ಸಿಂದಗಿ; ತಂದೆ-ತಾಯಿಯಂತೆ ಸಮಾನತೆ ಕಾಣತಕ್ಕ ವ್ಯಕ್ತಿ ಎಂದರೆ ದೇಶದ ವಿದ್ಯೆ ನೀಡುವ ಕಾಣ್ಕೆ ಶಿಕ್ಷಕರಿಗೆ ಮಾತ್ರ ಇದೆ ಮಕ್ಕಳು ಫೇಲಾದರೆ ಶಿಕ್ಷಕರೆ ಫೇಲಾದಂತೆ ಕಾರಣ ಶಿಕ್ಷಕರು ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರೆಪ್ಪ ಮನವಿ ಮಾಡಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಜಿಲ್ಲಾ ಪಂಚಾಯತ ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ೨೦೨೫-೨೬ನೇ ಸಾಲಿನಲ್ಲಿ ಉನ್ನತೀಕರಿಸಿದ ೮ ಪ್ರೌಡಶಾಲೆಗಳ ಉದ್ಘಾಟನೆ ಮತ್ತು ಮಾನ್ಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಸಿಪಾಲ್ಟಿ) ಯೋಜನೆ (ಹಂತ-೪)ರ ವಿವೇಚನಾ ಅನುದಾನದಡಿ ರೂ ೫೦ಲಕ್ಷ ವೆಚ್ಚದ ಗುರು ಭವನ ಕಟ್ಟಡದ ಪ್ರಥಮ ಹಂತದ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿ, ರಾಜ್ಯದಲ್ಲಿ ೩೦೯ ಕೆಪಿಎಸ್ ಶಾಲೇಗಳಿದ್ದವು ಮೊನ್ನೆ ನಡೆದ ಬೆಳಗಾವಿ ಅಧಿವೆಶನದಲ್ಲಿ ೯೦೦ ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸುವ ಕಾರ್ಯ ನಡೆದಿದೆ ಇದರಿಂದ ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೆ ಸೂರಿನಲ್ಲಿ ವಿದ್ಯಾಬ್ಯಾಸ ಮಾಡಬಹುದಲ್ಲದೆ ಕೆಇಎಸ್ ಐಎಎಸ್ ಪರೀಕ್ಷೆಯ ಮಾದರಿ ಶಿಕ್ಷಣ ಕಲಿಯಲು ಅನುಕೂಲವಾಗುತ್ತದೆ. ಮುಂದಿನ ವರ್ಷದಿಂದ ಪುಸ್ತಕಗಳ ಜೊತೆಗೆ ನೋಟಬುಕ್ ವಿತರಣೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಶಿಕ್ಷಣ ಇಲಾಖೆಗೆ ಪ್ರೇರಣೆದಾಯಕ ರೀತಿಯಲ್ಲಿ ಅಜೀಮ ಪ್ರೇಮಜಿ ಪೌಂಡೇಶನದಿಂದ ಶಿಕ್ಷಣ ಇಲಾಖೆಗೆ ರೂ. ೧೫೯೧ ಕೋಟಿ ವೆಚ್ಚದಲ್ಲಿ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು ನೀಡಿ ಮಕ್ಕಳ ಪೌಷ್ಠಿಕತೆ ಹೆಚ್ಚಿಸುತ್ತಿದೆ. ಶಿಕ್ಷಕರ ಕಲ್ಯಾಣ ನಿಧಿಯಿಂದ ಇನ್ನೂ ರೂ ೫೦ ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಶಿಕ್ಷಕರ ಕೊರತೆ ನೀಗಿಸುವ ೧೦೮೦೦ ಸರಿಕಾರಿ, ೬ಸಾವಿರ ಅನುದಾನಿತ ಶಾಲೆಗಳಿಗೆ ೫೧ ಸಾವಿರ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು ಶಿಕ್ಷಕರ ಕೊರತೆ ನೀಗಿಸಿದ್ದೇನೆ.
