Homeಸುದ್ದಿಗಳುಗುತ್ತಿ ಬಸವಣ್ಣ ಏತ ನೀರಾವರಿಯಲ್ಲಿ ಸ್ಕಾಡಾ ಗೇಟ್ ನಿರ್ಮಾಣಕ್ಕೆ ಒಪ್ಪಿಗೆ

ಗುತ್ತಿ ಬಸವಣ್ಣ ಏತ ನೀರಾವರಿಯಲ್ಲಿ ಸ್ಕಾಡಾ ಗೇಟ್ ನಿರ್ಮಾಣಕ್ಕೆ ಒಪ್ಪಿಗೆ

ಸಿಂದಗಿ: ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯಲ್ಲಿ ಸ್ಕಾಡಾಗೇಟ್ ನಿರ್ಮಾಣವಾದರೆ ಹೆಚ್ಚಿನ ರೈತರಿಗೆ ಅನುಕೂಲವಾಗಲಿದೆ ಎಂಬ ಮನವಿ ಶಾಸಕರು ಸರ್ಕಾರಕ್ಕೆ ಸಲ್ಲಿಸಿದ್ದು, ಈ ಹಿಂದೆ ತಾಂಬಾ ಗ್ರಾಮದಲ್ಲಿ ಸುಮಾರು ೪೮೩ ದಿನಗಳ ಕಾಲ ರೈತರು ಉಪವಾಸ ಮಾಡಿದ್ದು ಸರ್ಕಾರದ ಗಮನದಲ್ಲಿದೆ. ಸರ್ಕಾರ ಈ ಎಲ್ಲ ಬೆಳವಣಿಗೆೆಗಳನ್ನು ಕಂಡು ಅಧಿಕಾರಿಗಳ ತಂಡ ರಚಿಸಿ ಪರೀವೀಕ್ಷಿಸಿ ವರದಿ ನೀಡಲು ಆದೇಶಿಸಿದ್ದಾರೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮ ವ್ಯವಸ್ಥಾಪಕ ನಿರ್ದೇಶಕ ಮೋಹನರಾಜ ಹೇಳಿದರು.

ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ತಂಡ ಕಾಲುವೆಗಳನ್ನು ವೀಕ್ಷಿಸಲು ಆಗಮಿಸಿದ ಹಿನ್ನೆಲೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.

ಕೆಬಿಜೆಎನ್‌ಎಲ್ ನ ಇಂಡಿ ಲಿಪ್ಟ್ ಇರಿಗೇಷನ್‌ದಲ್ಲಿ ವಿದ್ಯುತ್ತ ಸರಬುರಾಜು ಯಂತ್ರಗಳು ತೊಂದರೆಯಲ್ಲಿದ್ದವು. ಅದರಲ್ಲಿ ೨ ವಿದ್ಯುತ್ ಸರಬರಾಜು ಯಂತ್ರಗಳನ್ನು ಅಳವಡಿಕೆ ಮಾಡಲಾಗಿದ್ದು, ಇನ್ನು ಒಂದು ಯಂತ್ರ ಅಳವಡಿಕೆ ಮಾಡುವುದಿದೆ. ಗುತ್ತಿಬಸವಣ್ಣ ಯೋಜನೆಯಲ್ಲಿ ಪರಿಣಾಮಕಾರಿಯಾಗಿ ನೀರು ನಿರ್ವಹಣೆ ಮಾಡಲು ಜನಪ್ರತಿನಿಧಿಗಳು ಸ್ಕಾಡಾಗೇಟ್ ನಿರ್ಮಾಣ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಡಿಪಿಆರ್ ಮಾಡಲು ಅನುಮೋದನೆ ನೀಡಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಇಂಡಿ ಬ್ರಾಂಚ್ ಕೆನಾಲ್‌ಗೆ ಸಂಬಂಧಿಸಿದಂತೆ ೬೪ ಕಿ.ಮಿವರೆಗೆ ಕಾಲುವೆಗಳನ್ನು ದುರಸ್ಥಿ ಮಾಡಲಾಗಿದೆ. ಆದರೆ ಸರ್ಕಾರ ೬೪ಕೀಮಿ ಯಿಂದ ೧೭೨ ಕೀಮಿವರೆಗೆ ಕಾಲುವೆಗಳನ್ನು ವೀಕ್ಷಣೆ ಮಾಡಿ ಅದರ ಪರಿಸ್ಥಿತಿಯನ್ನು ಅವಲೋಕಿಸಿ ವರದಿ ನೀಡಲು ಆದೇಶ ಮಾಡಿದ್ದಾರೆ.

