- Advertisement -
ಬೀದರ – ಬೀದರ ಜಿಲ್ಲಾ ಪಂಚಾಯತ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಉಲ್ಟಾ ಮಾಡಿ ಹಾರಿಸಿದ ಪ್ರಸಂಗ ಜರುಗಿದ್ದು ಬೆಳಿಗ್ಗೆಯಿಂದ ಸಂಜೆವರೆಗೂ ರಾಷ್ಟ್ರಧ್ವಜ ಉಲ್ಟಾ ಹಾರಿಸಿ ಅವಮಾನ ಮಾಡಲಾಗಿದೆ.
ನಿನ್ನೆ ಇಡೀ ದಿನ ರಾಷ್ಟ್ರಧ್ವಜ ಉಲ್ಟಾ ಹಾರಾಡುತ್ತಿದ್ದರೂ ಜಿಲ್ಲಾಡಳಿತ ಗಾಢ ನಿದ್ದೆಯಲ್ಲಿದ್ದು ಇದರ ಕಾರ್ಯ ವೈಖರಿಗೆ ಕನ್ನಡಿ ಹಿಡಿದಂತಾಗಿದೆ.
- Advertisement -
ಜಿಲ್ಲಾ ಪಂಚಾಯತ ಅಧಿಕಾರಿಗಳಲ್ಲದೆ ಯಾವ ಸಿಬ್ಬಂದಿಗೂ ಕೂಡ ಈ ಬಗ್ಗೆ ಗಮನಕ್ಕೆ ಬಾರದಿರುವುದು ವಿಪರ್ಯಾಸ. ಈ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ಉಂಟಾಗಿದ್ದು ಇತ್ತೀಚೆಗೆ ಗ್ರಾಮ ಪಂಚಾಯತಿಗಳಲ್ಲಿ ಕೂಡ ಇಂತಹ ಎಡವಟ್ಟು ಕಂಡು ಬರುತ್ತಿವೆ ಎನ್ನಲಾಗಿದೆ.
ಸಾಯಂಕಾಲ ಜಿಲ್ಲಾ ಪಂಚಾಯತ ಅಧಿಕಾರಿ ಬಂದು ರಾಷ್ಟ್ರಧ್ವಜ ಕೆಳಗೆ ಇಳಿಸಿ ಮತ್ತೆ ರಾಷ್ಟ್ರ ಧ್ವಜ ಹಾರಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