ಬೆಳಗಾವಿ- ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಕುವೆಂಪು ನಗರ ಸಯ್ಯಾದ್ರಿ ನಗರ ಮತ್ತು ಬಸವ ಬಳಗ ಹನುಮಾನ್ ನಗರ ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ದಿ. 10 ರಂದು ಗಾಜಿನ ಮನೆ ಹನುಮಾನ್ ಮಂದಿರ ಆವರಣ ಎರಡನೇ ಹಂತ ಹನುಮಾನ ನಗರ ಬೆಳಗಾವಿಯಲ್ಲಿ ಶರಣರ ಚಿಂತನೆ ಕುರಿತು ವೈ ಎಂ ಯಾಕೊಳ್ಳಿ ಅವರು ಅನುಭಾವ ನೀಡಿದರು.
ದಾಸೋಹ ಎಂದರೆ ತನು ಮನ ಧನ ಗಳಿಂದ ಆಗಬೇಕೆಂದು ಮನಪೂರ್ವಕವಾಗಿ ಗುರು ಸೇವೆ ಮಾಡಿ ನಾನು ಮಾಡುತ್ತಿದ್ದೇನೆ ಎಂಬ ಮನಕ್ಲೇಶವಿಲ್ಲದ ಅನ್ನಸಂತಪ೯ಣೆ ಮಾಡುವುದೇ ದಾಸೋಹ .ಶುದ್ಧ ಕಾಯಕದಿಂದ ಪಡೆದ ಆದಾಯವೇ ದಾಸೋಹದ ಆಧಾರ ಎಂದು ವಾಯ್.ಎಮ್.ಯಾಕೊಳ್ಳಿ ಹೇಳಿದರು.
ಬೆಳ್ಳಿಚುಕ್ಕಿ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷೆ ರಾಜೇಶ್ವರಿ ಹಿರೇಮಠ ,ಶೋಭಾ ಶಿವಳ್ಳಿ ,ಲಲಿತಾ ಪರ್ವತ ಗೌಡ ಹಾಗೂ ಸಂಗಡಿಗರು ನಮ್ಮ ಪರಂಪರೆಯ ಭಕ್ತಿ ಗೀತೆಗಳನ್ನು ಶರಣರ ವಚನಗಳನ್ನ ಹೇಳಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನ ಸುಳೇಗಾವಿ ಅವರು ವಹಿಸಿದರೆ ,ಗೌರವಾಧ್ಯಕ್ಷತೆಯನ್ನ ಎಸ್ ಬಿ ಸಿದ್ನಾಳ ವಹಿಸಿದ್ದರು ಪ್ರೋ ಸೊಮನ್ನವರ ಸ್ವಾಗತಿಸಿ ಅತಿಥಿ ಪರಿಚಯ ಮಾಡಿದರು.
ಪ್ರಕಾಶ್ ಏಣಗಿಮಠ ನಿರೂಪಿಸಿದರು. ಬಣಕಾರ್, ಕರಿಯಪ್ಪನವರ, ರವಿ ಪಾಟೀಲ, ಶಂಕರ್ ಕಟ್ಟಿ ,ಶ್ರೀಕಾಂತ ಶಾಣವಾಡ,ಶರಣೆ ಗಡಕರಿ, ಎಸ್ಆರ್ ಚೋಬಾರಿ, ಲಲಿತಾ ರುದ್ರಗೌಡರು ,ಉಪಸ್ಥಿತರಿದ್ದರು ಕೊನೆಯಲ್ಲಿ ಕಟ್ಟಿಮನಿ ವಂದಿಸಿದರು.