ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

Must Read

ಸಿಂದಗಿ: ಈ ದೇಶದಲ್ಲಿ ಶ್ರಮ ಜೀವಿಗಳು ಅಂತ ಯಾರಾದರು ಇದ್ದಾರೆ ಅಂದರೆ ಅವರೆ ನಮ್ಮ ಕಟ್ಟಡ ಕಾರ್ಮಿಕರು. ಪ್ರತಿಯೊಂದು ಕುಟುಂಬ ಇವತ್ತು ದೊಡ್ಡ ದೊಡ್ಡ ಬಂಗಲೆಯಿಂದ ಹಿಡಿದು ಪುಟ್ಟ ಪುಟ್ಟ ಮನೆಗಳಲ್ಲಿ ಬದುಕು ಸಾಗಿಸುತಿದ್ದಾರೆ ಎಂದರೆ ಅದಕ್ಕೆ ಕಟ್ಟಡ ಕಾರ್ಮಿಕರ ಶ್ರಮವೆ ಕಾರಣ ಎಂದು ಹೇಳಿದರೆ ತಪ್ಪಾಗಲಾರದು ಎಂದು ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ್ ಸಂತೋಷ ಹೇಳಿದರು.

ಪಟ್ಟಣದ ಸಂಗಮ ಸಂಸ್ಥೆ ಹಾಗೂ ಕರ್ನಾಟಕ ಕಟ್ಟಡ ಕಾರ್ಮಿಕರ ಮಂಡಳಿಯ ಸಹಯೋಗದಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಮಾಲಿಕರು ದುಡ್ಡುಕೊಡುತ್ತಾರೆ ಆದರೆ ಶ್ರದ್ದೆಯಿಂದ ಸಂಪೂರ್ಣ ಜವಾಬ್ದಾರಿಯಿಂದ ಮನೆ ,ಶಾಲೆ ,ಆಸ್ಪತ್ರೆಗಳು, ಕಟ್ಟಡ ಮಾಡುವವರೆಂದರೆ ಈ ನಮ್ಮ ಶ್ರಮ ಜೀವಿಗಳು ಕಟ್ಟಡ ಕಾರ್ಮಿಕರು.  ಇವರು ತಮಗೆ ಖಾಯಿಲೆಗಳು ಬಂದರೆ ಮಾತ್ರೆಗಳು ತೆಗೆದುಕ್ಕೊಳ್ಳುತ್ತಾರೆ ಹೊರತು ಆಸ್ಪತ್ರೆಗೆ ಹೆಜ್ಜೆ ಇಡುವುದಿಲ್ಲ ಇದರಿಂದ ಅವರು ದೊಡ್ಡ ದೊಡ್ಡ ಖಾಯಿಲೆಗೆ  ತುತ್ತಾಗಿ ಮರಣ ಹೊಂದುವ ಸಂಭವ ಅತಿ ಹೆಚ್ಚು ಎಂದು ಹೇಳಬಹುದು.ಆದ್ದರಿಂದ ಖಾಯಿಲೆ ಬರುವ ಮುನ್ನವೇ ಎಚ್ಚರ ವಹಿಸಿದರೆ ಆಸ್ಪತ್ರೆಯ ಮಾತ್ರೆಗಳು ಮುಂತಾದವುಗಳಿಂದ ನಾವು ಪಾರಾಗಬಹುದು ಆರೋಗ್ಯ ಇದ್ದರೆ ನಾವು ನೀವೆಲ್ಲರು ಸುಖವಾಗಿ ಬಾಳಬಹುದು ಕಷ್ಟಪಟ್ಟು ದುಡಿದ ಹಣವನ್ನುಆಸ್ಪತ್ರೆಗೆ ಸುರಿಯುವ ಬದಲು ಕಾಯಿಲೆ ಬರದಂತೆ ತಡೆಯುವುದು ಮತ್ತು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ ನಮ್ಮಆರೋಗ್ಯ ನಾವು ಕಾಪಾಡಿಕೊಳ್ಳುವುದೇ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಆರ್ ಕೆ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಅನಿಲಕುಮಾರ ರಾಠೋಡ ಮಾತನಾಡಿ, ಕಟ್ಟಡ ಕಾರ್ಮಿಕರಲ್ಲಿ ಅತಿ ಹೆಚ್ಚು ಸಕ್ಕರೆ ಖಾಯಿಲೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿರುತ್ತಾರೆ ಆದರೂ ಕೂಡಾ ಅವರು ಎಲ್ಲಿ ಕೂಡಾ ತಪಾಸಣೆ ಮಾಡಿಕೊಂಡಿರುವುದಿಲ್ಲ ಅಲ್ಲದೆ ಕಟ್ಟಡ ಕಾರ್ಮಿಕರು ದಿನನಿತ್ಯ ದುಡಿದು ತಿನ್ನುವ ಜನರು ನಾವೆಲ್ಲ ನಮಗೆ ಆಸ್ಪತ್ರೆಗೆ ಹೊಗಲು ನಿರ್ಲಕ್ಷ್ಯವಹಿಸಿ ಯಾವುದೆ ತಪಾಸಣೆ ಮಾಡಿಕೊಳ್ಳುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಆರೋಗ್ಯವಾಗಿ ಇರಬೇಕು ಎಂಬ ಉದ್ದೇಶದಿಂದ ಕರ್ನಾಟಕ ಸರ್ಕಾರ ತಮ್ಮ ಮನೆ ಬಾಗಿಲಿಗೆ ವೈದ್ಯರನ್ನು ಕಳುಹಿಸಿದ್ದಾರೆ ತಾವೆಲ್ಲರು ಈ ಉಚಿತ ತಪಾಸಣೆಯ ಸದುಪಯೋಗ ಪಡೆದುಕೊಂಡು ಆರೋಗ್ಯವಾಗಿರಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಜು ಬಂಕಲಗಿ, ಪರಸುರಾಮ ಕಲಹಳ್ಳಿ ಸೇರಿದಂತೆ ಕಟ್ಟಡ ಕಾರ್ಮಿಕ ಸಂಘದ ಪದಾಧಿಕಾರಿಗಳು ಮತ್ತು ವಿವಿಧ ಹಳ್ಳಿಗಳಿಂದ ಬಂದ ಇತರೆ ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದು ತಪಾಸಣೆ ಮಾಡಿಕೊಂಡರು.

ವಿಜಯ ಬಂಟನೂರ ನಿರೂಪಿಸಿದರು , ರಾಜೀವ ಕುರಿಮನಿ ಸ್ವಾಗತಿಸಿದರು ಮಲ್ಕಪ್ಪ ಹಲಗಿ ಇವರು ಸಂವಿಧಾನದ ಪ್ರಾಸ್ಥಾವನೆಯನ್ನು ಓದಿದರು. ಶ್ರೀಮತಿ ತೇಜಸ್ಡಿನಿ ಹಳ್ಳದಕೇರಿ  ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group