ಬೀದರ: ಕರ್ನಾಟಕದಲ್ಲಿ ಯಾವತ್ತೂ ಹೀಗೆ ಆಗಿರಲಿಲ್ಲ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ, ಮೈಸೂರು ಮಹಾರಾಜರ ಕಾಲದಿಂದಲೂ ಉತ್ಕೃಷ್ಟ ರಾಜ್ಯವಾಗಿದೆ. ಇಂತಹ ಘಟನೆಗಳನ್ನು ಬಿಹಾರ, ಉತ್ತರ ಪ್ರದೇಶಗಳಲ್ಲಿ ಕೇಳ್ತಿದ್ವಿ. ಕರ್ನಾಟಕದಲ್ಲೂ ಇಂತಹ ಘಟನೆ ನಡೆದು ಹೋಗಿ, ರಾಷ್ಟ್ರದ್ರೋಹದ ಸಾಲಿನಲ್ಲಿ ನಿಲ್ಲಿಸಿದೆ. ಇಂತಹ ದ್ರೋಹಿಗಳನ್ನು ಮುಚ್ಚಿಡುವ ಪ್ರಯತ್ನ ದುರಂತ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಬೀದರ್ನಲ್ಲಿ ಮಾತನಾಡಿದ ಸೂಲಿಬೆಲೆ ಅವರು, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಆರೋಪ ಸಂಬಂಧ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನಸೌಧ ಪ್ರಜಾಪ್ರಭುತ್ವದ ದೇಗುಲ. ಸಂವಿಧಾನ, ಪ್ರಜಾಪ್ರಭುತ್ವ ಉಳಿಸೋ ಕೆಲಸ ಮಾಡ್ಕೊಂಡು ಬಂದ ಸರ್ಕಾರ, ಅವರಿಂದ ರಾಷ್ಟ್ರದ್ರೋಹಿ ಘೋಷಣೆ ಕೂಗಿಸಿದ್ದಾರೆ ಅಂತಾ ನಾನು ಹೇಳಲ್ಲ. ಕೂಗಿದವರನ್ನು ಬಂಧಿಸದೇ ಹೇಡಿತನ ಪ್ರದರ್ಶನ ಮಾಡಿದ್ದಾರೆ. ಇದು ಪಾಕಿಸ್ತಾನದ ಬೆಂಬಲಕ್ಕೆ ನಿಂತಿರುವ ಸರ್ಕಾರ ಅನಿಸುತ್ತೆ ಎಂದರು.
ದೇಶದ್ರೋಹಿಗಳನ್ನು ಬಂಧಿಸುತ್ತಾರೆಂಬ ವಿಶ್ವಾಸ ನನಗಿಲ್ಲ. ಕಾಂಗ್ರೆಸ್ ಸರ್ಕಾರ ಬಂದಿರುವುದೇ ಮುಸ್ಲಿಂರ ಓಟಿನಿಂದ ಅಂತ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಮುಸಲ್ಮಾನರನ್ನು ಬಂಧಿಸುವ ಕೆಲಸ ಅವರು ಮಾಡಲ್ಲ. ರಾಜ್ಯ ಸರ್ಕಾರದಿಂದ ಹೊಸ ನಿರೀಕ್ಷೆ ಇಲ್ಲ ಎಂದು ಬಾಲ್ಕಿಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