ವಿಕಲಚೇತನರಿಗೆ ಸಾಧನ ಸಲಕರಣೆಗಳ ಜೊತೆಗೆ ಹೆಚ್ಚು ಪ್ರೋತ್ಸಾಹ ನೀಡಿರಿ – ವಿಶ್ವಾಸ ವೈದ್ಯ

Must Read

ಸವದತ್ತಿ – “ವಿಕಲಚೇತನ ಮಕ್ಕಳಿಗೆ ಅಲಿಂಕೋ ಸಂಸ್ಥೆಯ ಸಹಭಾಗಿತ್ವದಲ್ಲಿ ವೈದ್ಯಕೀಯ ತಪಾಸಣೆ ನಡೆಸುವ ಮೂಲಕ ಅರ್ಹ ಫಲಾನುಭವಿಗಳಿಗೆ ಇಂದು ಮಂಜೂರಾದ ಸಾಧನ ಸಲಕರಣೆಗಳನ್ನು ವಿತರಿಸುತ್ತಿದ್ದು ಇವುಗಳ ಸದುಪಯೋಗ ಪಾಲಕರು ಮಾಡಿಕೊಳ್ಳುವ ಮೂಲಕ ಅವರ ಶಿಕ್ಷಣಕ್ಕೂ ಕೂಡ ಹೆಚ್ಚಿನ ಪ್ರೋತ್ಸಾಹ ನೀಡಿರಿ.ಇಂದು ನವ ಸಾಕ್ಷರಸ್ಥರಿಗೆ ಪ್ರಮಾಣಪತ್ರ ಕೂಡ ವಿತರಿಸುತ್ತಿರುವುದು ಸಂತಸದ ಸಂಗತಿ ಇದರ ಸದುಪಯೋಗ ನಿರಂತರವಾಗಿ ಅಧ್ಯಯನ ರೂಢಿಸಿಕೊಂಡು ಸಾಧನೆ ಮಾಡುವಂತಾಗಲಿ. ಈ ಸಂದರ್ಭದಲ್ಲಿ ಹೂಲಿ ಗ್ರಾಮದ ವಿಕಲಚೇತನ ವಿದ್ಯಾರ್ಥಿ ಈರಣ್ಣ ಶೆಟ್ಟಿಮೇಳಿ ಬೆಳಗಾವಿಯಲ್ಲಿ ಜರುಗಿದ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟದಲ್ಲಿ ಭಲ್ಲೆ ಎಸೆತದಲ್ಲಿ  ಪ್ರಥಮ ಸ್ಥಾನ ಪಡೆದಿದ್ದು ಆ ವಿದ್ಯಾರ್ಥಿ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟಕ್ಕೂ ಆಯ್ಕೆಯಾಗಲಿ” ಎಂದು ಶಾಸಕ ವಿಶ್ವಾಸ ವೈದ್ಯ ಹಾರೈಸಿದರು

