ಬಾಗಲಕೋಟೆ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಅವರು ಆಯೋಜನೆ ಮಾಡಿರುವ ಬೆಳಗಾವಿ ವಿಭಾಗದ ಕವಿಗೋಷ್ಠಿಗೆ ಬಾಗಲಕೋಟೆ ಜಿಲ್ಲೆಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಹುನಗುಂದದ ಉಪನ್ಯಾಸಕರಾದ ಡಾ. ಎಲ್. ಜಿ. ಗಗ್ಗರಿ ಅವರು ಆಯ್ಕೆಯಾಗಿದ್ದಾರೆ.
ಈಗಾಗಲೇ ಗುಂಡಬ್ರಹ್ಮಯ್ಯರ ಸಾಂಸ್ಕೃತಿಕ ಅಧ್ಯಯನ ಎಂಬ ಸಂಶೋಧನಾ ಗ್ರಂಥವನ್ನು ಪ್ರಕಟಿಸಿದ್ದಾರೆ. ಜೊತೆಗೆ ಹೊಸ ಕವನ ಸಂಕಲನ ಪ್ರಕಟಿಸುವ ಹಂತದಲ್ಲಿದೆ.
ಜುಲೈ 21ರಂದು ಬೆಳಗ್ಗೆ 10 ಗಂಟೆಗೆ ಬೆಳಗಾವಿಯ ಕನ್ನಡ ಭವನದಲ್ಲಿ ಕವಿಗೋಷ್ಠಿ ನಡೆಯಲಿದೆ.