ಮಾ.24ರಂದು ಉಚಿತ ಬಿ ಪಿ, ಶುಗರ್ ಹಾಗೂ ಕಣ್ಣು ತಪಾಸಣೆ ಶಿಬಿರ

Must Read

ಮೂಡಲಗಿ: ಇಲ್ಲಿನ ಅಂಜುಮನ್ ಎ ಇಸ್ಲಾಂ ಎಜುಕೇಷನ್ ಹಾಗೂ ಸೋಶಿಯಲ್ ಡೆವಲೆಪ್ ಮೆಂಟ ಸೊಸೈಟಿ ವತಿಯಿಂದ ಮಾ.24ರಂದು ಬೆ.10 ರಿಂದ ಸಾಯಂಕಾಲ 5ಗಂಟೆಯ ವರೆಗೆ ಪಟ್ಟಣದ ಮದರಸಾ ದಾರುಲ ಉಲೂಮ ಆವರಣದಲ್ಲಿ ಉಚಿತ ಬಿ.ಪಿ, ಶುಗರ್ ಹಾಗೂ ಕಣ್ಣು ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.

ಅರಭಾಂವಿ ಶಾಸಕ ಹಾಗೂ ಕೆ ಎಮ್ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್ ವಿ. ಮುನ್ಯಾಳ, ಚಿಕ್ಕೋಡಿಯ ಹೆಚ್ಚುವರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಎಸ್ ಎಸ್ ಗಡೇದ, ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ ಚಾಂದನಿ ಡೇವಡಿ, ಸರ್ವೇಕ್ಷಣಾಧಿಕಾರಿ ಡಾ. ಬಾಲಕೃಷ್ಣ ತುಕ್ಕಾರ, ತಾಲೂಕಾ ಆರೋಗ್ಯಾಧಿಕಾರಿ ಡಾ. ಎಮ್ ಎಸ್ ಕೊಪ್ಪದ, ಆರೋಗ್ಯಾಧಿಕಾರಿ ಡಾ. ಭಾರತಿ ಕೋಣಿ ಅತಿಥಿ ವೈದ್ಯರಾಗಿ ಆಗಮಿಸುವರು.

ಮುಖ್ಯ ಅತಿಥಿಗಳಾಗಿ ತಹಸೀಲ್ದಾರ ಡಿ ಜಿ ಮಹಾತ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಸಿಡಿಪಿಓ ವಾಯ್ ಕೆ ಗದಾಡಿ, ಸಿ ಪಿ ಐ ವೆಂಕಟೇಶ ಮುರನಾಳ, ಪಿಎಸೈ ಹಾಲಪ್ಪ ಬಾಲದಂಡಿ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಭಾಗವಹಿಸುವರು.

ಮೂಡಲಗಿ ಪಟ್ಟಣ ಹಾಗೂ ಎಲ್ಲ ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಖಿದಮತ್ ಸೋಶಿಯಲ್ ವೆಲಫೇರ್ ಕಮಿಟಿ ಸಂಘಟಕರು ಹಾಗೂ ಅಂಜುಮನ್ ಕಮಿಟಿ ಅಧ್ಯಕ್ಷ ಮಲೀಕ ಹುಣಶ್ಯಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಸರು ನೋಂದಾಯಿಸುವ ದೂರವಾಣಿ ಸಂಖ್ಯೆ – 9448863320, 9731460763, 9481280786, 8497861437

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group