ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಸಿದ್ಧ – ಶಾಸಕ ಮನಗೂಳಿ

Must Read

ಸಿಂದಗಿ; ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಾಗಿದೆ ತಾಯಿ ಮಕ್ಕಳ ಸಂಬಂಧ ಹೊಂದಿದ ಇಲಾಖೆಯಾಗಿದೆ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರು ಜನಸಾಮಾನ್ಯರಿಗೆ ಇನ್ನೂ ಹೆಚ್ಚಿನ ಸೇವೆ ದೊರಕಲಿ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರಕಾರದ ಯೋಜನೆ ಮುಟ್ಟಿಸುವ ಕಾರ್ಯ ಆಗಿದೆ ಎಂದರೆ ಅಂಗನವಾಡಿ ಕಾರ್ಯಕರ್ತೆಯರಿಂದ ಮಾತ್ರ ಯೋಜನೆಗಳು ಸಫಲವಾಗಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿರುವ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‍ ಫೋನ್ ಹಾಗೂ ಸಮವಸ್ತ್ರ, ತೂಕದಯಂತ್ರ ವಿತರಿಸಿ ಮಾತನಾಡಿ, ಹಳ್ಳಿಗಳಲ್ಲಿರುವ ಜನಸಾಮಾನ್ಯರಿಗೆ ಸಮಾಜದ ಜೀವಿಯಾಗಿ ಕಳಕಳಿಯಿಂದ ಪಾರದರ್ಶಕವಾಗಿ ಮುಟ್ಟಿದೆ ಎಂದರೆ ಅದು ಅಂಗನವಾಡಿ ಕಾರ್ಯಕರ್ತೆಯರಿಂದ ಮುಟ್ಟಿದೆ ಎಂದು ಎದೆ ತಟ್ಟಿ ಹೇಳಬಹುದಾಗಿದೆ ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳು ಹಂತ ಹಂತವಾಗಿ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸುತ್ತಿದೆ ಎಂದರು

ಈ ಸಂದರ್ಭದಲ್ಲಿ ಉಪ ನಿರ್ದೇಶಕ ಕೆ. ಕೆ ಚವ್ಹಾಣ ಮಾತನಾಡಿ, ಅಂಗನವಾಡಿ ಕೇಂದ್ರ ಎಂದರೆ ಮಾಹಿತಿ ಕೇಂದ್ರವಾಗಿ ಮಾರ್ಪಟ್ಟಿದೆ. ಕಾರ್ಯಕರ್ತೆಯರ ಕೆಲಸವೆಂದರೆ ಅದು ಪುಣ್ಯದ ಕಾರ್ಯವಾಗಿದೆ ಸರಕಾರದ ಹಲವಾರು ಯೋಜನೆಗಳನ್ನು ಸಮಾಜಕ್ಕೆ ಮುಟ್ಟಿಸುವ ಕಾರ್ಯ ಅತ್ಯಂತ ಶ್ಲಾಘನೀಯ. ಅದಕ್ಕೆ ಸರಕಾರ ಇವರ ಹೋರಾಟದ ಪ್ರತಿಫಲವಾಗಿ ಸರಕಾರ ಎಚ್ಚೆತ್ತುಕೊಂಡು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ ಸಿಂದಗಿ ತಾಲೂಕಿನಲ್ಲಿ 309 ಸ್ಮಾರ್ಟಪೋನ, 309 ಜೌಷಧಿ ಕಿಟ್, 618 ಸಮವಸ್ತ್ರಗಳನ್ನು ನೀಡಲಾಗುತ್ತಿದೆ. ಅಂಗನವಾಡಿ ಹೊಸ ಕಟ್ಟಡಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮಹಿಳೆಯರ ಆರ್ಥಿಕ ಸಬಲಿಕರಣಕ್ಕೆ ಗೌರವ ಧನ ಹೆಚ್ಚಳ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸುವ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗಿದೆ ಎಂದು ತಿಳಿಸಿದರು.

ಕಾರ್ಯಕರ್ತೆ ಪ್ರತಿಭಾ ಕುರುಡೆ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಸಮಾಜಕ್ಕೆ ತಿಳಿದಿರುವ ಸಂಗತಿ ಅವರ ಸೇವೆ ಗೆ ತಕ್ಕಂತೆ ಗೌರವಧನ ನೀಡಬೇಕು ಮತ್ತು ಡಿ.ದರ್ಜೆ ನೌಕರರೆಂದು ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್‍ಬುಕ್, ಮಕ್ಕಳ ಪ್ರಪಂಚ ಪುಸ್ತಕ, ಬೇಟಿ ಪಢಾವೋ, ಬೇಟಿ ಬಛಾವೋ ಲಾಂಛನ ಬಿಡುಗಡೆ ಮಾಡಿದರು.
ಸಹಾಯಕ ಸಿಡಿಪಿಓ ಅಧಿಕಾರಿ ಎಸ್.ಎನ್.ಕೊರವಾರ, ಸರಸ್ವತಿ ಮಠ, ರಜತ್ ತಾಂಬೆ. ಭೀಮು ವಾಲಿಕಾರ, ಶಾಂತೂ ರಾಣಾಗೋಳ ವೇದಿಕೆ ಮೇಲಿದ್ದರು.
ತಾಲೂಕಾ ಸಿಡಿಪಿಓ ಶಂಭುಲಿಂಗ ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ಸುಬೆದಾರ ನಿರೂಪಿಸಿದರು ಜಯಶ್ರೀ ದೊಡಮನಿ ವಂದಿಸಿದರು

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group