Homeಸುದ್ದಿಗಳುಪುಣ್ಯ ಪುರುಷ ವಾಲ್ಮೀಕಿಯ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು

ಪುಣ್ಯ ಪುರುಷ ವಾಲ್ಮೀಕಿಯ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು

spot_img

ಹಳ್ಳೂರ : ಶ್ರೀ ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಕಾವ್ಯವನ್ನು ರಚಿಸಿ ರಾಮತತ್ವವನ್ನು ಜಗತ್ತಿಗೆಲ್ಲ ಪಸರಿಸಿದ ಮಹಾಕವಿ, ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯಂದು ಆ ಪುಣ್ಯಪುರುಷನ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಆಡಳಿತ ಅಧಿಕಾರಿ ಸಂಜು ಅಗ್ನೇಪ್ಪಗೊಳ ಹೇಳಿದರು.

ಅವರು ಆಡಳಿತ ಅಧಿಕಾರಿ ಕಛೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಾತನಾಡಿ
ಶ್ರೀ ಮಹರ್ಷಿವಾಲ್ಮೀಕಿ ಪರಿಶ್ರಮದ ಮೂಲಕ ರಾಮಾಯಣದಂತಹ ಮಹಾಕಾವ್ಯವನ್ನು ರಚಿಸಿದರು. ಅವರ ಜೀವನ ಸಾಧನೆಯನ್ನು ಸ್ಮರಿಸೋಣ. ವಾಲ್ಮೀಕಿ ಬರೆದ ರಾಮಾಯಣವು 24,000 ಶ್ಲೋಕಗಳು ಮತ್ತು ಏಳು ಖಂಡಗಳನ್ನು ರಾಮಾಯಣವು ಸುಮಾರು 480,002 ಪದಗಳಿಂದ ಕೂಡಿದ್ದು, ಮಹಾಭಾರತದ ಪೂರ್ಣ ಪಠ್ಯದ ಭಾಗದಷ್ಟು ಅಥವಾ ಇಲಿಯಡ್‌ ಸುಮಾರು ನಾಲ್ಕು ಪಟ್ಟು ಉದ್ದವಾಗಿದೆ. ರಾಮಾಯಣವು ರಾಜ್ಯದ ಆಯೋಧ್ಯಾ ನಗರದ ರಾಜಕುಮಾರ ರಾಮನ ಕಥೆಯನ್ನು ಹೇಳುತ್ತದೆಂದು ಹೇಳಿದರು.

ಶಿಕ್ಷಕ ಎಂ ಬಿ ತಳವಾರ ಮಾತನಾಡಿ ಜಗತ್ತಿಗೆ ಮಹಾಕಾವ್ಯ ರಚಿಸಿ ಜಗತ್ತಿಗೆ ಮರ್ಯಾದೆ ಪುರುಷೋತ್ತಮನಾದ ಶ್ರೀ ರಾಮನನ್ನು ಪರಿಚಯಿಸಿ ಆಧುನಿಕ ಜಗತ್ತಿಗೆ ರಾಮ ಲಕ್ಷ್ಮಣರ ಹಾಗೆ ಸಹೋದರರ ಹಾಗೆ ತಿಳಿಸಿಕೊಟ್ಟು ಮತ್ತು ರಾಮ ಸೀತೆಯರ ಹಾಗೆ ಗಂಡ ಹೆಂಡತಿಯರು ಬದುಕಬೇಕೆಂದು ಮಹಾ ಕಾವ್ಯದ ಮೂಲಕ ಮಹರ್ಷಿ ವಾಲ್ಮೀಕಿ ಅವರು ಸಮಾಜಕ್ಕೇ ಒಳ್ಳೆಯ ಸಂದೇಶ ಸಾರಿದ ಮಹಾನ್ ಪುರುಷರು ಎಂದು ಹೇಳಿದರು.

ಪ್ರಾರಂಭದಲ್ಲಿ ಮಹರ್ಷಿ ವಾಲ್ಮೀಕಿ ಭಾವ ಚಿತ್ರಕ್ಕೆ ಪೂಜೆ ನೆರವೇರಿಸಿದರು. ಈ ಸಮಯದಲ್ಲಿ ಮುಖಂಡರಾದ ಬಸವಣ್ಣೆಪ್ಪ ಡಬ್ಬನ್ನವರ, ಸಮಾಜ ಸೇವಕ ಮುರುಘೇಂದ್ರ ಮಾಲಗಾರ, ಶಿಕ್ಷಕರಾದ ಪ್ರಕಾಶ ಮೋರೆ, ರಾಮು ಹರಿಜನ, ಗ್ರಾಮ ಸಹಾಯಕರಾದ ರಮೇಶ ಸವದಿ, ಅಡಿವೆಪ್ಪ ಹಡಗಿನಾಳ, ಬಸಯ್ಯ ಮಠಪತಿ, ಕುಮಾರ ಹರಿಜನ, ಕೆಂಪಣ್ಣ ಹೊಸಮನಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group