ನಿವೃತ್ತ ಪ್ರಾಂಶುಪಾಲರು ಎ.ಹೆಚ್.ಗಣೇಶ್ ಮೂಲತಃ ಅಂಕಪುರ ಗ್ರಾಮದವರು. ಹಾಲಿ ಹಾಸನದ ವಾಸಿ. ಹಾಸನ ತಾಲ್ಲೂಕು ಕಟ್ಟಾಯ ಹೋಬಳಿ ಅಂಕಪುರ ಗ್ರಾಮದಲ್ಲಿ
ತಂದೆ ಹನುಮಂತೇಗೌಡ ತಾಯಿ ಹೊಂಬಾಳಮ್ಮ ದಂಪತಿಗಳ ಸುಪುತ್ರರಾಗಿ ದಿನಾಂಕ 30-05-1966 ರಂದು ಜನಿಸಿದರು. ತಂದೆ ಕೃಷಿಕರು. ಇವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಹುಟ್ಟಿದೂರು ಅಂಕಪುರದಲ್ಲಿ 1972 ರಿಂದ 1979ರವರೆಗೆ.
ಎಂಟನೇ ತರಗತಿ ಮೊಸಳೆ ಹೊಸಹಳ್ಳಿಯಲ್ಲಿ. ನಂತರ 9 ಮತ್ತು 10ನೇ ತರಗತಿ ವ್ಯಾಸಂಗ ಕಾರ್ಲೆಯ ಕೆ.ಕೆ.ವಿ. ಪ್ರೌಢಶಾಲೆಯಲ್ಲಿ. ಪಿಯುಸಿ ಮತ್ತು ಬಿ.ಎ. ಪದವಿ ಹಾಸನ ಸರ್ಕಾರಿ ಕಲಾ ಕಾಲೇಜಿನಲ್ಲಿ, 1985-86ನೇ ಸಾಲಿನಲ್ಲಿ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸಂಘದ ಕಾರ್ಯದರ್ಶಿ. 1987ರಿಂದ 1989ರಲ್ಲಿ ಸಮಾಜ ಶಾಸ್ತ್ರದಲ್ಲಿ ತೃತೀಯ ರಾಂಕ್ ನಲ್ಲಿ ಮಾನಸ ಗಂಗೋತ್ರಿ ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
1989ರಲ್ಲಿ ಹಾಸನದ ಎನ್.ಆರ್. ಡಿ.ಕೆ. ಪ್ರಥಮ ದರ್ಜೆ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭ. 1991ರಲ್ಲಿ ಹಾಸನದ ಎ.ವಿ. ಕೆ. ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಣೆ, 22-11-1991 ರಿಂದ ಹಾಸನ ನಗರದ ಯೂ.ಇ.ಎಸ್. (ಪ್ರೆಸಿಡೆನ್ಸಿ) ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಣೆ. ದಿನಾಂಕ 5-7–1995. ರಿಂದ ಸರ್ಕಾರಿ ಅನುದಾನಿತ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಣೆ. 2023 ನೇ ಜುಲೈ ತಿಂಗಳಿನಿಂದ ಪ್ರಾಂಶುಪಾಲರಾಗಿ ಜುಲೈ 2025ರಲ್ಲಿ ಸ್ವಯಂ ನಿವೃತ್ತಿ ಪಡೆದಿರುತ್ತಾರೆ.
ಇನ್ನೂ ರಂಗಭೂಮಿಗೆ ಸಂಬಂಧಿಸಿದಂತೆ ಹೇಳುವುದಾದರೆ 1994ರಲ್ಲಿ ತಮ್ಮ ಹುಟ್ಟೂರು ಅಂಕಪುರದಲ್ಲಿ ಭೀಷ್ಮ ಪ್ರತಿಜ್ಞೆ ನಾಟಕದಲ್ಲಿ ಕರ್ಣನ ಪಾತ್ರ ನಿರ್ವಹಣೆ. 2011ರಲ್ಲಿ ಅಂಕಪುರ ಗ್ರಾಮದ ಗ್ರಾಮ ದೇವತೆ ಶ್ರೀ ಅರೆಕಲ್ಲಮ್ಮ (ಭದ್ರಕಾಳಿ) ದೇವಾಲಯ ಜೀರ್ಣೋದ್ಧಾರ ಸಮಿತಿಯಲ್ಲಿ ನಿರ್ದೇಶಕರಾಗಿ ದೇವಸ್ಥಾನ ಅಭಿವೃದ್ಧಿಯಲ್ಲಿ ತಮ್ಮದೇ ಸಕ್ರೀಯ ಪಾತ್ರ ನಿರ್ವಹಣಿ. 2015, 2016, 2017 ರ ಫೆಬ್ರವರಿ ತಿಂಗಳಿನಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಮೂರು ವರ್ಷ ಕುರುಕ್ಷೇತ್ರ ಪೌರಾಣಿಕ ನಾಟಕದಲ್ಲಿ ಮೂರು ಬಾರಿಯೂ ನಾಟಕದ ಪ್ರಮುಖ ಪಾತ್ರ ಶ್ರೀ ಕೃಷ್ಣನಾಗಿ ಅಭಿನಯ ಸಾಮಾರ್ಥ್ಯದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರು. 2021ರಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರದರ್ಶಿತ ಕುರುಕ್ಷೇತ್ರ ನಾಟಕದಲ್ಲಿ ಶ್ರೀಕೃಷ್ಣನ ಪಾತ್ರಾಭಿನಯ. 2020ರಿಂದ ಅಂಕಪುರದ ಶ್ರೀ ಅರೆಕಲ್ಲಮ್ಮ ದೇವಾಲಯ ಸೇವಾ ಸಮಿತಿಯ ಕಾರ್ಯದರ್ಶಿಯಾಗಿ ಇಂದಿಗೂ ಕಾರ್ಯ ನಿರ್ವಹಣೆ. 2023ರ ಫೆಬ್ರವರಿಯಲ್ಲಿ ಅಂಕಪುರ ಗ್ರಾಮದ ಶ್ರೀ ಅರೆಕಲ್ಲಮ್ಮ ಜಾತ್ರಾ ಮಹೋತ್ಸವದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ಮತ್ತೆ ಶ್ರೀಕೃಷ್ಣನ ಪಾತ್ರದಲ್ಲಿ ಅಭಿನಯ. ತಮ್ಮ ಉಪನ್ಯಾಸ ವೃತ್ತಿ ಜೀವನದ ನಿವೃತ್ತಿ ನಂತರ ಪ್ರಸ್ತುತ ಕದಂಬ ಸೈನ್ಯೆ ರಾಜ್ಯ ಕೇಂದ್ರ ಕಛೇರಿ ಮಂಡ್ಯ ಇದರ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ತಾ 18-8-2019ರಲ್ಲಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪರಿವರ್ತನ ಟ್ರಸ್ಟ್, ಮೈಸೂರು ಸಂಯುಕ್ತಾಶ್ರಯದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಹೆಸರಾಂತ ಚಿತ್ರ ನಿರ್ದೇಶಕ ಪುಟ್ಟಣ ಕಣಗಾಲ್ ಸ್ಮರಣಾರ್ಥ ಸಮಾರಂಭದಲ್ಲಿ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಕಲಾರತ್ನ ರಾಜ್ಯ ಪ್ರಶಸ್ತಿಗೆ ಭಾಜನರು.
—–
ಗೊರೂರು ಅನಂತರಾಜು, ಹಾಸನ
ಮೊಬೈಲ್ ನಂ. 9449462879
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾಡ್೯, 3 ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ -573201