ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಬೇಕು – ಬಾಲಶೇಖರ ಬಂದಿ

Must Read

ಮೂಡಲಗಿ: ‘ಶಾಲಾ ಮಕ್ಕಳಿಗೆ ಕೇವಲ ಅಕ್ಷರ ಕಲಿಸಿದರೆ ಸಾಲದು ಅದರೊಂದಿಗೆ ಸಂಸ್ಕಾರವು ಅವಶ್ಯವಿದೆ’ ಎಂದು ಸಾಹಿತಿ ಹಾಗೂ ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.

ತಾಲ್ಲೂಕಿನ ಅರಭಾವಿಯ ಆಂಜನೇಯ ಗ್ರಾಮೀಣ ಶಿಕ್ಷಣ ಸಂಸ್ಥೆಯ ಆಂಜನೇಯ ಅನುದಾನಿತ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ೩೩ನೇ ವಾರ್ಷಿಕೋತ್ಸವ ಹಾಗೂ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಕ್ಕಳಲ್ಲಿಯ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುವ ಕಾರ್ಯವನ್ನು ಶಿಕ್ಷಣ ಮಾಡುತ್ತದೆ ಎಂದರು.

ಅರಭಾವಿಯ ಆಂಜನೇಯ ಪ್ರಾಥಮಿಕ ಶಾಲೆಯು ಗ್ರಾಮೀಣ ಭಾಗದ ಅನೇಕ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶ್ಲಾಘನೀಯ ಕಾರ್ಯ ಮಾಡಿದೆ. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಂಕರ ಬಿಲಕುಂದಿ ಅವರು ಶಾಲೆಯ ಪ್ರಗತಿಯಲ್ಲಿ ಪರಿಶ್ರಮವು ಸಾರ್ಥಕವಾಗಿದೆ ಎಂದರು.

ಮುಖ್ಯ ಅತಿಥಿ ತಾಲ್ಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಬಿ. ಮಲಬನ್ನವರ ಮಾತನಾಡಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸರ್ಕಾರವು ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಚಿತ್ರ ನಟಿ ನಿರ್ಮಾಪಕಿ ಶಿವಲೀಲಾ ಮಾಸೂರ, ಯೋಗ ಪಟು ಸಂಜು ಘೋಡಗೇರಿ, ಮಲ್ಲಕಂಭದಲ್ಲಿ ಸಾಧನೆ ಮಾಡಿರುವ ಶಿವಪ್ರಸಾದ ಕಡಾಡಿ, ಪ್ರವೀಣ ಮರನೂರ, ಮಿಥುನ ಪಾಟೀಲ, ತರಬೇತುದಾರ ಮೆಹಬೂಬ ಬಂಡಿವಾಡ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಅನುಪಮಾ ಬೆಣ್ಣಿ, ಪ್ರೀಯಂಕಾ ಪಾತ್ರೋಟ, ಹರ್ಷಿತಾ ಮುತ್ತಲಗೇರಿ, ಭೀಮಶಿ ಸಂಪಗಾರ ಅವರನ್ನು ಸನ್ಮಾನಿಸಿದರು.

ಶಿವಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಶಂಕರ ಬಿಲಕುಂದಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಮಾದರ, ಉಪಾಧ್ಯಕ್ಷೆ ರಾಜೇಶ್ವರಿ ಗಂಗನ್ನವರ, ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ಶಿಕ್ಷಕ ಗಣಪತಿ ಉಪ್ಪಾರ ವೇದಿಕೆಯಲ್ಲಿದ್ದರು.
ಮುಖ್ಯ ಶಿಕ್ಷಕ ಎಂ.ಜೆ. ಜೈನ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.

Latest News

ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣ ಎಸ್. ಜಿ. ಸುಶೀಲಮ್ಮ

ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜವನ್ನು ಕಟ್ಟ ಬಯಸಿದ ಅಣ್ಣ ಬಸವಣ್ಣನವರ ಆದರ್ಶ ವ್ಯಕ್ತಿತ್ವಗಳಿಗೆ ಮಾರು ಹೋಗಿ ತಮ್ಮ ಬದುಕಿನ ಆರು...

More Articles Like This

error: Content is protected !!
Join WhatsApp Group