ಸಿಂದಗಿ; ಗೆಳೆತನಕ್ಕಿಂತ ದೊಡ್ಡ ಸಂಬಂಧ ಇನ್ನೊಂದಿಲ್ಲ ಕೆಲವು ಸಮಸ್ಯೆಗಳು ಕುಟುಂಬದವರಿಗೆ ಹೇಳದೆ ಗೆಳೆಯರ ಮುಂದೆ ಹೇಳಿ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳುತ್ತೇವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಅನಂತಲಕ್ಷೀ ಕಲ್ಯಾಣ ಮಂಟಪದಲ್ಲಿ 1986 ಸಾಲಿನ ಎಸ್‍ಎಸ್‍ಎಲ್‍ಸಿ ಗೆಳೆಯರ ಬಳಗದ ಸ್ನೇಹ ಸಮಾಗಮ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಡಾ. ಮಹಾಂತೇಶ ಹಿರೇಮಠ ಪ್ರಾಸ್ಥಾವಿಕವಾಗಿ ಮಾತನಾಡಿದರು, ಜಿಲಾನಿ ಮುಲ್ಲಾ ಮಾತನಾಡಿ, ಅಗಲಿದ ಗೆಳೆಯರಿಗೆ ಶ್ರದ್ದಾಂಜಲಿ ಹೇಳಿ ಒಂದು ನಿಮಿಷ ಮೌನಾಚರಣೆ ಮಾಡಿದರು,
ವೇದಿಕೆಯ ಮೇಲೆ ಭೀಮಾಶಂಕರ ಶ್ರೀಗಿರಿ, ಪ್ರಕಾಶ ಗುಣಾರಿ, ಜಿಲಾನಿ ಮುಲ್ಲಾ, ಮಾಹಾಂತೇಶ ಕೊರಿ, ದಯಾನಂದ ಪತ್ತಾರ, ನಾರಾಯಣ ಕುಲರ್ಣಿ, ಗಂಗಾಧರ ಉಪ್ಪಿನ, ರಾಜಶೇಖರ ಪೂಜಾರಿ, ಮುತ್ತು ಕತ್ತಿ, ಇಮಾಮ ನದಾಫ, ಪುಟ್ಟು ಸಂಗಮ, ಶಶಿಕಲಾ ಸಾಲಿಮಠ, ಸುನೀತಾ ಅರಿ, ಮುನ್ನಿ ಕುಡಚಿ, ಶಾಂತಾ ಪಾಟೀಲ, ಬಸಲಿಂಗಮ್ಮ ಪಟ್ಟಣಶೇಟ್ಟಿ, ಸರೋಕನಿ ಬ್ಯಾಕೋಡ, ಬಸಮ್ಮ ರೇಷ್ಮಿ, ಇವರು ಎಲ್ಲರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಶಿಕ್ಷಕ ಯಲ್ಲಪ್ಪ ಬಿರಾದಾರ ನಿರೂಪಿಸಿದರು, ಶಿಕ್ಷಕ ಮುತ್ತಪ್ಪ ಪಾತ್ರೋಟಿ ವಂದಿಸಿದರು.