ಹಳ್ಳೂರ- ಗೋದಾವರಿ ಬೈಯೋರಿಫೈನರೀಜ್ ಲಿಮಿಟೆಡ್ ಸಮೀರವಾಡಿ ಮಜದೂರ ಯೂನಿಯನ್ ಕಚೇರಿಯಲ್ಲಿ 79 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಮಜದೂರ ಯುನಿಯನ್ ಕಾರ್ಯಾಧ್ಯಕ್ಷ ಬಿ ವಿ ಮೇಲಪ್ಪಗೋಳ ನೆರವೇರಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು..
ಮುಖ್ಯ ಅತಿಥಿಗಳಾಗಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಬಿ ಎನ್ ಪಾಟಿಲ, ಮುಖ್ಯ ತಾಂತ್ರಿಕ ಅಧಿಕಾರಿ ದಿನೇಶ ಶರ್ಮಾ, ಸೋಮಶೇಖರ ಪೇಟಿಮನಿ, ಸೂರ್ಯ ಬಾಬು, ಎ ಜಿ ಎಂ ಪಿ ಎ ಮತ್ತು ಐ ಆರ್ ಎಂ ರಾಮಚಂದ್ರ, ಡೆಪ್ಯುಟಿ ಜನರಲ್ ಮ್ಯಾನೇಜರ್ ಆನಂದ ಕೊಟಬಾಗಿ ಸೇರಿದಂತೆ ಆಡಳಿತ ಮಂಡಳಿ,ಕಾರ್ಮಿಕರು , ಭದ್ರತಾ ಸಿಬ್ಬಂದಿಗಳಿದ್ದರು .
ಕಾರ್ಯಕ್ರಮದಲ್ಲಿ ಎಸ್ ಬಿ ಪಾಟೀಲ ಸ್ವಾಗತಿಸಿ. ಸಿ ಎಂ ಅಥಣಿ ನಿರೂಪಿಸಿ, ಎನ ಪಿ ಮಾಳಿ ವಂದಿಸಿದರು.