ಹಾಸನ -“೪ಉತ್ತಮ ಕೃತಿಯೊಂದು ಕಾಲಘಟ್ಟದ ಕನ್ನಡಿಯಾಗಿದ್ದು ಅಂದಿನ ಸಂಸ್ಕೃತಿಯ ದಾಖಲೆಯಾಗಿರುತ್ತದೆ” ಎಂದು ಲೇಖಕ ಗೊರೂರು ಶಿವೇಶ್ ಅಭಿಪ್ರಾಯಪಟ್ಟರು.
ಅವರು ಹಾಸನದ ಹಾಸನಾಂಬ ಥಿಯಸಾಫಿಕಲ್ ಸೊಸೈಟಿಯ ಗ್ರಂಥಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 323ನೇ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಗೊರೂರು ಸೋಮಶೇಖರವರ ಬದುಕು ಬರಹ, ಅವರ ಗೊರೂರು ನೆನಪುಗಳು ಹಾಗೂ ಬಸವಣ್ಣನ ಪುರಾತ ದಾಸಿಮಯ್ಯ ಕೃತಿಗಳ ಕುರಿತು ಮಾತನಾಡಿದರು.
“ಗೊರೂರು ರಾಮಸ್ವಾಮಿ ಅಯ್ಯಂಗಾರ್ ರ ನಂತರದ ಕಾಲಘಟ್ಟದ ಗ್ರಾಮೀಣ ಬದುಕನ್ನು ಕಟ್ಟಿ ಕೊಟ್ಟಿರುವ ಗೊರೂರು ನೆನಪುಗಳು ನಮ್ಮೂರಿನ ರಸಿಕರಷ್ಟೇ ಮಹತ್ವದ ಕೃತಿ ಯಾಗಿದ್ದು ಗ್ರಾಮೀಣ ಬದುಕಿನ ಶ್ರೀಮಂತಿಕೆಯನ್ನು ಗೊರೂರು ಸೋಮಶೇಖರರು ಪಡಿಮೂಡಿಸಿದ್ದಾರೆ. ಕೃತಿಯಲ್ಲಿ ಮಾದರಿ ಗ್ರಾಮವೊಂದರ ಜಾನಪದ ,ಸಾಮಾಜಿಕ ಸಾಂಸ್ಕೃತಿಕ ಅಂಶಗಳ ಪ್ರಸ್ತುತಿ ಇದ್ದು ಗೊರೂರಿನ ಅಣೆಕಟ್ಟಿನ ನಿರ್ಮಾಣ ಸಂದರ್ಭ ಮುಳುಗಡೆಯಾದವರ ಚಿತ್ರಣ ಮನಮಿಡಿಯುವಂತೆ ಮೂಡಿಬಂದಿದೆ . ಜಾನಪದರ ವನದೇವತೆ ಬಂದಮ್ಮನ ಐತಿಹ್ಯ, ಜಾನಪದ ಹಿನ್ನೆಲೆ, ಆಚರಣೆಯ ಕುರಿತಾಗಿ ವಿಶ್ಲೇಷಣಾತ್ಮಕವಾಗಿ ದಾಖಲಿಸಿದ್ದಾರೆ. ಅವರ ಮತ್ತೊಂದು ಮಹತ್ವದ ಕೃತಿ ಬಸವಣ್ಣನ ಪುರಾತ ದಾಸಿಮಯ್ಯ ಸಂಶೋಧನಾತ್ಮಕ ಬರಹಗಳ ಸಂಗ್ರಹವಾಗಿದ್ದು ಕೃತಿಯಲ್ಲಿ ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಇಬ್ಬರೂ ಬೇರೆಯಲ್ಲ, ಒಬ್ಬರೇ ಎಂಬುದನ್ನು ವಿಶ್ಲೇಷಿಸಿದ್ದಾರೆ” ಎಂದರು.
ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಪ್ರಾಂಶುಪಾಲ ಡಾ. ಎಂ ಆರ್ ಚಂದ್ರಶೇಖರ್ ಮಾತಾಡಿ “ಗೊರೂರಿನ ಎ ಎನ್ ವಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೊರೂರು ಸೋಮಶೇಖರರು ಎಚ್ ಆರ್ ನಿಂಗಪ್ಪನವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಅನೇಕ ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು” ಎಂದರು
ಕಾರ್ಯಕ್ರಮದಲ್ಲಿ ಆರ್. ರಾಮಶಂಕರಬಾಬು
ಸುಶೀಲಾ ಸೋಮಶೇಖರ್, ಚಂದ್ರಕಾಂತ ಪಡೆಸೂರು, ಜಮುನಾ ಗೊರೂರು, ಕಟ್ಟೇಮನೆ ನಾಗೇಂದ್ರ, ,ಕೆ. ಎನ್. ಚಿದಾನಂದ, ಲಲಿತ ಎಸ್. ,ಜಿ.ಆರ್ ಶ್ರೀಕಾಂತ್ ಕವಿತೆ ವಾಚಿಸಿದರು. ಗಾಯಕರಾದ ಧನಲಕ್ಷ್ಮಿ, ಪೊಲೀಸ್ ನಂಜಪ್ಪ, ಗೋಪಾಲಕೃಷ್ಣ ಕನ್ನಡ ಗೀತೆಗಳು ಹಾಡಿದರು. ಈ ಬಾರಿ ಜಿಲ್ಲಾಡಳಿತದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಯಾಕೂಬ್ ಗೊರೂರು, ಬ್ಯಾಟಾಚಾರ್ ರನ್ನು ಮನೆ ಮನೆ ಕವಿಗೋಷ್ಠಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಗೊರೂರು ಶಿವೇಶ್ ಎಂ.ಆರ್ ಚಂದ್ರಶೇಖರ್ ಹಾಗೂ ಗಾಯಕ ಶ್ರೀಕಾಂತ್ ರವರನ್ನು ಗೌರವಿಸಲಾಯಿತು.
ಮನೆ ಮನೆ ಕವಿಗೋಷ್ಠಿ ಸಂಚಾಲಕ ಗೊರೂರು ಆನಂತರಾಜು, ಪಾಪಣ್ಣ ಶೆಟ್ಟಿ.ಎನ್ ದಕಾಂತಾಮಣಿ ಜಿ. ಬಿ, ಶಕುಂತಲ, ಎ. ಎಸ್. ಕುಮಾರ್
ಬಿ. ಎಸ್. ಪರಮೇಶ್ , ಎನ್. ಕೆ. ಶ್ರೀನಿವಾಸ ಶೆಟ್ಟಿ
ಜಯದೇವಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಚಂದ್ರಕಾಂತ ಪಡೆಸೂರ್ ಕಾರ್ಯಕ್ರಮವನ್ನು ನಿರೂಪಿಸಿದರು.