ಸಂಗೀತ ಸರಸ್ವತಿ ಪುತ್ರ ಅಭಿಲಾಷ್ ನಾಮದೇವ ಕಾಂಬಳೆ ರವರಿಗೆ ಚಿನ್ನದ ಪದಕ

Must Read

ಸಿಂದಗಿ : ಗೊಂಧಳಿ ಸಮಾಜದ ವರಪುತ್ರ ಅಭಿಲಾಷ್ ನಾಮದೇವ ಕಾಂಬಳೆ ಇವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮಂಗಳೂರು ವಾಡಿ ಯವರು.

ಬಾಲ್ಯದಿಂದಲೇ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಆರಂಭ ಮಾಡಿದರು.

ಪ್ರಯತ್ನಂ ಸರ್ವಸಿದ್ಧಿ ಸಾಧನಂ:

ತಂದೆ ನಾಮದೇವ ಕಾಂಬಳೆ ರವರ ಮಾರ್ಗದರ್ಶನದಲ್ಲಿ ಸತತ ಪ್ರಯತ್ನ, ಶ್ರದ್ಧೆ, ತ್ಯಾಗ, ಪರಿಶ್ರಮದಿಂದ ಸಂಗೀತ ಕಲಾದೇವಿಯ ಆರಾಧನೆಯಿಂದ ಇಂದು ಅಭಿಲಾಷ್ ಅಗಮ್ಯ ಸಾಧನೆಯ ಶಿಖರವನ್ನು ಏರಿದ್ದಾರೆ‌.

ಇವರು ಧಾರವಾಡದ ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜ ಗಾಯಕರಾದ , ದಕ್ಷಿಣ ಭಾರತದ ಏಕೈಕ ಸಾರಂಗಿವಾದಕರಾದ ಉಸ್ತಾದ್ ಫೈಯಾಝ್ ಖಾನ್ ಬೆಂಗಳೂರು , ಇವರಲ್ಲಿ ಕಳೆದ 15 ವರ್ಷ ದಿಂದ ಸಂಗೀತ ಅಭ್ಯಾಸ ಮಾಡಿದರು… ಹಾಗೆಯೇ

ಗದಗಿನ ಪಂಚಾಕ್ಷರಿ ಗವಾಯಿಗಳ ಕಾಲೇಜ್ ನಲ್ಲಿ ಬ್ಯಾಚುಲರ್ ಆಫ್ ಮ್ಯೂಸಿಕ್ (B. Music) ಪದವಿಯನ್ನು ಮುಗಿಸಿದರು, ಅದರ ಜೊತೆ ಸಂಗೀತದಲ್ಲಿ ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ, ವಿದ್ವತ್ ಅಂತಿಮ ಪದವಿಯನ್ನು ಸಂಗೀತದಲ್ಲಿ ಮುಗಿಸಿದರು.

ಹಾಗೆಯೇ ಚಂಡೀಗಢ ವಿಶ್ವವಿದ್ಯಾಲಯದ ಸಂಗೀತ ಭಾಸ್ಕರ್ ಪರೀಕ್ಷೆಯನ್ನೂ ಸಹ ಮುಗಿಸಿ ಸಂಗೀತ ಪದವಿಯನ್ನು ಪಡೆದರು.

ತದನಂತರ ಮಾಸ್ಟರ್ ಆಫ್ ಮ್ಯೂಸಿಕ್ (M. Music) ಸಂಗೀತ ಸ್ನಾತಕೋತ್ತರ ಪದವಿಯನ್ನು ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರ್ಗಿಯಲ್ಲಿ ಮುಗಿಸಿದರು.

ಈಗ ಸಂಗೀತ ಅಧ್ಯಯನ ವಿಭಾಗದ ಮಾಸ್ಟರ್ ಆಫ್ ಮ್ಯೂಸಿಕ್ ( Ma Music) ಸ್ನಾತಕೋತ್ತರ ಪದವಿಯಲ್ಲಿ ಇಡೀ ಗುಲ್ಬರ್ಗಾ University ಗೆ 1st Rank ಬಂದಿದ್ದಾರೆ… ಹಾಗೂ ಚಿನ್ನದ ಪದಕವನ್ನು ಪಡೆದು ಕೊಂಡಿದ್ದಾರೆ.

27-4-2022 ರಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಅಂಬೇಡ್ಕರ್ ಭವನದಲ್ಲಿ , ವಿಶ್ವವಿದ್ಯಾಲಯದ ಕುಲಪತಿಯಾದ ದಯಾನಂದ ಅಗಸರ ಇವರಿಂದ ಹಾಗೂ ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ್ ಇವರಿಂದ ಚಿನ್ನದ ಪದಕವನ್ನು MA Music ಮಾಸ್ಟರ್ ಆಫ್ ಮ್ಯೂಸಿಕ್ ಸ್ನಾತಕೋತ್ತರ ಪದವಿಯಲ್ಲಿ ಪಡೆದಿದ್ದಾರೆ.

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇದು ಗೊಂಧಳಿ ಸಮಾಜವು ಹೆಮ್ಮೆ ಪಡುವಂತಹ ಶ್ರೇಷ್ಠ ಸಾಧನೆಯಾಗಿದೆ. ಗೋಂಧಳಿ ಸಮಾಜದ ವರಪುತ್ರ ಅಭಿಲಾಷ್ ನಾಮದೇವ ಕಾಂಬಳೆ ವರಿಗೆ ಸಮಸ್ತ ಅಖಿಲ ಕರ್ನಾಟಕ ರಾಜ್ಯ ಗೊಂದಳಿ ಸಮಾಜ ಸಂಘದ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group