spot_img
spot_img

ಜಾನಪದ ಕಲಾವಿದರು ಹಾಗೂ ಕಲೆ ಸಂಕಷ್ಟ ಸ್ಥಿತಿ ಎದುರಿಸುತ್ತಿವೆ- ಜಯಾನಂದ ಮಾದರ

Must Read

spot_img
- Advertisement -

ಮೂಡಲಗಿ: ಕನ್ನಡ ನೆಲದಲ್ಲಿ ಕಲೆಯ ವಾಸನೆ ಮಣ್ಣಿನ ಕಣಕಣದಲ್ಲಿ ತುಂಬಿಕೊಂಡಿದೆ. ಇದರ ವಾರಸುದಾರರಾದ ಕಲಾವಿದರು.ಇಂದು ಸಂಕಷ್ಟ ಸ್ಥಿತಿಯಲ್ಲಿದ್ದಾರೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಹಾಗೂ ಗೋಕಾಕ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಜಯಾನಂದ ಮಾದರ ಹೇಳಿದರು.

ಅವರು ತಾಲೂಕಿನ ಫುಲಗಡ್ಡಿ ಗ್ರಾಮದಲ್ಲಿ ಶ್ರೀ ಚಂದ್ರಮ್ಮ ತಾಯಿ, ಶ್ರೀ ಗುರುಚಕ್ರವರ್ತಿ ಬಸವಾದಿ ಸದಾಶಿವ ಶಿವಯೋಗಿ.ಶ್ರೀ ಶೆಟ್ಟೆಮ್ಮದೇವಿ ಜಾತ್ರೆಯ ನಿಮಿತ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಜಾನಪದ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಜಾನಪದ ಕಲಾ ಮಹೋತ್ಸವ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ತಳಕಟನಾಳದ ಶ್ರೀ ಆತ್ಮಾನಂದ ಸ್ವಾಮೀಜಿ, ಕಲ್ಲೋಳ್ಳಿಯ ಶ್ರೀ ಕಲ್ಮೇಶ್ವರ ಸ್ವಾಮೀಜಿ.ಬೀರನಹೊಳಿಯ ಪೂಜ್ಯ ಶ್ರೀ ಚಿದಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಯಾದ ಬಲದೇವ ಸಣ್ಣಕ್ಕಿ ಹಾಗೂ ಅರುಣ್ ಸವತಿಕಾಯಿ ಮಾತನಾಡಿದರು. ವಕೀಲ ರಮೇಶ್ ಕುಲಕರ್ಣಿ.ವಡೇರಹಟ್ಟಿ ಗ್ರಾಂ ಪಂ ಉಪಾಧ್ಯಕ್ಷ ಲಕ್ಷ್ಮೀ ಬಾಯಿ ಸಿ.ಹೋಳಕರ. ಮಹಾಂತೇಶ ಸಿ.ಪಾಟೀಲ.ವಡೇರಹಟ್ಟಿ ಗ್ರಾಂ ಪಂ ಸದಸ್ಯರಾದ ಯಮನಪ್ಪ ಸಣ್ಣಕ್ಕಿ.ತುಕಾರಾಮ ಗೌ ಪಾಟೀಲ.ಅಶೋಕ ಹುಚರಡ್ಡಿ.ಲಕ್ಷ್ಮೀ ಮ. ಬಾಪುಕುರಿ.ತಂಗೆವ್ವ ಬೋ.ಬಾಜನವರ.ಉಪಸ್ಥಿತರಿದ್ದರು.

- Advertisement -

ನಂತರದ ವಿಚಾರಗೋಷ್ಠಿಯಲ್ಲಿ ಮಕ್ಕಳ ಸಾಹಿತಿ ಲಕ್ಷ್ಮಣ ಚೌರಿ ಆಶಯ ನುಡಿ ಆಡಿದರು, ಜಾನಪದ ಹಾಗೂ ಜಾಗತಿಕ ರಾಣಿ ವಿಷಯ ಕುರಿತು ವಿದ್ಯಾ ರೆಡ್ಡಿ ಉಪನ್ಯಾಸ ನೀಡಿದರು, ಬಸವರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರ, ಡಾ.ಮಹಾದೇವ ಪೋತರಾಜ ಉಪಸ್ಥಿತರಿದ್ದರು.

ಹಿರೇಬೂದನೂರಿನ ಶ್ರೀ ಕ್ರಷ್ಣ ಪಾರಿಜಾತ ಕಲಾವಿದರಾದ ಯಲ್ಲಪ್ಪ ನಾಯ್ಕರ. ಹಡಗಿನಾಳದ ದಟ್ಟಿಕುಣಿತ ಕಲಾವಿದ ಗೌಡಪ್ಪ ಬಿ.ಪಾಟೀಲ, ಉದಗಟ್ಟಿಯ ಭಜನೆ ಕಲಾವಿದ ಕಲ್ಲಪ್ಪ ಹಿಪ್ಪರಗಿ, ರಾಜಾಪೂರದ ಸೋಬಾನಪದ ಹಾಡುಗಾರ್ತಿ ಗೌರವ್ವ ಹಿರೇಕುರುಬರ, ಶಿಂಗಳಾಪೂರದ ಸಂಪ್ರದಾಯ ಕಲಾವಿದೆ, ಕಲಾವತಿ ಚೌಗಲಾ ಅವರಿಗೆ ಕನ್ನಡ ಜಾನಪದ ಕಲಾರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಂತರದ ಕಲಾ ಪ್ರದರ್ಶನದಲ್ಲಿ ತಳಕಟನಾಳದ ವಿಠಲ ಬಾಪುಕುರಿ ಏಕಪಾತ್ರಾಭಿನಯ, ಶಿಂಗಳಾಪರದ ನಾಮದೇವ ಹರಿಜನ, ಸಿರಿನಾಡ ಶಿಂಗಳಾಪುರ ಜಾನಪದ ಕಲಾ ಸಂಘ ಸೋಬಾನೆ ಪದ, ಹಡಗಿನಾಳದ ಶ್ರೀ ಮುತ್ತೇಶ್ವರ ಕಲಾತಂಡದವರಿಂದ ದಟ್ಟಿಕುಣಿತ. ಕುಲಗೋಡದ ಶಿವಪುತ್ರ ಸಣ್ಣಕ್ಕಿ ಹಾಗೂ ತಂಡ ಉದಗಟ್ಟಿಯ ಶ್ರೀ ಸಿದ್ಧಾರೂಢ ಕಲಾ ತಂಡದವರಿಂದ ಭಜನೆ, ಚಿಕ್ಕಾಲಗುಂಡಿಯ ಗೈಬೂಸಾಬ ಹಾಗೂ ತಂಡ ರಿವಾಯತ ಪದ, ಮುಗಳಖೋಡದ ಸತೀಶ್ ಹಿರೇಮಠ ಸುಗಮ ಸಂಗೀತ. ಇನ್ನೂ ಅನೇಕ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group