ಹೆಸರು ಪ್ರಶಾಂತ ಜೋಶಿ ಇವರನ್ನು ಮೋಬೈಲ್ ಸಂಖ್ಯೆ 7483823202 ಗೆ ಕರೆಮಾಡಿ ನೋಂದಾಯಿಸಬಹುದಾಗಿದ್ದು,
ನವೆಂಬರ್ ಕೊನೆಯವಾರದಲ್ಲಿ ಬೆಂಗಳೂರಿನಲ್ಲಿ ಸಭೆ ಸೇರಲು ತೀರ್ಮಾನಿಸಲಾಯಿತು.
ಡಿಸೆಂಬರ ತಿಂಗಳ 8 ನೇ ತಾರೀಖಿನಂದು ಆಯೋಜಿಸಲಾಗುವ “ಕಪ್ಪತಗುಡ್ಡ ಉತ್ಸವ”ದಲ್ಲಿಯೇ ಒಕ್ಕೂಟದ ಲಾಂಚಿಂಗ್ ಮಾಡಬಹುದೇ ಎಂಬ ಕುರಿತ ಚರ್ಚೆಯಲ್ಲಿ ಬಹುತೇಕ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತು ಕಪ್ಪತಗುಡ್ಡ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು
ಡಾ. ಜಗನ್ನಾಥರಾವ, ಡಾ. ನಾಗಭೂಷಣ, ಭಾಲಚಂದ್ರ ಜಾಬಶೆಟ್ಟಿ, ಮಾಲತೇಶ, ದಿಲೀಪ, ಮಾರುತಿ ರಾವ್, ಪ್ರಶಾಂತ ಜೋಷಿ, ಪ್ರಕಾಶ, ಸತೀಶ, ಚಂದ್ರಶೇಖರ, ಉದಯಕುಮಾರ ಮುಂತಾದವರು ಉಪಸ್ಥಿತರಿದ್ದರು.
ಭಾಲಚಂದ್ರ ಜಾಬಶೆಟ್ಟಿ