- Advertisement -
ಸಿಂದಗಿ: ಕರ್ನಾಟಕ ಜಾನಪದ ಅಕಾಡೆಮಿ-ಬೆಂಗಳೂರು ಇವರು ಕೊಡಮಾಡುವ ೨೦೨೩ ನೇ ಸಾಲಿನ ಜಾನಪದ ವಾರ್ಷಿಕ ಗೌರವ ಪ್ರಶಸ್ತಿಯನ್ನು ತಾಲೂಕಿನ ಬೋರಗಿ ಗ್ರಾಮದ ತತ್ವದ ಹಾಡುಗಾರ್ತಿ ಇಮಾಂಬಿ ದೊಡಮನಿ ಇವರಿಗೆ ಬೀದರನ ಶ್ರೀ ಪೂಜ್ಯ ಚನ್ನಬಸವ ಪಟ್ಟದ್ದೆವರು ರಂಗ ಮಂದಿರದಲ್ಲಿ ನಡೆದ ಜಾನಪದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.
ಈ ಪ್ರಶಸ್ತಿ ೨೫ ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಕಳೆದ ಮೂರ್ನಾಲ್ಕು ದಶಕಗಳಿಂದ ಜಾನಪದ, ತತ್ವದ, ಭಜನಾ ಪದ, ಸೋಬಾನ ಹಾಡು ಹಾಡುತ್ತ ಬರುತ್ತಿರುವ ಇವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ದೊರೆತ್ತಿರುವುದಕ್ಕೆ ಬೋರಗಿ ವಿಶ್ವರಾಧ್ಯ ಮಠದ ತಪೋರತ್ನ ಮಹಾಲಿಂಗೇಶ್ವರ ಸ್ವಾಮಿಗಳು, ರಾಂಪೂರ ಆರೂಢಮಠದ ನಿತ್ಯಾನಂದ ಮಹಾರಾಜರು, ಸಿಂದಗಿ ಕಸಾಪ ಬಳಗ ಸೇರಿದಂತೆ ಅನೇಕ ಗಣ್ಯರು, ಸಾಹಿತಿಗಳು ಅಭಿನಂದಿಸಿದ್ದಾರೆ.