ಬೈಲಹೊಂಗಲ – ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ ಅವರ ಹುಟ್ಟು ಹಬ್ಬದ ನಿಮಿತ್ತ ಭಾರತೀಯ ಜನತಾ ಪಾರ್ಟಿ ಬೈಲಹೊಂಗಲ ಮಂಡಲ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ ಮಾತನಾಡಿ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ ಅವರು ಶಾಸಕರಾಗಿದ್ದ ವೇಳೆ ಬೈಲಹೊಂಗಲ ಮತಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು, ಅನೇಕ ಜನಪರ ಯೋಜನೆಗಳನ್ನು ಜನ ಮರೆತಿಲ್ಲ ಅಧಿಕಾರ ಇಲ್ಲದಿದ್ದರೂ ನಮ್ಮ ಕುಟುಂಬದಿಂದ ಕ್ಷೇತ್ರದ ಜನಸೇವೆ ಮಾಡುತ್ತಾ ಬಂದಿದ್ದೇವೆ ಜನರ ಆಶೀರ್ವಾದ ಸದಾ ಹೀಗೆ ನಮ್ಮ ಕುಟುಂಬದ ಮೇಲಿರಲಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸುಭಾಷ ತುರಮರಿ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ್ ಕಡಿ, ಪ್ರಮುಖರಾದ ಮಹಾಂತೇಶ ಜಿಗಜಿನ್ನಿ, ಆನಂದ ತುರಮರಿ, ಸಂತೋಷ ರಾಯರ, ಗೌಡಪ್ಪ ಹೊಸಮನಿ, ಬಸವರಾಜ ಗುರವನ್ನವರ,ರವಿ ಹೊಸುರ, ಪ್ರವೀಣ ಶಿಂಗಾರಿ,ರಾಘು ಕುಮಚಿ, ಶ್ರೀಶೈಲ ಕಟ್ಟಿಮನಿ, ಮಲ್ಲಿಕಾರ್ಜುನ ಮೆಟಗುಡ್ಡ, ಸಿ.ಜಿ.ವಿಭೂತಿಮಠ, ಬಸವರಾಜ ಶಿಂತ್ರಿ, ನಾಗರಾಜ ಬುಡಶೆಟ್ಟಿ ಹಾಗೂ ಅನೇಕರು ಉಪಸ್ಥಿತರಿದ್ದರು