- Advertisement -
ಮೂಡಲಗಿ: ‘ಮನಸ್ಸಿನಲ್ಲಿರುವ ಕಲ್ಮಶಗಳನ್ನು ದೂರಮಾಡಿ ಉತ್ತಮ ಚಿಂತನೆ, ಆಚರಣೆಗಳೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡು ಜೀವನವನ್ನು ಆನಂದಮಯವಾಗಿಸಿಕೊಳ್ಳಬೇಕು’ ಎಂದು ಬ್ರಹ್ಮಕುಮಾರಿ ರೇಖಾ ಅಕ್ಕನವರು ಹೇಳಿದರು.
ಇಲ್ಲಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರೇಖಾ ಅಕ್ಕನವರು ಭಕ್ತರೊಂದಿಗೆ ದೀಪವನ್ನು ಬೆಳಗಿಸುವ ಮೂಲಕ ಹೊಸ ವರ್ಷವನ್ನು ಆಚರಿಸಿ ಮಾತನಾಡಿದ ಅವರು ದೇವರಲ್ಲಿ ಧ್ಯಾನ, ಭಕ್ತಿಯನ್ನು ಇಡುವುದರ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತ ಮಾಡಿಕೊಳ್ಳಬೇಕು ಎಂದರು.
ಸಮಾಜದಲ್ಲಿ ಪ್ರೀತಿ, ಸೌಹಾರ್ದತೆಯಿಂದ ಬದುಕುವ ಮೂಲಕ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಬೇಕು. ಪ್ರಕೃತಿಯನ್ನು ಪ್ರೀತಿಸಬೇಕು ಎಂದರು.
- Advertisement -
ಭಕ್ತಿಯ ಗಾಯನ ಮತ್ತು ಧ್ಯಾನವನ್ನು ಮಾಡಿದರು. ಭಕ್ತರಿಗೆ ಸಿಹಿ ಹಂಚಿದರು.
ಬ್ರಹ್ಮಕುಮಾರಿ ಸವಿತಾ ಅಕ್ಕನವರು ಹಾಗೂ ಭಕ್ತರು ಭಾಗವಹಿಸಿದ್ದರು.