ಅವರು ಪಟ್ಟಣದ ಗುರುಭವನದಲ್ಲಿ ಜರುಗಿದ ಸಮನ್ವಯ ಶಿಕ್ಷಣ ವಿಕಲಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನದ ಸಾಧನ ಸಲಕರಣೆ ವಿತರಣೆ ಹಾಗೂ ನವ ಸಾಕ್ಷರರಿಗೆ ಪ್ರಮಾಣ ಪತ್ರ ವಿತರಣೆ ಮತ್ತು ನಿರಂತರ ಓದನ್ನು ಪ್ರೋತ್ಸಾಹಿಸಲು ತೆರೆಯಲಾದ ಸಾಮಾಜಿಕ ಚೇತನಾ ಕೇಂದ್ರದ ಉದ್ಘಾಟನೆಯನ್ನು ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಮಾತನಾಡಿ “ಶಿಕ್ಷಣ ಇಲಾಖೆಯ ಪ್ರತಿಯೊಂದು ಯೋಜನೆಗಳು ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯೋಜನಕಾರಿ.ಈ ದಿಸೆಯಲ್ಲಿ ಇಂದು ವಿತರಿಸಲಾದ ಸಾಧನ ಸಲಕರಣೆ ಹಾಗೂ ನವ ಸಾಕ್ಷರರ ಪ್ರಮಾಣ ಪತ್ರ.ಇವುಗಳ ಜೊತೆಗೆ ಸಾಮಾಜಿಕ ಚೇತನಾ ಕೇಂದ್ರದ ಸದುಪಯೋಗ ಜರುಗಲಿ”ಎಂದು ಆಶಿಸಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಎಂ.ಜಯಶ್ರೀ  ಮಾತನಾಡಿ “ ಸಾಕ್ಷರರಾಗಿ ಮುಂಬರುವ ದಿನಗಳಲ್ಲಿ ತಮ್ಮ ನಿರಂತರ ಓದುವಿಕೆ ಮತ್ತು ಅದರ ಪ್ರಯೋಜನಗಳು ಸಾಮಾಜಿಕ ಚೇತನಾ ಕೇಂದ್ರದ ಮೂಲಕ ಜರುಗಲಿ”ಎಂದು ಕರೆ ನೀಡಿದರು.ಇದೇ ಸಂದರ್ಭದಲ್ಲಿ ಸಾಮಾಜಿಕ ಚೇತನಾ ಕೇಂದ್ರದ ಪೋಸ್ಟರ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಎಂ.ಜಯಶ್ರೀ. ಡೈಟ್ ಉಪನ್ಯಾಸಕರಾದ ಎಚ್.ಡಿ,ಧರ್ಮನ್ನವರ.ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿರಣ ಕುರಿ.ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಸುಧೀರ ವಾಘೇರಿ. ಪುರಸಭೆ ಸದಸ್ಯರಾದ ಬಾಪೂ ಚೂರಿಖಾನ್ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್.ಬಿ.ಬೆಟ್ಟದ.ವೈ.ಬಿ.ಕಡಕೋಳ.ಸಿ.ವ್ಹಿ.ಬಾರ್ಕಿ.ಡಿ.ಎಲ್.ಭಜಂತ್ರಿ.ಮಾಸಾಭಿ ಯಡೊಳ್ಳಿ. ಸಿ. ಆರ್. ಪಿ ಗಳಾದ ಕುಶಾಲ.ಮುದ್ದಾಪುರ.ರವಿ ನಲವಡೆ.ಎಸ್.ಎಂ.ಕುಂಬಾರ.ವ್ಹಿ.ಸಿ.ಫರೀಟ. ಎಂ.ಎಸ್.ಗಡೇಕಾರ.ಎಫ್.ಜಿ.ಬಾಳೇಕುಂದರಗಿ.ಗ್ರಾಮೀಣ ಶಿಕ್ಷಕರ ಸಂಘದ ಸುನೀಲ ಏಗನಗೌಡರ.ಮೊದಲಾದವರು ಉಪಸ್ಥಿತರಿದ್ದರು.

ಕುಶಾಲ್ ಮುದ್ದಾಪುರ ನಿರೂಪಿಸಿದರು. ಶಿಕ್ಷಕಿ ವೀಣಾ.ಮಹೇಂದ್ರಕರ ಪ್ರಾರ್ಥನಾ ಗೀತೆ ಹಾಡಿದರು.. ಬಿ.ಬಿ.ಮಮದಾಪೂರ ಪ್ರೌಢಶಾಲಾ ವಿದ್ಯಾರ್ಥಿನಿಯರಿಂದ ಸ್ವಾಗತ ಗೀತೆ ಜರುಗಿತು.ಬಿ.ಎನ್.ಬ್ಯಾಳಿ ಸ್ವಾಗತಿಸಿದರು. ಎಸ್.ಬಿ.ಬೆಟ್ಟದ ವಂದಿಸಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group