ಇಂದು ಉಚಿತ ಆಯುರ್ವೇದಿಕ ಆರೋಗ್ಯ ತಪಾಸಣಾ ಶಿಬಿರ

Must Read

ಮೂಡಲಗಿ ಆ 23: ಸರ್ವ ರೋಗಗಳಿಗೆ ಆಯುರ್ವೇದ ಔಷಧಿ ರಾಮಬಾಣ,ಆಯುರ್ವೇದದ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅನೇಕ ರೋಗಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಖ್ಯಾತ ಆಯುರ್ವೇದ ತಜ್ಞ ಡಾ.ಸಿದ್ಧಾರೂಢ ಚಕ್ರಸಾಲಿ ಹೇಳಿದರು.

ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆ ಆಶ್ರಯದಲ್ಲಿ,ಕೇವ ಇಂಡಸ್ಟ್ರೀಸ್ ವತಿಯಿಂದ ಸೋಮವಾರ ದಿನಾಂಕ 23 ಹಾಗೂ 24 ರಂದು 2 ದಿನಗಳ ವರೆಗೆ ನಡೆಯಲಿರುವ ಉಚಿತ ಆಯುರ್ವೇದಿಕ ಆರೋಗ್ಯ ತಪಾಸಣೆ ಶಿಬಿರವನ್ನು ಮೂಡಲಗಿಯ ಲಕ್ಷ್ಮೀ ನಗರದ ಕಾರ್ತಿಕ್ ಆನ್ಲೈನ್ ಸೆಂಟರ್ ನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಶಿಬಿರದಲ್ಲಿ ಶುಗರ್,ಬಿಪಿ,ಅಲರ್ಜಿ,ಚರ್ಮ ರೋಗ,ಮೂಲವ್ಯಾಧಿ,ನರಗಳ ದೌರ್ಬಲ್ಯ, ಲಿವರ್, ಕಿಡ್ನಿ,ಸೊಂಟ ನೋವು,ಬೊಜ್ಜು,ತೂಕ ಹೆಚ್ಚಿಸುವುದು,ತೂಕ ಕಡಿಮೆ ಮಾಡುವುದು,ಬಿಳುಪು,ರಾತ್ರಿ ನಿದ್ದೆ ಬಾರದಿರುವುದು,ಕೂದಲು ಉದುರುವುದು,ಸ್ತ್ರೀಯರಿಗೆ ಸಂಬಂಧಿಸಿದ ವೈಯಕ್ತಿಕ ಖಾಯಲೆಗಳು,ಅಸಿಡಿಟಿ,ಥೈರಾಡ್ ಸಂಬಂಧಿಸಿದ ಅನೇಕ ಖಾಯಲೆಗಳಿಗೆ ಚಿಕಿತ್ಸೆ ದೊರೆಯಲಿದೆ ಎಂದರು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಬಿ.ಜಿ.ಗಡಾದ,ಈರಣ್ಣ ಕೊಣ್ಣೂರ, ಡಾ.ಎಮ್.ಎನ್.ಮುಗಳಖೋಡ,ಡಾ.ಎಮ್.ಎಸ್.ಹಿರೇಮಠ,ಡಾ.ಎಮ್.ಎಮ್.ಕಾಲತಿಪ್ಪಿ,ಡಾ.ಸಂಜು ಮುನ್ಯಾಳ,ಡಾ.ಎಸ್.ಎಚ್.ಕಾತರಕಿ, ಡಾ.ಮಂಜುನಾಥ ಮಂದ್ರೋಳಿ,ಚಿದಾನಂದ ಮುಗಳಖೋಡ್ ಹಾಗೂ ಆರೋಗ್ಯ ತಪಾಸಣಾ ಸಿಬ್ಬಂದಿ ಗಳಾದ ಸಂತೋಷ್ ಎಸ್.ಎಚ್,ಆರ್ ಆಂಜನೇಯ,ಶ್ರೀಮತಿ ಗಾಯತ್ರಿದೇವಿ,ಮತ್ತು ಸುಭಾಸ ಕಡಾಡಿ ಉಪಸ್ಥಿತರಿದ್ದರು.

ಮೂಡಲಗಿ ಪಟ್ಟಣ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ನಾಗರಿಕರು ಈ ಪ್ರಯೋಜನ ಪಡೆಯಲು ಕರೆ ನೀಡಿದರು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 8970517804, 9448891999, 6363215940,9632932189 ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group