Homeಸುದ್ದಿಗಳುಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ದಂಪತಿಗೆ "ಗಡಿನಾಡ ಶ್ರೇಷ್ಠ ಕನ್ನಡಿಗ "ಪ್ರಶಸ್ತಿ.

ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ದಂಪತಿಗೆ “ಗಡಿನಾಡ ಶ್ರೇಷ್ಠ ಕನ್ನಡಿಗ “ಪ್ರಶಸ್ತಿ.

ಬೆಂಗಳೂರು : ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿನ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್ ಆಡಿಟೋರಿಯಂ ನಲ್ಲಿ ಬೆಂಗಳೂರಿನ ಡಾ. ಸುಷ್ಮಾ ಶಂಕರ್ ಸಾರಥ್ಯದ “ತೊದಲ್ನುಡಿ “ಮಾಸಪತ್ರಿಕೆ ಹಾಗೂ ಕಾಸರಗೋಡಿನ ಕನ್ನಡ ಭವನ ಹಾಗೂ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ನಡೆದ “ಕೇರಳ -ಕರ್ನಾಟಕ ಕನ್ನಡ ನುಡಿ ಸಂಭ್ರಮ ” ಕಾರ್ಯಕ್ರಮ ದಲ್ಲಿ, ಕಾಸರಗೋಡಿನ ಕನ್ನಡ ಭವನ, ಕನ್ನಡ ಭವನ ಪ್ರಕಾಶನ, ಹಾಗೂ ಇನ್ನಿತರ ಸಂಸ್ಥೆಗಳ ಮೂಲಕ ಕನ್ನಡ ಪರ, ಹಾಗೂ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ನೆಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ನೂರಾರು ಮಂದಿಗೆ ಪ್ರಶಸ್ತಿ, ಸನ್ಮಾನ, ಗೌರವ ಅರ್ಪಣೆ ಗಳ ಮೂಲಕ ಸಮಾಜದ ಮುಂದೆ ತರುವ, ಕಾರ್ಯಗಳನ್ನು ಮಾನಿಸಿ, ಸಮ್ಮೇಳನ ದಲ್ಲಿ ತೊದಲ್ನುಡಿ.. ಸಂಸ್ಥೆ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ದಂಪತಿಗೆ ” ಗಡಿನಾಡ ಶ್ರೇಷ್ಠ ಕನ್ನಡಿಗ “ಪ್ರಶಸ್ತಿ ನೀಡಿ ಗೌರವಿಸಿತು.

ಕಾರ್ಯಕ್ರಮ ದಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ಸಹ ಸಂಪಾದಕಿ ಮೇರಿ ಜೋಸೆಫ್, ಡಾ. ಸುಷ್ಮಾ ಶಂಕರ್, ಡಾ ಬಾಲಕೃಷ್ಣ ಎಸ್ ಮದ್ದೋಡಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಸರಸ್ವತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಶಂಕರ್, ಯೋಗ ಆಚಾರ್ಯ ಶ್ರೀ ಶ್ರೀನಿವಾಸ್ ಮುಂತಾದವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group