ಪರಿಸರಕ್ಕೆ ಸಾಲುಮರದ ತಿಮ್ಮಕ್ಕಳ ಕೊಡುಗೆ ಅಪಾರ

Must Read

ಸಾಲುಮರದ ತಿಮ್ಮಕ್ಕಳಿಗೆ ಶ್ರದ್ಧಾಂಜಲಿ ಅರ್ಪಣೆ:

ಮೂಡಲಗಿ: ಮೂಡಲಗಿಯಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕಳ ನಿಧನಕ್ಕೆ ಮೂಡಲಗಿಯ ನಿಸರ್ಗ ಫೌಂಡೇಶನ್, ಯುವ ಜೀವನ ಸೇವಾ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಮೂಲಕ ಶುಕ್ರವಾರ ಮೊಂಬತ್ತಿಗಳನ್ನು ಬೆಳಗಿಸಿ, ಭಾವಚಿತ್ರಕ್ಕೆ ಪುಷ್ಪಗಳ ಮಳೆಗೈದು ಶ್ರದ್ಧಾಂಜಲಿ ಅರ್ಪಿಸಿದರು.

ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ನುಡಿ ನಮನ ಸಲ್ಲಿಸಿ ಮಾತನಾಡಿದ ಅವರು ‘ಸಾಲುಮರದ ತಿಮ್ಮಕ್ಕಳು ಮಕ್ಕಳಿಲ್ಲ ಎನ್ನುವ ಕೊರಗನ್ನು ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟು ಪಾಲನೆ, ಪೋಷಣೆ ಮಾಡಿ ಹೆಮ್ಮರಗಳಾಗಿ ಬೆಳೆಸುವ ಮೂಲಕ ಪರಿಸರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದರು’ ಎಂದರು.

ಅಕ್ಷರ ಜ್ಞಾನವಿಲ್ಲದಿದ್ದರೂ ಸಹ ಜಗತ್ತು ಮೆಚ್ಚುವಂತ ಕಾರ್ಯವನ್ನು ಮಾಡುವ ಮೂಲಕ ಸಾಲುಮರದ ತಿಮ್ಮಕ್ಕಳ ಹೆಸರು ಅಜರಾಮರವಾಗಿ ಉಳಿಯುವಂತಾಗಿದೆ. ನಿಸ್ವಾರ್ಥದ ಅವಳ ಸೇವೆ ಮತ್ತು ಪರಿಸರಕ್ಕೆ ಕೊಟ್ಟಂತ ಅವಳ ಕೊಡುಗೆಯನ್ನು ಪರಿಗಣಿಸಿ ಪದ್ಮಶ್ರೀ ಸೇರಿದಂತೆ ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳು ಅವಳ ಮುಡಿಗೆ ಸಂದಿವೆ. ಅಷ್ಟೇ ಅಲ್ಲ ಕರ್ನಾಟಕ ಸರ್ಕಾರದ ಪರಿಸರ ರಾಯಬಾರಿಯಾಗಿ ಗುರುತಿಸಿಕೊಂಡಿದ್ದ ಹೆಗ್ಗಳಿಕೆ ಅವರದಾಗಿತ್ತು ಎಂದರು.

ಈರಪ್ಪ ಢವಳೇಶ್ವರ, ಕೃಷ್ಣಾ ಗಿರೆಣ್ಣವರ, ಮಲ್ಲು ಬೋಳನ್ನವರ, ಮಹಾದೇವ ಶೆಕ್ಕಿ, ಸುಭಾಷ ಬೆಳಕೂಡ, ರವಿ ನೇಸೂರ, ಚಂದ್ರಶೇಖರ ಬಸ್ಮೆ, ಶಿವಬಸು ಮುರಗೋಡ, ಡಾ. ಬಸವರಾಜ ಪಾಲಭಾಂವಿ, ಮಲ್ಲಪ್ಪ ನೇಮಗೌಡರ, ಕುಮಾರ ಗಿರಡ್ಡಿ, ಜಗದೀಶ ತೇಲಿ, ತಿಪ್ಪಣ್ಣ ಕುರಬಗಟ್ಟಿ, ಪ್ರಭು ಹಡಪದ, ಪಾಂಡು ಮಹೇಂದ್ರಕರ, ಚಂದ್ರಶೇಖರ ಪತ್ತಾರ, ರಮೇಶ ಸಣ್ಣಕ್ಕಿ, ಸುಧಾಕರ ಉಂದ್ರಿ, ಸುಭಾಷ ಬಳಿಗಾರ ಹಾಗೂ ಅನೇಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Latest News

ಕವನ : ಸಾವಿರದ ವಿಶ್ವಮಾನ್ಯಳು

ಸಾವಿರದ ವಿಶ್ವಮಾನ್ಯಳು.ಹಸಿರನು ಉಸಿರಾಗಿಸಿಕೊಂಡವಳು ಬಿಸಿಲಿನ ಬೇಗೆ-ಧಗೆ ನಿವಾರಕಳು ಪರಿಸರಪ್ರೇಮಿ ಪ್ರಿಯರ ಪ್ರೇರಕಳು ಕೋಟಿ ಮರನೆಟ್ಟ ಕೋಟ್ಯಧೀಶಳು./1/ಸಕಲ ಜೀವರಾಶಿಯ ಮಾತೆಯಿವಳು ಮಕ್ಕಳಂತೆ ಮರಗಳ ಪೋಷಿಸಿಹಳು ಪಯಣಿಗರ ದಣಿವು ಪರಿಹರಿಸಿದವಳು ನಾಡಿನ ಜೀವಜಾಲಕೆ ತಂಪನೆರೆದಿಹಳು/2/ಮರಗಳು ಮರುಗುತ ರೋಧಿಸುತಲಿಹವು ವ್ರೃಕ್ಷಮಾತೆಯ...

More Articles Like This

error: Content is protected !!
Join WhatsApp Group