ಲಿಂಗಾಯತ ಸಂಘಟನೆ ವತಿಯಿಂದ ವಾರದ ಸಾಮೂಹಿಕ ಪ್ರಾರ್ಥನೆ
ರವಿವಾರ ದಿ 8 ರಂದು ಬೆಳಗಾವಿ ನಗರದ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ವಾರದ ಸಾಮೂಹಿಕ ಪ್ರಾರ್ಥನೆ ಜರುಗಿತು.
ಕಾರ್ಯಕ್ರಮದಲ್ಲಿ ವಚನ ನಿವ೯ಚನ ಮಾಡಿ ಶಂಕರ ಗುಡಸ ಮಾತನಾಡಿ 12ನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಮಾಡಿದ ಕ್ರಾಂತಿ ನಿಜಕ್ಕೂ ಅದ್ಭುತವಾದದ್ದು. ಎಲ್ಲ ಶರಣರ ನೇತೃತ್ವ ವಹಿಸಿ ಶರಣರನ್ನು ಒಗ್ಗೂಡಿಸುವ, ಬೆಳೆಸುವ ಮತ್ತು ಕಾಯಕ ಕರ್ಮವನ್ನು ತಿಳಿದುಕೊಳ್ಳುವ ಕೆಲಸ ಮಾಡಿದರು. ಶರಣರಲ್ಲಿಯೂ ಸಹ ಇದ್ದ ತೊಡಕುಗಳ ನಿವಾರಣೆಗೆ ಶ್ರಮಿಸಿದರು. ನಮ್ಮ ದೇಹವೇ ಒಂದು ಹೊಲವಿದ್ದಂತೆ ಅದನ್ನೇ ನಿಜವಾಗಿ ಕೃಷಿ ಮಾಡಿದರೆ ಎಲ್ಲವನ್ನು ಸಾಧಿಸಬಹುದು. ಮನಸ್ಸೆಂಬುದನ್ನು ನಿಯಂತ್ರಣದಲ್ಲಿಟ್ಟು ಕೃಷಿ ಮಾಡಿದರೆ ಬೇಕಾದನ್ನು ಸಾಧಿಸಬಹುದು ಸನ್ನಡತೆಯೇ ಶರಣರ ಪಥವಾಗಿತ್ತು ಎಂದು ವಿವಿಧ ವಿಚಾರಗಳನ್ನು ವಿಶ್ಲೇಷಣೆ ಮಾಡುತ್ತ ತಿಳಿ ಹೇಳಿದರು.
ಇದೇ ಸಂದರ್ಭದಲ್ಲಿ ಫಕಿರಪ್ಪ ಕರಿಕಟ್ಟಿ ಅವರ 75 ನೇ ಜನ್ಮದಿನಾಚರಣೆ ಆಚರಿಸಲಾಯಿತು. ಯೋಗ ಗುರುಗಳಾದ ಸಿದ್ದಪ್ಪ ಸಾರಾಪೂರೆ ಯವರು ಬಿಗಿಯಾದ ನರಗಳನ್ನು ಸಡಿಲಗೊಳಿಸುವ ಕಾರ್ಯ ತಂತ್ರವನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರಸ್ತುತಪಡಿಸಿದರು.
ಶರಣ ಸುನೀಲ ಸಾಣಿಕೊಪ್ಪ ರವರು ನಾವು ಆಡುವ ನುಡಿಯಿಂದ ಆಗುವ ಒಳ್ಳೆಯತನ ಮತ್ತು ಕೆಡಕುಗಳ ವಿಶ್ಲೇಷಣೆಯನ್ನು ನುಡಿ ಕುರಿತಾದ ವಚನಗಳನ್ನು ವಿವರಿಸುತ್ತಾ ಹೇಳಿದರು.
ಅಕ್ಕಮಹಾದೇವಿ ತೆಗ್ಗಿ, ಬಿ.ಪಿ.ಜೇವಣಿ,ವಿ.ಕೆ. ಪಾಟೀಲ, ಮಹಾದೇವಿ ಅರಳಿ, ಬಸವರಾಜ ಬಿಜ್ಜರಗಿ,ಕುಮಾರಿ ಕರಿಕಟ್ಟಿ ,ಮಹಾದೇವ ಕೆ೦ಪಿಗೌಡರ,ಸೇರಿದಂತೆ ಹಲವು ಶರಣರು ವಚನಗಳ ವಿಶ್ಲೇಷಣೆ ಮಾಡಿದರು. ಸದಾಶಿವ ದೇವರಮನಿ, ಶ೦ಕ್ರಣ್ಣ ಮೆಣಸಗಿ, ಗುರುಸಿದ್ದಪ್ಪ ರೇವಣ್ಣವರ, ಆನಂದ ಕರ್ಕಿ,ಬಸವರಾಜ ಪೂಜೇರಿ,ಮಹಾಂತೇಶ ಇಂಚಲ,.ಎಫ್ ಬಿ ಕರಿಕಟ್ಟಿ.
ಪ್ರಸಾದ ಹಿರೇಮಠ,ಮಹಾಂತೇಶ ಮೆಣಸಿನಕಾಯಿ, ದೊಡಗೌಡ ಪಾಟೀಲ, ರುದ್ರಗೌಡ ಪಾಟೀಲ,ಗಂಗಪ್ಪ ಉಣಕಲ್,ಶಿವಾನಂದ ನಾಯಕ,ಬಸವರಾಜ ಕರಡಿಮಠ, ಶ೦ಕರ ರಾವಳ,ಕೆಂಪಣ್ಣಾ ರಾಮಾಪೂರೆ,ಶೇಖರ ವಾಲಿಇಟಗಿ, ದಂಪತಿಗಳು,ಶಿವಾನಂದ ನಾಯಕ,ಎಸ್ ಎಸ್ ಪೂಜೇರ, ಗಂಗಾಧರ ಹಿತ್ತಲಮನಿ,ಶಿವಾನಂದ ತಲ್ಲೂರ, ಸುದೀಪ ಪಾಟೀಲ ಸೇರಿದಂತೆ ಶರಣಶರಣೆಯರು ಉಪಸ್ಥತರಿದ್ದರು.
ಸುರೇಶ ನರಗುಂದ ಸ್ವಾಗತಿಸಿ ವಚನ ಪ್ರಾರ್ಥನೆ ನಡೆಸಿಕೊಟ್ಟರು ಸಂಗಮೇಶ ಅರಳಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.