ಮೂಡಲಗಿ: ಮುಂದೆ ನಡೆಯಲಿರುವ ಮಂಗಳೂರು ಎ.ಆರ್.ಓ. ಅಗ್ನಿವೀರ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಲಿರುವ ಅಭ್ಯರ್ಥಿಗಳಿಗೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಸಿ.ಬಿ.ಟಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಭಾವಿ ಅಗ್ನಿವೀರರಿಗೆ ಉಚಿತ ದೈಹಿಕ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ.
ಸರ್ಕಾರದಿಂದ ಮಾನ್ಯತೆ ಪಡೆದು ಯಶಸ್ವಿಯಾಗಿ ೨೨ ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಅಕಾಡೆಮಿಯಿಂದ ಇತ್ತೀಚೆಗೆ ನಡೆದ ಬೆಳಗಾವಿ ಎ.ಆರ್.ಓ. ದ ನೇಮಕಾತಿಯಲ್ಲಿ ೭೮ ಅಭ್ಯರ್ಥಿಗಳು ಸೇನೆಗೆ ಆಯ್ಕೆಯಾಗಿ ಕರ್ನಾಟಕದಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳು ಈ ಸಂಸ್ಥೆಯಿಂದ ಸೇನೆಗೆ ಆಯ್ಕೆಯಾಗುತ್ತಾರೆ ಎಂದು ಸಾಕ್ಷಿಯಾಗಿದೆ. ಸೇನಾ ರ‍್ಯಾಲಿಯಲ್ಲಿ ನಡೆಯುವ ೧೬೦೦ ಮೀ. ಓಟ, ಫುಲ್-ಅಪ್ಸ್, ಲಾಂಗ್ ಜಂಪ್, ಜಿಗ್-ಜಾಗ್ ನಡಿಗೆ, ಮತ್ತು ವೈದ್ಯಕೀಯ ಪರೀಕ್ಷೆಗೆ ಸಂಬಂಧಪಟ್ಟ ತರಬೇತಿಯನ್ನು ನುರಿತ ಉಪನ್ಯಾಸಕರಿಂದ ತರಬೇತಿಯನ್ನು ನೀಡುತ್ತಿದ್ದು, ನೊಂದಣಿಯ ಕೊನೆಯ ದಿನಾಂಕ ೧೦ ಜನವರಿ ೨೦೨೬. ಮೊದಲು ಬಂದ ೧೦೦ ಅಭ್ಯರ್ಥಿಗಳಿಗೆ ಮಾತ್ರ ಉಚಿತ ತರಬೇತಿಗೆ ಅವಕಾಶ ಇರುತ್ತದೆ, ಇಂದಿನಿಂದ ಪ್ರವೇಶ ಪಡೆಯಬಹುದು ಎಂದರು.
ಪ್ರವೇಶ ಪಡೆಯುವ ಅಭ್ಯರ್ಥಿಗಳು ಊಟ-ವಸತಿ, ಯುನಿಫಾರ್ಮ್ ಫೀಸ್ ಮಾತ್ರ ತುಂಬಬೇಕಾಗುತ್ತದೆ, ಕೋಚಿಂಗ್ ಫೀಸ್ ಇರುವುದಿಲ್ಲ. ಬರುವಾಗ ಅಡ್ಮಿಟ್ ಕಾರ್ಡ, ೩ ಫೋಟೋ, ಎಸ್.ಎಸ್.ಎಲ್.ಸಿ. ಮಾರ್ಕ್ಸ್-ಕಾರ್ಡ್ ಝರಾಕ್ಸ್, ಆಧಾರ್ ಕಾರ್ಡ್ ಝರಾಕ್ಸ್, ಊಟ ಮಾಡಲಿಕ್ಕೆ ಒಂದು ಪ್ಲೇಟ್, ಗ್ಲಾಸ್, ಹಾಸಿಗೆ, ರನ್ನಿಂಗ್ ಶೂಸ್ ಮತ್ತೆ ತಮಗೆ ಬೇಕಾದ ಇತರೇ ವಸ್ತುಗಳನ್ನು ತಾವೇ ತರಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ೯೮೮೬೪೧೪೯೩೦, ೯೭೪೨೪೦೭೬೯೦, ೯೪೮೨೯೭೪೯೩೦

