ಬಸವನಬಾಗೇವಾಡಿ: ಪ್ರಾಚೀನ ಕಾಲದಿಂದಲೂ ಮಹಿಳೆ ಶೋಷಣೆಗೆ ಒಳಗಾಗಿದ್ದಾಳೆ. ಅವಳ ನೋವುಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆಗಳು ನಿರ್ಮಾಣವಾಗಿರಲಿಲ್ಲ. 19 ರ ದಶಕದಲ್ಲಿ ಅಮೆರಿಕದಲ್ಲಿ ಪ್ರಾರಂಭವಾದ ಮಹಿಳಾ ಸಮಾನತೆಯ ಸಮ್ಮೇಳನ ಜಾಗತಿಕ ಮಟ್ಟದಲ್ಲಿ ಮಹಿಳೆಯರಿಗೆ ಸಮಾನತೆಗಾಗಿ ಮುನ್ನುಡಿಯನ್ನು ಬರೆಯಿತು. ಮಹಿಳೆಯ ಮೇಲೆ ಅನುಕಂಪವನ್ನು ತೋರಿಸದೆ ಅವಕಾಶವನ್ನು ನೀಡಿ ಹೊಸ ಆಲೋಚನೆಗಳತ್ತ ಅವಳನ್ನು ಬೆಳೆಸುವ ಕಾರ್ಯವಾಗಬೇಕು ಎಂದು ಡಾ. ಮೀಣಾ ಗುಳೇದಗುಡ್ಡ ಇವರು ತಾಲೂಕು ಶರಣ ಸಾಹಿತ್ಯ ಪರಿಷತ್ತು, ಶ್ರೀ ಸಂಗಣ್ಣ ಪರಪ್ಪ ಆಲೂರ ಪ್ರೌಢಶಾಲೆ, ಹುಣಶ್ಯಾಳದಲ್ಲಿ ಆಯೋಜಿಸಿದ್ದ ಲಿಂ. ಬಸವರಾಜಪ್ಪ ಆಲೂರ, ಲಿಂ. ಮನೋಹರ್ ದಂಡಾವತಿ, ಲಿಂಗೈಕ್ಯ ಶ್ರೀಮತಿ ಶಿವಮ್ಮ ಕ್ವಾಟಿ ಇವರ ಸ್ಮರಣಾರ್ಥ ದತ್ತಿ ಉಪನ್ಯಾಸ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ವಿವೇಕಾನಂದ ಕಲ್ಯಾಣಶೆಟ್ಟಿ ಅವರು ಮಾತನಾಡಿ 12ನೇ ಶತಮಾನದ ಶರಣರ ಕ್ರಾಂತಿ ಸರ್ವರ ಏಳಿಗೆ ಸಮಾನತೆ, ಅಭಿವೃದ್ಧಿ ಪ್ರತಿನಿಧಿಸುತ್ತದೆ. ಇಂದಿನ ಆಧುನಿಕ ಸಂದರ್ಭದಲ್ಲಿ ಮೊಬೈಲ್, ಸಾಮಾಜಿಕ ಜಾಲತಾಣಗಳು ಇಂದಿನ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿಟ್ಟು ಇನ್ನುಳಿದ ಎಲ್ಲ ಮೌಲ್ಯಗಳನ್ನು ತುಂಬುತ್ತಿವೆ. ಆದರೆ ಇಂದು ನಾವು ಮಕ್ಕಳಲ್ಲಿ ಶರಣರ ವಚನಗಳ ಮೂಲಕ ನೈತಿಕ ಮೌಲ್ಯಗಳನ್ನು ತುಂಬುವ ಅವಶ್ಯಕತೆ ಇದೆ. ಎಂದು ಹೇಳಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಪಿ. ಎಲ್. ಹೀರೆಮಠ ಹಾಗೂ ಅಧ್ಯಕ್ಷತೆ ವಹಿಸಿದ್ದ ವೀರಣ್ಣ ಮರ್ತೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಂದ್ರಕಾಂತ್ ಅರಳಗುಂಡಗಿ, ಎಂ ಎಸ್ ಆಲೂರ, ವೀರೇಶ್ ಕುಂಟೋಜಿ, ಸಾವಿತ್ರಿ ಕಲ್ಯಾಣಶೆಟ್ಟಿ, ಆರ್. ಜಿ. ಅಳ್ಳಗಿ, ಉದಯಕುಮಾರ ಆಲೂರ, ಎಸ್. ಕೆ. ಸೋಮನಕಟ್ಟಿ, ನಾಗಪ್ಪ ಕ್ವಾಟಿ, ಮನೋಹರ ದಂಡಾವತಿ ಹಾಗೂ ಸಂಗಣ್ಣ ಪರಪ್ಪ ಆಲೂರ್ ಪ್ರೌಢಶಾಲೆಯ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮಾರಿ ಅಲೀಫ ಚೌಹಾನ್ ಪ್ರಾರ್ಥಿಸಿದರು. ಜಿ. ಎಸ್. ಕೂಡಿಗಿ ಸ್ವಾಗತಿಸಿದರು.ಪಿ. ಎಸ್. ಅರಳಿಚಂಡಿ ನಿರೂಪಿಸಿದರು ಬಸವರಾಜ ಹಡಪದ ವಂದಿಸಿದರು.