ಗಿರೀಶ ಮುನವಳ್ಳಿ ಯವರಿಗೆ ಮತ್ತು ಡಾ.ಶ್ರೀಪಾದ ಸಬನೀಸರವರಿಗೆ ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನ

Must Read

ಸವದತ್ತಿ – ಸವದತ್ತಿ ಪಟ್ಟಣದ ಶ್ರೀಗುರು ರಾಘವೇಂದ್ರ ಮಠದಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ನಡೆದ ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಗಿರೀಶ ಮುನವಳ್ಳಿಯವರಿಗೆ ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನ ನೀಡಿ ಗೌರವಿಸಲಾಯಿತು.

ಗಿರೀಶ ಮುನವಳ್ಳಿ ಯವರು ಸವದತ್ತಿ ತಾಲೂಕು ಪಂಚಾಯತ ಕಾರ್ಯಾಲಯದಲ್ಲಿ ಅಕ್ಷರದಾಸೋಹ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಬೆಂಗಳೂರಿನಲ್ಲಿ ನಡೆದ ಸುರ್ವೆ ಕಲ್ಚರಲ್ ಅಕಾಡೆಮಿ. ಸರ್ ಎಮ್ ವಿಶ್ವೇಶ್ವರಯ್ಯ ಇಂಜನಿಯರಿಂಗ ಪ್ರತಿಷ್ಠಾನ ಇವರ ವತಿಯಿಂದ ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ ಪಡೆದ ಕಾರಣ ಇವರನ್ನು ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶೇಷಗಿರಿಶರ್ಮಾ ಜೋಶಿಯವರು ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಸಿಕೊಟ್ಟರು.

ನಂತರ ಡಾಕ್ಟರ ಶ್ರೀಪಾದ ಸಬನೀಸರವರು ಯರಗಟ್ಟಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು ಮಹಾಮಾರಿ ಕೋರೋನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸಮಾಜದ ಜನರ ಮತ್ತು ಸಾರ್ವಜನಿಕರಿಗೆ ತಪಾಸಣೆ ಮಾಡಿ ಔಷಧೋಪಚಾರ ನೀಡಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಿದ ಕಾರಣ ಅವರನ್ನು ಮತ್ತು ನಳಿನಿ ಶೇಷಗೀರಿ ಜೋಶಿಯವರು ಕರ್ನಾಟಕ ವಿಶ್ವವಿದ್ಯಾಲಯ ಸಂಸ್ಕ್ರತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಬೆಳಗಾವಿ ವಿಭಾಗ ಮಟ್ಟದಲ್ಲಿ ಪಿಬಿರೆ ರಾಮರಸಂ ರಾಮೋ ತಸ್ವ ರಾಮಾಯಣ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಯಾದ ಕಾರಣ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದ ವೇದಿಕೆ ಮೇಲೆ ವೇಂಕಟೇಶ ವೈದ್ಯ . ಧೀರೇಂದ್ರ ಕಾನಡೆ. ಗುರುರಾಜ ಆಚಾರ್ಯ ಕಟ್ಟಿ ರಂಗನಾಥ ರಾಮತೀರ್ಥ. ಭಂಡುರಾವ ಕುಲಕರ್ಣಿ ಡಾ.ಚಿದಂಬರ ಕುಲಕರ್ಣಿ. ಶಹರ ಬ್ರಾಹ್ಮಣ ಸಮಾಜದ ಅದ್ಯಕ್ಷ ಸಿ ವ್ಹಿ ಕುಲಕರ್ಣಿ. ರಾಜು ಕುಲಕರ್ಣಿ ಸುಮಾ ರಾಮತೀರ್ಥ ಜೋಶಿ ಉಪಸ್ಥಿತರಿದ್ದರು.ರಾಮಚಂದ್ರ ಜೋಶಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group