Homeಸುದ್ದಿಗಳುಸ್ಮಶಾನವನ್ನೂ ನೆಮ್ಮದಿಯ ಸ್ಥಾ‌ನವಾಗಿಸಲು ಉದ್ಯಾನವನ

ಸ್ಮಶಾನವನ್ನೂ ನೆಮ್ಮದಿಯ ಸ್ಥಾ‌ನವಾಗಿಸಲು ಉದ್ಯಾನವನ

spot_img

ಮೂಡಲಗಿ: ಮನುಷ್ಯ ಜೀವನದ ಕೊನೆಯ ಹಂತ ಸ್ಮಶಾನವು ಕೂಡ ಒಂದು ನೆಮ್ಮದಿಯ ಕೇಂದ್ರವಾಗಿ ಉದ್ಯಾನವನದಂತೆ ಕಂಗೊಳಿಸುವಂತಾಗಲಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಸುಣಧೋಳಿ ಗ್ರಾಮದ ರುದ್ರ ಭೂಮಿಯಲ್ಲಿ ವೀರಶೈವರ ಆರಾಧ್ಯ ದೈವ ಶ್ರೀ ಪರಮೇಶ್ವರ ಮೂರ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮದ ಗ್ರಾಮಸ್ಥರು ಸ್ಮಶಾನ ಭೂಮಿಯನ್ನು ಅಭಿವೃದ್ದಿ ಪಡಿಸಿ ಮುಕ್ತಿಧಾಮವಾಗಿ ನಿರ್ಮಾಣ ಮಾಡುವ ಮೂಲಕ ತಾಲೂಕಿನ ಮಾದರಿ ಗ್ರಾಮವಾಗಿಲಿ ಎಂದು ಶುಭ ಹಾರೈಸಿದರು

ಕಾರ್ಯಕ್ರಮದ ಸಾನ್ನಿಧ್ಯವನ್ನು ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೂಜ್ಯರಾದ ಅಭಿನವ ಶಿವಾನಂದ ಮಹಾಸ್ವಾಮಿಗಳು ಹಾಗೂ ಸೊಗಲದ ಪೂಜ್ಯ ಚಿದಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಶ್ರೀಶೈಲ ವಾಲಿ, ಚಂದ್ರಶೇಖರ ಗಾಣಿಗೇರ, ಭೀಮಣ್ಣ ಹೊಟ್ಟಿಹೊಳಿ, ಬಸವರಾಜ ಗಾಣಿಗೇರ, ನಾಗಪ್ಪ ಗಾಣಿಗೇರ, ಈರಣ್ಣ ಹಟ್ಟಿ, ಮಹಾದೇವ ಹಟ್ಟಿ, ಶಿವಲಿಂಗಪ್ಪ ಉಗರಗೋಳ, ಮಹಾದೇವ ವಾಲಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸಥರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group