ಸಿಂದಗಿ: ದೇಶದ ಸ್ವಾತಂತ್ರ್ಯ ಕ್ಕಾಗಿ ಅನೇಕ ಮಹನೀಯರ ತ್ಯಾಗ, ಬಲಿದಾನ ಹಾಗೂ ಶಾಂತಿಯುತ ಹೋರಾಟ ಆಗಿದೆ. ಕ್ರಾಂತಿಯ ಕಹಳೆಯ ಮೂಲಕ ಸ್ವಾತಂತ್ರ್ಯ ಪಡೆಯಲಾಗಿದೆ ಗಡಿಯಲ್ಲಿ ನಮ್ಮೆಲ್ಲರ ರಕ್ಷಣೆಗೆ ಸದಾ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಯೋಧರನ್ನು ದಿನನಿತ್ಯ ಒಮ್ಮೆಯಾದರು ನೆನೆಯಬೇಕು ಅಂದಾಗ ಸ್ವಾತಂತ್ರ್ಯ ಪಡೆದುದಕ್ಕೂ ಸ್ವಾರ್ಥಕವಾಗುತ್ತದೆ ಎಂದು ನಿವೃತ್ತ ಪೊಲೀಸ ಅದಿಕಾರಿ ಸಂಸ್ಥೆಯ ನಿರ್ದೇಶಕ ಎಂ.ಎಂ.ಹಂಗರಗಿ ಹೇಳಿದರು.
ತಾಲೂಕಿನ ಯರಗಲ್ ಗ್ರಾಮದ ಸಿದ್ದಶಂಕರಾನಂದ ಪ್ರೌಡಶಾಲೆಯ ಆವರಣದಲ್ಲಿ ೭೯ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ೧೯೪೭ರಲ್ಲಿ ಬ್ರೀಟೀಷರ ದಾಸ್ಯದಿಂದ ಪಡೆದ ಸ್ವಾತಂತ್್ರ್ಯೋತ್ಸವವನ್ನು ರಾಷ್ಟೀಯ ಹಬ್ಬವಾಗಿ ಸಂಭ್ರಮದಿಂದ ಆಚರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಬರೀ ವಿದ್ಯಾರ್ಥಿಗಳ ಪಾತ್ರವಷ್ಟೆ ಅಲ್ಲ ಪಾಲಕರು ಕೂಡಾ ಸಂಭ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಕುಲಕರ್ಣಿ, ನಿರ್ದೆಶಕ ಭೀಮಣ್ಣ ಹೆರೂರ, ಹಣಮಂತ ಮಂಟೋಳಿ, ಅಲ್ಲಿಸಾಬ ಬಂಕಲಗಿ, ಶಾಂತಪ್ಪ ಮರಡಿ, ಶಿವಾನಂದ ಪಲ್ಲೇದ, ಮುಖ್ಯೋಪಾಧ್ಯಾಯ ಅರುಣಕುಮಾರ ನಾಯ್ಕೋಡಿ, ರಾಜು ಯಡ್ರಾಮಿ, ಮಲ್ಲಿಕಾರ್ಜುನ ಅಂಬಿಗೇರ, ಅಶ್ವಿನಿ ಚವ್ಹಾಣ, ಸೇರಿದಂತೆ ಸಿಬ್ಬಂದಿ ವರ್ಗ ಇದ್ದರು.