೫೧೬೨೫ ವಿದ್ಯಾರ್ಥಿಗಳು ೬೨೫ಕ್ಕೆ ೬೨೫ ಅಂಕ ಪಡೆದುಕೊಂಡು ಸಾಧನೆ ಮಾಡಿದ್ದಾರೆ.೧ ಲಕ್ಷ ೧೬ ಸಾವಿರ ವಿದ್ಯಾರ್ಥಿಗಳು ಮೂರನೇ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ ಅದಕ್ಕೆ ಮೂರು ಹಂತದ ಪರೀಕ್ಷೆ ಜಾರಿಗೆ ತರಲಾಗಿದೆ. ಸಂಗೀತ ಶಿಕ್ಷಕರ ನೇಮಕಾತಿಯ ಬೇಡಿಕೆಯಿದ್ದು ಕೂಡಲೇ ಸರಿಪಡಿಸುವೆ. ಎಲ್ಲಾ ಸರಕಾರಿ ಶಾಲೆಗಳಿಗೆ ವಿದ್ಯುತ್ ಶಕ್ತಿ ಪೂರೈಕೆ ಮಾಡಲಾಗಿದೆ.ಕೇರಳ, ಆಸಾಂ ಮಾದರಿಯಲ್ಲಿ ಬಡವರು ಎಲ್ಲಾ ಕ್ಷೇತ್ರದಲ್ಲಿ ಅವಕಾಶದಿಂದ ವಂಚಿರಾಗಬಾರದು ಎಂದು ನೌಕರಿ ಪಡೆಯಲು ಶೆ ೩೫ ಅಂಕ ಇದ್ದ ೩೩ ಇಳಿಕೆ ಮಾಡಿದ್ದೇನೆ.. ಬಗರ ಹುಕುಂ ಜಾರಿಗೆ ದಿ. ಮಾಜಿ ಸಿಎಂ ಎಸ್.ಬಂಗಾರಪ್ಪನವರು.ದೈಹಿಕ ಶಿಕ್ಷಕರ ನೇಮಕಾತಿಕೊರಳ್ಳಿ ಗ್ರಾಮದಲ್ಲಿ ಪಿಯು ಕಾಲೇಜು ಮಂಜೂರು ಮಾಡಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ೨೧೦೦ ಜನ ಶಿಕ್ಷಕರ ಸಭೆ ಸಮರಂಭಕ್ಕೆ ಹಿಂದಿನ ಶಾಸಕರು ೧೦ ಮೀಟರ ಅಳತೆಯ ಶಿಕ್ಷಕರ ಭವನೆಕ್ಕೆ ಭೂಮಿ ಪೂಜೆ ಸಲ್ಲಿಸಿದ್ದರು ಗುತ್ತಿಗೆದಾರರ ವಿಳಂಬ ನೀತಿಯಿಂದ ಆ ಕಾರ್ಯ ನಿಂತು ಹೋಗಿತ್ತು ಅದನ್ನು ೧೦೦/ ೪೦ ಅಳತೆಯ ಭವನ ನಿರ್ಮಾಣಕ್ಕೆ ಪ್ರಥಮ ಹಂತದ ಕಾಮಗಾರಿಗೆ ರೂ ೫೦ ಲಕ್ಷ ವೆಚ್ಚದ ಪ್ರಥಮ ಹಂತದ ಶಿಕ್ಷಕರ ಭವನದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇನ್ನೂ ಶಿಕ್ಷಕರ ಕಲ್ಯಾಣ ನಿಧಿಯಿಂದ ರೂ ೫೦ ಲಕ್ಷ ನೀಡುವಂತೆ, ಮೂರು ತಾಲೂಕಿಗೆ ಪ್ರತೇಕ ಹೊಸ ಬಿಇಓ ಕಛೇರಿ ಮಂಜೂರು ಮನವಿ ಮಾಡಿದರು.
ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿ.ವಿ. ಸಾಲಿಮಠ, ಪಿಯು ಡಿಡಿ ಸಿ.ಕೆ ಹೊಸಮನಿ, ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ, ಡೈಟ್ ಕಾಲೇಜಿನ ಉಪನಿರ್ದೇಶಕಿ ಉಮಾದೇವಿ ಸೊನ್ನದ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ. ಯಡ್ರಾಮಿ, ಪ್ರೌಡಶಾಲಾ ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ಶಿವರಾಜ ಬಿರಾದಾರ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಶಾಸಕ ಅಶೋಕ ಮನಗೂಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ. ಪ್ರಕಾಶ ರಾಗರಂಜಿನಿ ಹಾಗೂ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ದೈಹಿಕ ನಿರ್ದೇಶಕ ಡಾ. ರವಿ ಗೋಲಾ ನಿರೂಪಿಸಿದರು. ಬಿಇಓ ಮಹಾಂತೇಶ ಯಡ್ರಾಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮತನಾಡಿದರು. ಬಿಆರ್ಪಿ ಐ.ಎಸ್.ಟಕ್ಕೆ ವಂದಿಸಿದರು.

