ವಿದ್ಯಾರ್ಥಿಗಳಿಗೆ ಅಕ್ಷರಕ್ಕಿಂತ ಸಂಸ್ಕಾರ ಮುಖ್ಯ – ಅಜಿತ ಮನ್ನಿಕೇರಿ

Must Read

ಮೂಡಲಗಿ: ವಿದ್ಯಾರ್ಥಿಗಳು ನಮ್ಮ ನಾಡಿನ ಹಬ್ಬ-ಹರಿದಿನಗಳು, ಸಂಸ್ಕೃತಿ, ಸಂಸ್ಕಾರಗಳನ್ನು ಅರಿತುಕೊಂಡು ಅಕ್ಷರಾಭ್ಯಾಸ ಮಾಡಿದಲ್ಲಿ ಆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಸ್ಕಾರವಂತ ವ್ಯಕ್ತಿಗಳಾಗಿ ಬಾಳುತ್ತಾರೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.

ಅವರು ತುಕ್ಕಾನಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚಾಂದ್ರಮಾನ ಯುಗಾದಿ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಅಕ್ಷರ ದಾಸೋಹದ ವಿಶೇಷ ಭೋಜನಕೂಟದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಈ ಶಾಲೆಯ ಶಿಕ್ಷಕರು ನಮ್ಮ ಹಿಂದೂ ಸಂಸ್ಕೃತಿ ಯಂತೆ ಹೊಸ ವರ್ಷವನ್ನು ಯುಗಾದಿ ಹಬ್ಬದ ದಿನ ಆಚರಿಸಿ ವಿದ್ಯಾರ್ಥಿಗಳಿಗೆ ಬೇವು ಬೆಲ್ಲ ನೀಡಿ ಎಲ್ಲಾ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ತಿಂಡಿ ತಿನಿಸುಗಳೊಂದಿಗೆ ವಿಶೇಷ ಭೋಜನವನ್ನು ಏರ್ಪಡಿಸಿದ್ದು ಶ್ಲಾಘನೀಯ ಎಂದರು.

ಇನ್ನೋರ್ವ ಅತಿಥಿ ಗೋಕಾಕ ತಾಲೂಕಾ ಅಕ್ಷರದಾಸೋಹದ ನಿರ್ದೆಶಕರಾದ ಅಶೋಕ ಮಲಬನ್ನವರ ಮಾತನಾಡಿ, ಬೇವು ಬೆಲ್ಲದಂತೆ ಜೀವನದಲ್ಲಿ ಕಷ್ಟ ಸುಖ ಸಮಾನವಾಗಿ ಹಂಚಿಕೊಂಡು ಸೌರ್ಹಾದಯುತವಾಗಿ ಬಾಳಬೇಕೆಂಬ ಪರಂಪರೆಯನ್ನು ಸಾರುವ ಈ ಯುಗಾದಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ವಿಶೇಷ ಭೋಜನವನ್ನು ಏರ್ಪಡಿಸಿರುವುದು ಮಾದರಿಯಾಗಿದೆ ಎಂದರು. ಈಗಾಗಲೆ ಅಕ್ಷರದಾಸೋಹದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಭೋಜನ ಏರ್ಪಡಿಸುವುದರ ಮೂಲಕ ಸರ್ಕಾರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಈ ಸರ್ಕಾರಿ ಶಾಲೆ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸುಮಾರು 700 ವಿದ್ಯಾರ್ಥಿಗಳಿಗೆ ಬೇವು ಬೆಲ್ಲದೊಂದಿಗೆ, ಕುರ್ಮಾ ಪುರಿ, ಬಟಾಟಿ ಬಾಜಿ, ಗುಲಾಬ ಜಾಮೂನ್, ಲಾಡು, ಮಸಾಲೆ ಅನ್ನ, ಮೊಸರನ್ನ, ರಾಗಿ ಅಂಬಲಿ, ಸಾರು ಹೀಗೆ ವಿವಿಧ ಖಾದ್ಯಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಕುಮಾರ ಮರ್ದಿ, ಸದಸ್ಯರಾದ ಸುನಂದಾ ಭಜಂತ್ರಿ, ರೈತ ಮುಖಂಡ ಮಂಜು ಗದಾಡಿ ಹಾಗೂ ಪ್ರಧಾನ ಗುರುಗಳಾದ ಎ.ವ್ಹಿ ಗಿರೆಣ್ಣವರ, ಶಿವಾನಂದ ಸೋಮವ್ವಗೋಳ, ಕಲ್ಲೋಳಿ ಸಂಪನ್ಮೂಲ ವ್ಯಕ್ತಿ ಗಣಪತಿ ಉಪ್ಪಾರ ಶಿಕ್ಷಕರಾದ ವಿಮಲಾಕ್ಷಿ ತೋರಗಲ್ಲ, ಕುಸುಮಾ ಚಿಗರಿ, ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ಸಂಗೀತಾ ತಳವಾರ, ಶೀಲಾ ಕುಲಕರ್ಣಿ, ಖಾತೂನ ನದಾಫ, ಶಿವಲೀಲಾ ಹುಲಕುಂದ, ಹೊಳೆಪ್ಪಾ ಗದಾಡಿ, ಶಂಕರ ಲಮಾಣಿ, ಕಿರಣ ಭಜಂತ್ರಿ, ಮಹಾದೇವ ಗೋಮಾಡಿ, ಮಂಜುನಾಥ ಕಮ್ಮಾರ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group