ಸಮನ್ವಯ ಶಿಕ್ಷಣ ಕುರಿತು ಮುರಗೋಡ ಮತ್ತು ಯರಗಟ್ಟಿ ವಲಯದ ಪ್ರಧಾನ ಗುರುಗಳ ಗೂಗಲ್ ಮೀಟ್

Must Read

ಸವದತ್ತಿ – 2021-22 ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಕಾರ್ಯ ಚಟುವಟಿಕೆಗಳ ಕುರಿತಂತೆ ಗೂಗಲ್ ಮೀಟ್ ಮೂಲಕ ಮುರಗೋಡ ಮುಂಜಾನೆ 11 ರಿಂದ 12.30 ರ ವರೆಗೆ ಮತ್ತು ಯರಗಟ್ಟಿ ವಲಯ ಮದ್ಯಾಹ್ನ 3 ರಿಂದ 4.30 ರ ವರೆಗೆ ಸರಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಜರುಗಿಸಲಾಯಿತು.ಈ ಕಾರ್ಯಕ್ರಮದಲ್ಲಿ ಮುರಗೋಡ ಮತ್ತು ಯರಗಟ್ಟಿ ವಲಯದ ಮುಖ್ಯೋಪಾಧ್ಯಾಯರುಗಳು ಉಪಸ್ಥಿತರಿದ್ದರು.

ಸಮನ್ವಯ ಶಿಕ್ಷಣ ಕುರಿತು ಪ್ರಾಸ್ತಾವಿಕವಾಗಿ ಎಸ್.ಬಿ.ಬೆಟ್ಟದ ಪ್ರಾರಂಭದಲ್ಲಿ ಮಾತನಾಡಿದರು. ನಂತರ ಎಂ.ಎಂ.ಸಂಗಮ 21 ವಿಕಲತೆಗಳ ಪರಿಚಯ.ಎಸ್.ಎ.ಟಿ.ಎಸ್.ನಲ್ಲಿ ದಾಖಲಿಸುವುದು ಕುರಿತು ಮಾಹಿತಿಯನ್ನು ತಿಳಿಸಿದರು.

ನಂತರ ವೈ.ಬಿ.ಕಡಕೋಳ ಮಾತನಾಡಿ ಮಕ್ಕಳ ದಾಖಲಾದ ನಂತರ ಅವರ ಮಾಹಿತಿಯನ್ನು ಯಾವ ರೀತಿ ಇಡಬೇಕು. ಮಗುವಿನ ಪೂರ್ಣ ವಿವರ. ಬ್ಯಾಂಕ್ ಖಾತೆ ಸಂಖ್ಯೆ. ಆಧಾರ ಮಾಹಿತಿ. ವೃದ್ಯಕೀಯ ಪ್ರಮಾಣಪತ್ರ. ಯು.ಡಿ.ಐ.ಡಿ ಕಾರ್ಡಗೆ ಸಂಬಂಧಿಸಿದಂತೆ ಮಾಹಿತಿಯನ್ನು ಯಾವ ರೀತಿಯಲ್ಲಿ ಇಟ್ಟುಕೊಂಡು ಅದರ ಜೊತೆಗೆ ಗೃಹ ಆಧಾರಿತ ಮಕ್ಕಳಿಗೆ ಸಂಬಂಧಿಸಿದ ನಮೂನೆಯ ಭರ್ತಿ ಮಾಡುವ ಕುರಿತು ಮಾಹಿತಿ ನೀಡುತ್ತ ಸದರಿ ವಿವರದ ನಮೂನೆಗಳನ್ನು ಸಂಬಂಧಿಸಿದ ಬಿ.ಐ.ಇ.ಆರ್.ಟಿ ಯವರಿಗೆ ಒದಗಿಸುವ ಕುರಿತು ತಿಳಿಸಿದರು. ಸಿ.ವ್ಹಿ.ಬಾರ್ಕಿ ಮಾತನಾಡುತ್ತ ಶಾಲೆಯಲ್ಲಿ ಇಡಬೇಕಾದ ದಾಖಲಾತಿಗಳು ಮತ್ತು ವಿಕಲಚೇತನ ಮಕ್ಕಳಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ಮುರಗೋಡ ವಲಯದ ನಿರ್ವಹಣೆಯನ್ನು ಸಮೂಹ ಸಂಪನ್ಮೂಲ ವ್ಯಕ್ತಿ ಮೋಹನ ಬಾಳೇಕುಂದರಗಿ ಮತ್ತು ಯರಗಟ್ಟಿ ವಲಯದ ನಿರ್ವಹಣೆಯನ್ನು ಶಿವಾನಂದ ಮಿಕಲಿ ಸ್ವಾಗತಿಸುವುದರೊಂದಿಗೆ ವಂದನಾರ್ಪಣೆ ಮಾಡಿದರು.

Latest News

ಕ್ರಿಯೇಟಿವ್ ಕಿಡ್ಸ್ ಹೋಮ್‌ನಲ್ಲಿ 77ನೇ ಗಣರಾಜ್ಯೋತ್ಸವ 

ಸಿಂದಗಿ: ಪ್ರಪ್ರಜೆಗಳು ಪ್ರಜೆಗಳಾಗಿ ಆಳುವ ದೇಶ ಕಟ್ಟುವಲ್ಲಿ ಶ್ರಮಿಸಿದ ರಾಷ್ಟ್ರನಾಯಕರನ್ನು ನಾವೆಲ್ಲರೂ ಸ್ಮರಿಸೋಣ ಎಂದು ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಜ್ಯೋತಿ ಪೂಜಾರ ಹೇಳಿದರು.ಪಟ್ಟಣದ ಕ್ರಿಯೇಟಿವ್...

More Articles Like This

error: Content is protected !!
Join WhatsApp Group