ಆತ್ಮ ಜ್ಞಾನದ ಬುತ್ತಿ ಗಜಲ್ ಕೃತಿ ಲೋಕಾರ್ಪಣೆ

Must Read

ಮುನವಳ್ಳಿಃ ಸಮೀಪದ ರೈನಾಪುರ ಗ್ರಾಮದಲ್ಲಿ ರವಿವಾರ ೨೮ ರಂದು ದಿವಂಗತ ಪತ್ರೆಪ್ಪ ಶಿವಪ್ಪ ಪಟ್ಟಣಶೆಟ್ಟಿ ಇವರ ಪುಣ್ಯಸ್ಮರಣೆ ಅಂಗವಾಗಿ ಕವಿ ನಾಗೇಶ ನಾಯಕ್ ಅವರ ಆತ್ಮ ಜ್ಞಾನದ ಬುತ್ತಿ (ಅಲೆಮಾರಿಯ ಅನುಭಾವದ ಗಜಲ್‌ಗಳು) ಕೃತಿ ಲೋಕಾರ್ಪಣೆ ಜರುಗಲಿದೆ.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬಾಗೋಜಿಕೊಪ್ಪದ ಹಿರೇಮಠದ ಮುರುಘರಾಜೇಂದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು ಅಧ್ಯಕ್ಷತೆಯನ್ನು ಚುಂಚನೂರಿನ ನಿವೃತ್ತ ಅಧಿಕಾರಿಗಳಾದ ಎ.ಆರ್.ಹಂಜಿ ವಹಿಸುವರು.

ಯರಗಟ್ಟಿ ಎಸ್.ಬಿ.ದೇಸಾಯಿ ಕಾಲೇಜಿನ ಉಪನ್ಯಾಸಕರಾದ ಮಾರುತಿ ಜಾವೂರ ಕೃತಿ ಬಿಡುಗಡೆ ಮಾಡಲಿದ್ದು ಯಕ್ಕುಂಡಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ರಮೇಶ ಮುರಂಕರ ಕೃತಿ ಪರಿಚಯ ಮಾಡುವರು.ಮುಖ್ಯ ಅತಿಥಿಗಳಾಗಿ ರೈನಾಪುರದ ನಿವೃತ್ತ ಮುಖ್ಯೋಪಾಧ್ಯಾಯರಾದ ಎ.ವೈ.ಅಳಗೋಡಿ ಯರಗಟ್ಟಿಯ ನಿವೃತ್ತ ಮುಖ್ಯೋಪಾಧ್ಯಾಯರಾದ ಆರ್.ಎಲ್.ಜೂಗನವರ ರೈನಾಪುರದ ಶಿಕ್ಷಕರಾದ ಬಸವರಾಜ ಪಟ್ಟಣಶೆಟ್ಟಿ.ಕವಿ ವಿಮರ್ಶಕ ನಾಗೇಶ ನಾಯಕ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಕವಿ ಗೋಷ್ಠಿಯನ್ನು ಏರ್ಪಡಿಸಲಾಗಿದ್ದು ವೈ.ಬಿ.ಕಡಕೋಳ,ಜಗದೀಶ ಸಂಗನ್ನವರ,ಶಿವಾನಂದ ಬಸಿಡೋಣಿ,ಆನಂದ ಪಾಟೀಲ,ವಿಠಲ ದಳವಾಯಿ,ಬಿ.ಎಂ.ಬಾವಾಖಾನ್,ಇಬ್ರಾಹಿಂ ಚಾಂದಖಾನವರ,ಎಫ್.ಎಲ್.ಮದಹಳ್ಳಿ ಕವನ ವಾಚಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿರುವರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group