ಸಿಂದಗಿ: 2024-25 ನೇ ಸಾಲಿಗೆ ತಾಲ್ಲೂಕಿನ ಸರಕಾರಿ ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ) ಸಿಂದಗಿ ಶಾಲೆಗೆ 6ನೇ ತರಗತಿಗೆ ಪ್ರವೇಶ ಪಡೆಯಲು ಈ ವರ್ಷ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಪಾಲಕರು ತಮ್ಮ ಮಕ್ಕಳ ಅರ್ಜಿಯನ್ನು www.schooleducation.kar.nic.inಮತ್ತು www.vidyavahini.karnataka.gov.in ವೆಬ್‍ಸೈಟ್ ಬಳಸಿ ದಿನಾಂಕ 17-01-2024 ರಿಂದ 06-02-2024 ರವರೆಗೆ ಆನ್‍ಲೈನ್‍ನಲ್ಲಿ ಸಲ್ಲಿಸಲು ಅವಕಾಶವಿರುತ್ತದೆ ಹಾಗೂ ಕೊನೆಯ ದಿನಾಂಕ 06-02-2024 ಆಗಿದ್ದು ಆನ್‍ಲೈನ್‍ನಲ್ಲಿ ಅರ್ಜಿಗೆ ಸಂಬಂಧಿಸಿದ ದಾಖಲೆಗಳ ವಿವರಗಳನ್ನು ತಪ್ಪಿಲ್ಲದಂತೆ ಭರ್ತಿ ಮಾಡಿ ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸುವುದು . ನಂತರದ ದಿನಗಳಲ್ಲಿ ತಮ್ಮ ಮಕ್ಕಳ ಅರ್ಜಿಗೆ ಸಂಬಂಧಿಸಿದಂತೆ ಸಂದೇಶಗಳನ್ನು ಅರ್ಜಿಯಲ್ಲಿ ಒದಗಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವದರಿಂದ ಪಾಲಕರು ತಮ್ಮದೇ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಬಳಸುವುದು. ಯಾವುದೇ ರೀತಿಯಲ್ಲಿ ಬೇರೆ ವ್ಯಕ್ತಿಯ ಮೊಬೈಲ್ ಸಂಖ್ಯೆ ಬಳಸಿದ್ದಲ್ಲಿ ಪಾಲಕರೇ ಹೊಣೆಗಾರರಾಗುತ್ತಾರೆ.
ಪ್ರವೇಶ ಪರೀಕ್ಷೆಯಲ್ಲಿ 5ನೇ ತರಗತಿಗೆ ಸಂಬಂಧಿಸಿದ ಕಲಿಕಾಂಶಗಳನ್ನಾಧರಿಸಿ ಕನ್ನಡ-16, ಇಂಗ್ಲೀಷ್ -16, ಗಣಿತ-16, ವಿಜ್ಞಾನ-16, ಸ.ವಿಜ್ಞಾನ -16, ಸಾಮಾಣ್ಯ ಜ್ಞಾನ -10 ಮತ್ತು ಬೌದ್ಧಿಕ ಸಾಮರ್ಥ್ಯ -10 ಒಟ್ಟು 100 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಪ್ರಶ್ನೆಪತ್ರಿಕೆ ವಸ್ತುನಿಷ್ಠ ಪ್ರಶ್ನೆಗಳನ್ನು ಒಳಗೊಂಡಿದ್ದು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸರಕಾರಿ ಆದರ್ಶ ವಿದ್ಯಾಲಯದ ಮುಖ್ಯಗುರುಗಳಾದ ಎಸ್.ಕೆ. ಬಿರಾದಾರ ರವರ ಮೊ.ಸಂ 9900364063 ಗೆ ಸಂಪರ್ಕಿಸುವುದು ಹಾಗೂ ಪರೀಕ್ಷೆಯ ದಿನಾಂಕ 03-03-2024 ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಈ ಕೆಳಕಂಡ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಅರ್ಜಿ ಸಲ್ಲಿಸುವುದು.
ಪಾಸ್ ಪೋರ್ಟ್ ಆಳತೆಯ ಭಾವಚಿತ್ರ, ಆಧಾರ ಕಾರ್ಡ, ಮೋ.ಸಂಖ್ಯೆ , ಮೀಸಲಾತಿ ಪಡೆಯುತ್ತಿದ್ದಲ್ಲಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಿಂದ ಪಡೆದ ಆದಾಯ/ಜಾತಿ/ವಿಶೇಷಚೇತನ /ವಾಸಸ್ಥಳ ಪ್ರಮಾಣ ಪತ್ರ, ಪೋಷಕರ ದೂರವಾಣಿ ಸಂಖ್ಯೆ ಆಯಾ ತಾಲ್ಲೂಕಿನ ಖಾಯಂ ನಿವಾಸಿಗಳಾದ ಮಕ್ಕಳಿದ್ದಲ್ಲಿ ಹೊರ ರಾಜ್ಯ /ಜಿಲ್ಲೆ /ತಾಲ್ಲೂಕುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ವ್ಯಾಸಂಗ ಪ್ರಮಾಣ ಪತ್ರವನ್ನು ಪಡೆದು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಈ ವ್ಯಾಸಂಗ ಪ್ರಮಾಣ ಪತ್ರ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಯು ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದು ಶಾಲೆಗೆ ದಾಖಲಾಗುವ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ ವಾಸಸ್ಥಳ ದೃಢೀಕರಣ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಕೆಯ ಮುಂಚೆ ಮೇಲೆ ಉಲ್ಲೇಖಿಸಿದ ವೆಬ್‍ಸೈಟ್‍ನಲ್ಲಿ ನೀಡಿದ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಓದಿಕೊಂಡು ಅರ್ಜಿ ಸಲ್ಲಿಸುವುದು.