ದೇಶ ಆತ್ಮನಿರ್ಭರವಾಗಬೇಕಾದರೆ ದೇಶದ ರೈತರು ಆತ್ಮನಿರ್ಭರವಾಗಬೇಕು – ಈರಣ್ಣ ಕಡಾಡಿ

Must Read

ಮೂಡಲಗಿ: ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿ, ಶತಮಾನದತ್ತ ಸಾಗುತ್ತಿರುವ ಈ ಕಾಲಘಟ್ಟವು ಅಮೃತ ಕಾಲವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬದ್ದತೆಯ ಪ್ರತಿಬಿಂಬವಾಗಿ ದೇಶ ಆತ್ಮನಿರ್ಭರತೆಯತ್ತ ಸಾಗುತ್ತಿದೆ. ದೇಶ ಆತ್ಮನಿರ್ಭರವಾಗಬೇಕಾದರೆ ದೇಶದ ರೈತರು ಆತ್ಮನಿರ್ಭರವಾಗಬೇಕು ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ಮಂಗಳವಾರ ಅ-24 ರಂದು ಕಲ್ಲೋಳಿ ಪಟ್ಟಣದಲ್ಲಿ ಅಲ್ಲಮಪ್ರಭು ರೈತ ಉತ್ಪಾದಕ ಕಂಪನಿ (ಎಫ್.ಪಿ.ಒ) ವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಆರ್ಥಿಕ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಕಿಸಾನ ಸಮ್ಮಾನ್ ನಿಧಿ, ಕಿಸಾನ್ ಮಾನ್ ಧನ್, ಯೂರಿಯಾ ಸಬ್ಸಿಡಿ, ಸಾಯಿಲ್ ಹೆಲ್ತ್ ಕಾರ್ಡ, ಕಿಸಾನ್ ಕ್ರೆಡಿಟ್ ಕಾರ್ಡ, ಕೃಷಿ ಸಿಂಚಾಯಿ, ಕನಿಷ್ಠ ಬೆಂಬಲ ಬೆಲೆ, ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ, ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನದ ಬಳಕೆ, ಒಂದು ಜಿಲ್ಲೆ ಒಂದು ಉತ್ಪನ್ನ, ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಘಟಕಗಳು ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರನ್ನು ಆರ್ಥಿಕ ಸಶಕ್ತರನ್ನಾಗಿ ಮಾಡಲು ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. 

ಈ ಎಲ್ಲ ಯೋಜನೆಗಳಿಗೆ ಪೂರಕವಾಗಿ ದೇಶದಲ್ಲಿ 10000 ರೈತ ಉತ್ಪಾದನಾ ಸಂಸ್ಥೆಗಳ ಸ್ಥಾಪನೆ ಮಾಡುವ ಮೂಲಕ ರೈತರ ಉತ್ಪಾದನೆಗಳಿಗೆ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಒದಗಿಸುವುದು ರೈತ ಉತ್ಪಾದಕ ಸಂಸ್ಥೆಗಳ ಪ್ರಮುಖ ಆದ್ಯತೆಯಾಗಿದೆ. ಹೀಗಾಗಿ ಬರುವ ದಿನಗಳಲ್ಲಿ ರೈತರ ಬದುಕಿನಲ್ಲಿ ರೈತ ಉತ್ಪಾದಕ ಸಂಸ್ಥೆಗಳನ್ನು ಉಳಿಸಿ ಬೆಳೆಸುವ ಸಂಕಲ್ಪ ನಮ್ಮೆಲ್ಲರದಾಗಿದೆ ಎಂದರು. 

ಅಧ್ಯಕ್ಷತೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ವಹಿಸಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಶಂಕರ ಮುದೆಪ್ಪಗೋಳ, ಬಸವರಾಜ ಗಾಡವಿ, ಪುಂಡಲಿಕ ಅರಭಾಂವಿ, ಕೆಂಪಣ್ಣ ಗಡಹಿಂಗ್ಲೆಜ್, ಗುರುಸಿದ್ದಪ್ಪ ಮುರಾರಿ, ಮಲ್ಲಿಕಾರ್ಜುನ ಹುಲೆನ್ನವರ, ಯಮನಪ್ಪ ಬಾಗಾಯಿ, ಶ್ರೀಶೈಲ ತುಪ್ಪದ, ಅಡಿವೆಪ್ಪ ಕುರಬೇಟ, ಶಂಕರ ಗೋರೋಶಿ, ಬಸವರಾಜ ಕಡಾಡಿ, ಶಿವಪ್ಪ ಬಿ.ಪಾಟೀಲ, ಹಣಮಂತ ಸಂಗಟಿ, ಪ್ರಭು ಕಡಾಡಿ, ಸತೀಶ ಪಾಟೀಲ, ಮಲ್ಲಪ್ಪ ಹೆಬ್ಬಾಳ, ಭಗವಂತ ಪಾಟೀಲ, ಸುನೀಲ ಈರೇಶನವರ, ಬಸವರಾಜ ಕರೆಪ್ಪಗೋಳ, ಸೇವಾ ಸಂಸ್ಥೆಯ ಅಧ್ಯಕ್ಷ ಪರಪ್ಪ ಗಿರೆಣ್ಣವರ, ಇಕೋ ಸಂಪನ್ಮೂಲ ಸಂಸ್ಥೆಯ ಯೋಜನಾ ನಿರ್ದೇಶಕ ಆಯ್ ಎನ್. ದೊಡ್ಡಗೌಡರ ಸೇರಿದಂತೆ ಸದಸ್ಯರು ಹಾಗೂ ಪ್ರಗತಿಪರ ರೈತರು, ಕಾರ್ಯಕರ್ತರು ಭಾಗವಹಿಸಿದ್ದರು.

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group