ಧಾರವಾಡ ಗ್ರಾಮೀಣ BRC- BIERT ಸಂಪನ್ಮೂಲ ವ್ಯಕ್ತಿಗಳಾಗಿ ರುವ ಶ್ರೀಮತಿ ವಿ. ಎನ್. ಕೀರ್ತಿ ವತಿ ಯವರು ಅಮೇರಿಕ ವಿದೇಶ ಪ್ರಯಾಣ ಕೈಗೊಳ್ಳುವ ನಿಮಿತ್ತ ಅವರಿಗೆ ದಿ. 06 ರಂದು ಸಾಯಂಕಾಲ 6-00 ಗಂಟೆಗೆ ಶಿಕ್ಷಕ ಭವನ ಧಾರವಾಡದಲ್ಲಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿ ಧಾರವಾಡ ವತಿಯಿಂದ ವಿದೇಶಿ ಪ್ರಯಾಣ ಸುಖಕರವಾಗಿರಲಿ ಎಂದು ಎಲ್ಲ ಪದಾಧಿಕಾರಿಗಳು ಶುಭ ಕೋರಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಧಾರವಾಡ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕನವರ ಉಪಸ್ಥಿತರಿದ್ದು ಶುಭ ಕೋರಿದರು.ಸಂಘದ / BGVS ಪದಾಧಿಕಾರಿಗಳಾದ ಗುರು ತಿಗಡಿ ಅಧ್ಯಕ್ಷರು, ಶಂಕರಪ್ಪ ಘಟ್ಟಿ ಪ್ರಧಾನ ಕಾರ್ಯದರ್ಶಿ, S.B.ಶಿವಶಿಂಪಿ ಜಿಲ್ಲಾ ಕಾರ್ಯದರ್ಶಿ,A.H.ನದಾಫ ಗೌರವಾಧ್ಯಕ್ಷರು
ಚಂದ್ರಶೇಖರ ತಿಗಡಿ ತಾ.ಕಾರ್ಯದರ್ಶಿ ಶ್ರೀಮತಿ H.F.ಸಮುದ್ರಿ ಉಪಾಧ್ಯಕ್ಷರು BGVS ಹಾಗೂ ಎಲ್ಲ ಹಂತದ ಪದಾಧಿಕಾರಿಗಳು ಹಾಗೂ BRP-CRP ಗಳು ಶಿಕ್ಷಕ-ಶಿಕ್ಷಕಿಯರು ಉಪಸಿತರಿದ್ದರು.