ಯೋಗದಿಂದ ಆರೋಗ್ಯ ಸುಧಾರಣೆ ಸಾಧ್ಯ- ಶಿಕ್ಷಕ ಕಬ್ಬೂರ

Must Read

ಸವದತ್ತಿ:- “ಯೋಗವೆಂದರೆ ಅದು ಕೇವಲ ವ್ಯಾಯಾಮವಲ್ಲ, ಅದೊಂದು ಸಂಜೀವಿನಿ, ಯೋಗವು ದೇಹ ಮತ್ತು ಆತ್ಮದೊಂದಿಗೆ ಮನಸ್ಸನ್ನು ಏಕೀಕರಿಸುವ ಸಾಧನವಾಗಿದ್ದು, ಅದು ನಮ್ಮ ದೇಹ ಮತ್ತು ಪ್ರಜ್ಞೆಯನ್ನು ಒಗ್ಗೂಡಿಸುತ್ತದೆ, ಆದ್ದರಿಂದ ಇಂದಿನ ಜಗತ್ತಿನಲ್ಲಿ ಸಾಮರಸ್ಯ ಮತ್ತು ವಿಶ್ವ ಶಾಂತಿಗಾಗಿ ಯೋಗವು ಅತೀ ಅವಶ್ಯಕವಾಗಿದೆ. ಯೋಗದಿಂದ ನಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಆರೋಗ್ಯದಲ್ಲಿ ಸುಧಾರಣೆ ಸಾಧ್ಯ, ಯೋಗವು ಭಾರತೀಯ ಸಂಸ್ಕೃತಿಯ ಪ್ರತೀಕ ಎಂಬುದು ನಮ್ಮ ಹೆಮ್ಮೆ” ಎಂದು ಶಿಕ್ಷಕ ಹಾಗೂ ನೌಕರ ಸಂಘದ ಕಾರ್ಯದರ್ಶಿ ಎನ್.ಎನ್.ಕಬ್ಬೂರ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಪಟ್ಟಣದ ಸ.ಕಿ.ಪ್ರಾ ಕನ್ನಡ ಶಾಲೆ ನಂ-6 ರಲ್ಲಿ “ಅಂತರರಾಷ್ಟ್ರೀಯ ಯೋಗ ದಿನಾಚರಣೆ”ಯಲ್ಲಿ ಮಾತನಾಡಿದ ಅವರು ಯೋಗದಲ್ಲಿನ ನಿಂತು ಮಾಡುವ ಆಸನಗಳು, ಕುಳಿತು ಮಾಡುವ ಆಸನಗಳು, ಮಲಗಿ ಮಾಡುವ ಆಸನಗಳು, ಪ್ರಾಣಾಯಾಮ, ಧ್ಯಾನಗಳ ಮಹತ್ವ ಮತ್ತು ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಿದರು.

ನಂತರ ಕೆಲವು ಆಸನಗಳನ್ನು ಮಕ್ಕಳಿಂದ ಪ್ರಾಯೋಗಿಕವಾಗಿ ಮಾಡಿಸಲಾಯಿತು. ಈ ವೇಳೆ ಶಿಕ್ಷಕಿ ಎಮ್.ಆರ್.ಫಂಡಿ, ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿಯವರು, ಪಾಲಕ-ಪೋಷಕರು ಮತ್ತು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group