ಅತ್ಯಾಚಾರಿ ಗಣಿಯಾರನನ್ನು ಗಲ್ಲಿಗೇರಿಸಬೇಕು – ಅಂಬಿಕಾ ಪಾಟೀಲ

Must Read

ಸಿಂದಗಿ : ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಖಾಸಗಿ ಶಾಲೆಯ ಮುಖ್ಯಸ್ಥ ಹಾಜಿ ಮಲಂಗ್ ಗಣಿಯಾರ ಎರಡು ದಿನಗಳ ಹಿಂದೆ ೫ ನೇಯ ತರಗತಿಯ ಮಗುವಿನ ಮೇಲೆ ಅತ್ಯಾಚಾರ ಎಸಗಿದ ನಂತರ ಮಗುವಿಗೆ ಯಾರೊಬ್ಬಗೂ ಹೇಳದಂತೆ ಬೆದರಿಕೆ ಹಾಕಿದ್ದು ತಿಳಿದು ಬಂದಿದೆ, ಈ ಹೇಯ ಕೃತ್ಯ ಎಸಗಿದ ಅತ್ಯಾಚಾರಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಕೊಂಡು ಸಾರ್ವಜನಿಕ ವಲಯದಲ್ಲಿ ಗಲ್ಲಿಗೇರಿಸಬೇಕು ಎಂದು ಕಾಂಗ್ರೆಸ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಅಂಬಿಕಾ ಪಾಟೀಲ ಮಾರ್ಸನಳ್ಳಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆ ಶಿಕ್ಷಕ ತನ್ನ ಕಾಮ ತೃಷೆೆ ತಿರಿಸಿಕೊಳ್ಳಲು ಅಮಾಯಕ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಅಮಾವೀಯ ಕೃತ್ಯವಾಗಿದೆ. ಅಲ್ಲದೆ ರಾಜ್ಯದಲ್ಲಿ ಒಂದಿಲ್ಲ ಒಂದು ಕಡೆ ಹೆಣ್ಣಿನ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರಗಳು ಪದೆ ಪದೆ ಮರುಕಳಿಸುತ್ತಿರುವ ಸಂಗತಿ ದುರದುಷ್ಟಕರ ಸಂಗತಿ. ಇಂತಹ ಕೃತ್ಯ ಮಾಡುವ ಕ್ರೂರಿಗಳಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಬೇಕು. ನಿತ್ಯ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಹಾಗೂ ಅತ್ಯಾಚಾರವನ್ನು ಮಹಿಳಾ ಘಟಕ ಉಗ್ರವಾಗಿ  ಖಂಡಿಸುತ್ತೇವೆ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತೇವೆ. ಯಾರಿಗೆ ಅನ್ಯಾಯವಾಗಲಿ ಸಹಿಸಿಕೊಳ್ಳಬೇಡಿ ಅತ್ಯಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು  ಇಂತಹ ಘಟನೆಗಳು ಯಾವತ್ತೂ ಜರುಗಬಾರದಂತೆ ಜಿಲ್ಲಾಡಳಿತ ಜಾಗೃತಿ ವಹಿಸಿ ಆ ಬಾಲಕಿಗೆ ಆದ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಿಕೊಡಬೇಕು ಇಲ್ಲದಿದ್ದರೆ ಮಹಿಳಾ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group