ಬೀದರ – ಮಹಿಳಾ ಮತ್ತು ಕಲ್ಯಾಣ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಇಲಾಖೆ ಡಿಡಿ ಒಬ್ಬ ಕಲಬುರಗಿ , ಬೀದರ್ , ವಿಜಯಪುರದ ೫೦ ಜನರಿಂದ ಸುಮಾರು ೭೫ ಲಕ್ಷ ರೂ. ವಸೂಲು ಮಾಡಿ ವಂಚನೆ ಮಾಡಿರುವ ಪ್ರಕರಣ ವರದಿಯಾಗಿದೆ.
ಬೀದರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಡಿಡಿಯಾಗಿದ್ದ ತಿಪ್ಪಣ್ಣ ಸಿರಸಗಿ ಈ ಮಹಾ ವಂಚನೆ ಎಸಗಿದ್ದಾನೆ. ಕಲಬುರಗಿಯ ಅಕ್ಕಮಹಾದೇವಿ ನಗರದ ನಿವಾಸಿಯಾಗಿರುವ ತಿಪ್ಪಣ್ಣ ಸಿರಸಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿಯಲ್ಲಿ ಸುಪರ್ ವೈಸರ್ , ಎಸ್ ಡಿ ಎಸ್ ಎಫ್ ಡಿ ಸಿ ಹುದ್ದೆ ಕೊಡಿಸುವುದಾಗಿ ಸಾರ್ವಜನಿಕರಿಂದ ಹಣ ಪಡೆದು ವಂಚನೆ ಮಾಡಿದ್ದಾನೆ.
ಅಂಗನವಾಡಿ ಟೀಚರ್ ಸುಮಂಗಲಾ ಹಿರೇಮಠ ಎಂಬುವವರ ಮೂಲಕ ಡೀಲ್ ಮಾಡಿದ್ದ ತಿಪ್ಪಣ್ಣ ಸಿರಸಗಿ ಹಣ ಪಡೆದು ವರುಷಗಳೆ ಕಳೆದರೂ ಉದ್ಯೋಗ ನೀಡದೆ, ಹಣವನ್ನೂ ವಾಪಸ್ ಕೊಡದೆ ಸತಾಯಿಸುತ್ತಿದ್ದನೆಂಬುದಾಗಿ ಹಣ ಕೊಟ್ಟು ವಂಚನೆಗೊಳಗಾದ ಜನರು ಹೇಳಿಕೊಂಡಿದ್ದಾರೆ.
ತಮ್ಮ ಹಣ ವಾಪಸ್ ಕೊಡುವಂತೆ ತಿಪ್ಪಣ್ಣ ಸಿರಸಗಿ ಮನೆ ಬಳಿ ಜನರು ಬರುತ್ತಿದ್ದಾರಾದರೂ ಹಣ ಕೊಟ್ಟವರು ಮನೆ ಬಳಿ ಬರ್ತಿದ್ದ ಹಾಗೆ ತಿಪ್ಪಣ್ಣ ಸಿರಸಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