ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ

Must Read

ಮೂಡಲಗಿ: -ತಾಲೂಕಿನ ಸರ್ಕಾರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಹಳ್ಳೂರ ಕ್ರಾಸ್‌ ದಲ್ಲಿ (ಗುಬ್ಬಿ ಬಸ್ಟ್ಯಾಂಡ್) ಓದುತ್ತಿರುವ ವಿದ್ಯಾರ್ಥಿಗಳಿಗೆ ನೋವೆಲ್ ಹೋಪ್ ಫೌಂಡೇಷನ್,ಬೆಂಗಳೂರು ಇವರಿಂದ ಸುಮಾರು ರೂ. ೫೦ ಸಾವಿರದಷ್ಟು ಬ್ಯಾಗ್ ಉಚಿತವಾಗಿ ನೀಡಲಾಯಿತು

ಈ ಬ್ಯಾಗ್ ನಮ್ಮ ಶಾಲೆಗೆ ಬರಲು ಪ್ರಾಮಾಣಿಕ ಪ್ರಯತ್ನ ನಲಿ-ಕಲಿ ಕ್ರಿಯಾಶೀಲ ತಾರೆಯರ ತಂಡ ಶಿವಮೊಗ್ಗ ಅವರಿಗೂ ಮತ್ತು ನೋವೆಲ್ ಫೌಂಡೇಶನದವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಪ್ರಧಾನ ಗುರು ಬಸವರಾಜ ಪಾಟೀಲ ಹೇಳಿದರು.

ಈ ಶಾಲೆಯ ದಾಖಲಾತಿ ಹೆಚ್ಚುತ್ತಿರುವುದು ಮತ್ತು ಕಲಿಕೆ ಸಹ ತುಂಬಾ ಉತ್ತಮವಾಗಿದೆ.ವಾರದ ಏಳು ದಿನಗಳು ಶಾಲಾ ಅವಧಿಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಭೋದಿಸುತ್ತಾರೆ ಅಂತ ಕೆಲ ಪಾಲಕರು ಹೇಳುತ್ತಾರೆ ಎಂದರು.

ಎಸ್ ಡಿ ಎಮ್ ಸಿ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು,ಶಿಕ್ಷಣ ಪ್ರೇಮಿಗಳು,ಸಹ ಶಿಕ್ಷಕರು ಮತ್ತು ಪಾಲಕರು ಭಾಗಿಯಾಗಿದ್ದರು.

ಶಿಕ್ಷಕರುಗಳಾದ ಎಮ್.ಬಿ.ತಳವಾರ ನಿರೂಪಿಸಿದರು. ಎಸ್.ವಾಯ್.ಮರೆಕ್ಕನವರ ವಂದಿಸಿದರು.
ಕಾರ್ಯಕ್ರಮಕ್ಕೆ ಬಂದವರಿಗೆ ಮತ್ತು ಮಕ್ಕಳಿಗೆ ಶೇಂಗಾ ಹೋಳಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group