- Advertisement -
ಬೀದರ – ಅಂತ್ಯಕ್ರಿಯೆ ಮುಗಿಸಿ ವಾಪಸ್ ಬರುವಾಗ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾ ಬಳಿ ನಡೆದ ರಸ್ತೆ ಅಪಘಾತವೊಂದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
10 ಜನರಿಗೆ ಗಾಯಗಳಾಗಿದ್ದು ಬೀದರ್ ನ ಬ್ರಿಮ್ಸ್ ಆಸ್ಪತ್ರೆಯ ಗಾಯಾಳುಗಳಿಗೆ ಚಿಕಿತ್ಸೆ ಕೊಡಲಾಗುತ್ತಿದೆ.
ಮೃತ ಪಟ್ಟಿರುವ ಎಲ್ಲಾ ದುರ್ದೈವಿಗಳು ಮಹಾರಾಷ್ಟ್ರದ ಉದಗಿರ್ ಮೂಲದವರು.
- Advertisement -
ದಸ್ತಗಿರ್ ದಾವಲಸಾಬ್ (36) ರಸೀದಾ ಸೈಕ್ (41) ಟಾಟಾ ಎಸಿ ಚಾಲಕ ವಲಿ (31) ಅಮಾಮ್ ಸೇಕ್ (51) ಎಂದು ಅವರನ್ನು ಗುರುತಿಸಲಾಗಿದೆ. ಟಾಟಾ ಏಸ್ ವಾಹನದಲ್ಲಿ ಒಟ್ಟು 14 ಜನ ಉದಗೀರ್ ನಿಂದಾ ಹೈದ್ರಾಬಾದ್ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಗ್ಗೆ 4:30ರ ಸುಮಾರಿಗೆ ನಡೆದ ರಸ್ತೆ ಅಪಘಾತ ನಡೆದಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ಚೆನ್ನಬಸವಣ್ಣ.ಎಸ್.ಎಲ್, ಎಎಸ್ಪಿ ಭೇಟಿ ಪರಿಶೀಲನೆ ನಡೆಸಿದರು.
ವರದಿ: ನಂದಕುಮಾರ ಕರಂಜೆ, ಬೀದರ