ಬಳಗಾನೂರ ಕೆರೆಗೆ ನಾರಾಯಣಪೂರ ಜಲಾಶಯದಿಂದ ಇಂಡಿ ಶಾಖಾ ಕಾಲುವೆಗಳ ಮೂಲಕ ನೀರು ಸಂಗ್ರಹವಾಗುತ್ತದೆ. ಈ ನೀರು ಇಂಡಿ ಮತ್ತು ನಾಗಠಾಣ ಗ್ರಾಮಗಳ ಹಳ್ಳಿಗಳಿಗೆ ಸುಮಾರು ೧೭೨ಕೀಮಿವರೆಗೆ ಬೇಸಿಗೆ ಕಾಲದಲ್ಲಿ ವಾರಾ ಬಂದಿಯ ಮೂಲಕ ನೀರು ಸರಬುರಾಜು ಮಾಡಲು ಕಷ್ಟ ಸಾಧ್ಯವಾಗುವುದರಿಂದ ಬಳಗಾನೂರ ಕೆರೆಯ ಹತ್ತಿರ ಈ ಯೋಜನೆಗೆ ಸಂಬಂಧಿಸಿದಂತೆ ಮೇಲ್ಸೇತುವೆಯನ್ನು ನಿರ್ಮಾಣ ಮಾಡಿ ಮತ್ತು ಅದನ್ನು ಆಧುನೀಕರಣಗೊಳಿಸಿ ಕೊನೆಯ ರೈತರಿಗೂ ಅನುಕೂಲವಾಗಬೇಕು ಎಂದು ಶಾಸಕರುಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಹಾಗೂ ಕೆಬಿಜೆಎನ್‌ಎಲ್ ಸುಮಾರು ಜಾಗೆಗಳನ್ನು ಆಲಮೇಲದಲ್ಲಿ ಕೋರ್ಟ, ಪ್ರಜಾಸೌಧ, ಅಗ್ನಿ ಶಾಮಕ ಕಛೇರಿ ಹಾಗೂ ಶಾಲೆ ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳ ನಿರ್ಮಾಣ ಮಾಡಲು ನೀಡಲಾಗಿದೆ ಎಂದರು.

ಈ ವೇಳೆ ಶಾಸಕ ಅಶೋಕ ಮನಗೂಳಿ, ಸಿಂದಗಿ,ಇಂಡಿ ಮತ್ತು ನಾಗಠಾಣ ಭಾಗದ ರೈತರು ಕೃಷಿಗೆ ಕೃಷ್ಣಾ ಭಾಗ್ಯ ಜಲನಿಗಮದ ಕಾಲುವೆಗಳನ್ನು ಅವಲಂಭಿಸಿದ್ದಾರೆ. ಕೃಷ್ಣಾ ಭಾಗ್ಯ ಜಲನಿಗಮದ ಅನೇಕ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಮತ್ತು ಕೆಬಿಜೆಎನ್‌ಎಲ್ ನ ೬೪ ಕಿ.ಮಿ ದಿಂದ ೯೭ ಕಿ.ಮಿವರೆಗೆ ಸಿಂದಗಿ ಭಾಗ ಮತ್ತು ೧೭೨ ಕಿ.ಮಿ ಕೊನೆಯ ಭಾಗದ ಕಾಲುವೆಗಳು ಸುಮಾರು ೩೦ ವರ್ಷಗಳ ಹಿಂದೆಯೇ ನಿರ್ಮಾಣವಾಗಿವೆ. ಅವುಗಳು ಸದ್ಯ ಸಂಪೂರ್ಣ ದುಸ್ಥಿತಿಗೆ ಬಂದ ಕಾರಣ ಸರಿಯಾಗಿ ನೀರು ನಿರ್ವಹಣೆಯಾಗುತ್ತಿಲ್ಲ ಎಂದು ಮತ್ತು ಗುತ್ತಿ ಬಸವಣ್ಣ ಯೋಜನೆಯಲ್ಲಿ ಸ್ಕಾಡಾಗೇಟ್ ನಿರ್ಮಾಣವಾದರೆ ನೀರು ಸಮರ್ಪಕ ನಿರ್ವಹಣೆಯಲ್ಲಿ ಕೊನೆಯ ಭಾಗದ ರೈತರಿಗು ಅನುಕೂಲವಾಗುತ್ತದೆ ಎನ್ನುವ ಹಿನ್ನಲೆಯಲ್ಲಿ ಸಿಂದಗಿ, ಇಂಡಿ ಮತ್ತು ನಾಗಠಾಣ ಮತಕ್ಷೇತ್ರದ ಶಾಸಕರುಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ ಪ್ರಯುಕ್ತ ಸರ್ಕಾರ ಸಂಭAದಿಸಿದ ಇಲಾಖೆಯ ವ್ಯವಸ್ಥಾಪಕರನ್ನು ಖುದ್ದಾಗಿ ವೀಕ್ಷಣೆ ಮಾಡಲು ಆದೇಶ ಮಾಡಿದ್ದಾರೆ. ಅಧಿಕಾರಿಗಳು ಕೆಬಿಜೆಎನ್‌ಎಲ್ ನ ಪ್ರಾರಂಭದಿಂದ ಕೊನೆಯ ಭಾಗವನ್ನು ಮತ್ತು ಗುತ್ತಿಬಸವಣ್ಣ ಏತ ನೀರಾವರಿ ಯೋಜನೆಯ ೦ ದಿಂದ ೧೪೭ ಕಿಮೀಯ ವರೆಗೆ ವೀಕ್ಷಣೆ ಮಾಡಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಅದನ್ನು ಸಚಿವ ಸಂಪುಟದಲ್ಲಿ ವಿಶ್ಲೇಷಿಸಿ ಕಾರ್ಯರೂಪಕ್ಕೆ ತರುವಲ್ಲಿ ೩ ಜನ ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

RELATED ARTICLES

Most Popular

error: Content is protected !!
Join WhatsApp Group